Breaking News
recent

ಬಹುಭಾಷಾ ಚಿತ್ರ ನಿರ್ಮಾಣಕ್ಕೆ ಕೈಹಾಕಿದ ಕನಕಪುರ ಶ್ರೀನಿವಾಸ್

'ಭಜರಂಗಿ ಭಾಯ್ ಜಾನ್' ಮತ್ತು 'ಬಾಹುಬಲಿ' ಚಿತ್ರಗಳ ವಿತರಣೆ ಹಕ್ಕು ಪಡೆದು ಯಶಸ್ಸು ಕಂಡಿರುವ ಆರ್.ಎಸ್.ಪ್ರೊಡಕ್ಷನ್ಸ್ ನಿರ್ಮಾಣ ಸಂಸ್ಥೆಯ ಕನಕಪುರ ಶ್ರೀನಿವಾಸ್ ಮತ್ತು ಕೆ.ಪಿ.ಶ್ರೀಕಾಂತ್ ಫುಲ್ ಝೂಮ್ ನಲ್ಲಿದ್ದಾರೆ.
ಬಹುಭಾಷಾ ಚಿತ್ರ ನಿರ್ಮಾಣಕ್ಕೆ ಕೈಹಾಕಿದ ಕನಕಪುರ ಶ್ರೀನಿವಾಸ್

ಅವರ ನಿರ್ಮಾಣದಲ್ಲಿ ಪವನ್ ಒಡೆಯರ್ ನಿರ್ದೇಶನದ 'ಜೆಸ್ಸಿ' ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದೆ. ಆರ್.ಎಸ್.ಪ್ರೊಡಕ್ಷನ್ ಬ್ಯಾನರ್ ನಲ್ಲಿನ ಯೋಗರಾಜ್ ಭಟ್ ನಿರ್ದೇಶನದ 'ದನ ಕಾಯೋನು' ಚಿತ್ರೀಕರಣ ಪೂರ್ಣಗೊಂಡಿದೆ.

ನಿರ್ದೇಶಕ ಚೇತನ್ ಮತ್ತು ಧ್ರುವ ಸರ್ಜಾ ಕಾಂಬಿನೇಷನ್ ನಲ್ಲಿ 'ಬಹದ್ದೂರ್' ಚಿತ್ರ ನಿರ್ಮಾಣ ಮಾಡಿದ್ದ ಇದೇ ಸಂಸ್ಥೆ ಇದೀಗ ಅದೇ ಚೇತನ್ ಮತ್ತು ಧ್ರುವ ಸರ್ಜಾಗಾಗಿ 'ಭರ್ಜರಿ' ಚಿತ್ರ ನಿರ್ಮಾಣ ಮಾಡುತ್ತಿದೆ.

ಈ ಮೂರು ಬಿಗ್ ಬಜೆಟ್ ಚಿತ್ರಗಳ ಜೊತೆಗೆ ಆರ್.ಎಸ್.ಪ್ರೊಡಕ್ಷನ್ಸ್ ಹೊಸ ಸಾಹಸಕ್ಕೆ ಕೈಹಾಕಿದೆ. ಅದೇನೆಂದರೆ, ನಾಗಶೇಖರ್ ಕಥೆ-ಚಿತ್ರಕಥೆ ಬರೆದು ಸಂಭಾಷಣೆ-ನಿರ್ದೇಶನ ಮಾಡುವುದಕ್ಕೆ ಹೊರಟಿರುವ ಬರೋಬ್ಬರಿ ನಾಲ್ಕು ಭಾಷೆಗಳಲ್ಲಿ ರೆಡಿಯಾಗುವ 'ಗಡಿಯಾರ' ಚಿತ್ರದ ಚಿತ್ರೀಕರಣಕ್ಕೆ ಚಾಲನೆ ನೀಡಲಿದೆ.

ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ 'ಗಡಿಯಾರ' ಏಕಕಾಲಕ್ಕೆ ರೆಡಿಯಾಗಲಿದೆ. ದಕ್ಷಿಣ ಭಾರತದ ಖ್ಯಾತ ನಟಿ ತಾಪ್ಸಿ ಈ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ನಾಯಕ ಪಾತ್ರಕ್ಕೆ ಯಾರೂ ಇನ್ನೂ ಕನ್ಫರ್ಮ್ ಆಗಿಲ್ಲ.
Fresh Kannada

Fresh Kannada

No comments:

Post a Comment

Google+ Followers

Powered by Blogger.