Breaking News
recent

ಫೋರ್ಬ್ಸ್ ಪಟ್ಟಿಯಲ್ಲಿ ಸ್ಯಾಂಡಲ್ ವುಡ್ ತಾರೆಯರ ರಂಗು!

ಫೋರ್ಬ್ಸ್ ನಿಯತಕಾಲಿಕೆ ಪ್ರಕಟಿಸುವ 100 ಪ್ರಭಾವಿಗಳ ಪಟ್ಟಿಯಲ್ಲಿ ನಮ್ಮ ಕನ್ನಡ ಚಿತ್ರರಂಗದ ತಾರೆಯರಾದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಕಿಚ್ಚ ಸುದೀಪ್, ನಟಿ ಪ್ರಿಯಾಮಣಿ ಸೇರಿದಂತೆ ಐವರು ಸ್ಥಾನ ಪಡೆದುಕೊಂಡಿದ್ದಾರೆ.

ಕ್ರೀಡೆ, ಮನರಂಜನೆ ಹಾಗೂ ಉದ್ಯಮಕ್ಕೆ ಸಂಬಂಧಿಸಿದಂತೆ ವರ್ಷದ ಪ್ರಭಾವಿ 100 ವ್ಯಕ್ತಿಗಳ ಪಟ್ಟಿಯನ್ನು ಫೋರ್ಬ್ಸ್ ಪ್ರಕಟಿಸುತ್ತದೆ. ಈ ಬಾರಿ ಅದರಲ್ಲಿ ಕನ್ನಡ ಇಂಡಸ್ಟ್ರಿಯ ಪುನೀತ್‌ ರಾಜ್ ಕುಮಾರ್, ಕಿಚ್ಚ ಸುದೀಪ್, ಪ್ರಿಯಾಮಣಿ, ಸಂಗೀತ ನಿರ್ದೇಶಕ ಕಮ್ ಗಾಯಕ ರಘು ದೀಕ್ಷಿತ್ ಹಾಗೂ ಗಾಯಕ ವಿಜಯ್ ಪ್ರಕಾಶ್ ಅವರು ಸ್ಥಾನ ಪಡೆದುಕೊಂಡಿದ್ದಾರೆ.
ಡಿಸೆಂಬರ್ 11, 2015 ರಂದು ಫೋರ್ಬ್ಸ್ ನ 100 ಪ್ರಭಾವಿಗಳ ಪಟ್ಟಿ ಅಧಿಕೃತವಾಗಿ ಪ್ರಕಟಗೊಳ್ಳಲಿದ್ದು, ಪಟ್ಟಿಯಲ್ಲಿ ಯಾರು ಯಾರು, ಯಾವ ಸ್ಥಾನದಲ್ಲಿದ್ದಾರೆ ಎಂದು ಖಚಿತವಾಗಿ ತಿಳಿಯಲಿದೆ.
2013 ರಲ್ಲಿ ಪ್ರಕಟವಾದ ಪ್ರಭಾವಿಗಳ ಪಟ್ಟಿಯಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು 62 ಮತ್ತು 65ನೇ ಸ್ಥಾನ ಪಡೆದಿದ್ದರು. ತದನಂತರ 2014 ರಲ್ಲಿ ಕನ್ನಡದ ಯಾವುದೇ ನಟ-ನಟಿಯರು ಈ ಪಟ್ಟಿಯಲ್ಲಿ ಸ್ಥಾನ ಪಡೆದಿರಲಿಲ್ಲ.
ಸಾಮಾನ್ಯವಾಗಿ ಈ ಹಿಂದೆ ಫೋರ್ಬ್ಸ್ ಮ್ಯಾಗಜೀನ್ ಕೇವಲ ಬಾಲಿವುಡ್ -ಟಾಲಿವುಡ್ - ಕಾಲಿವುಡ್ ಸೆಲೆಬ್ರಿಟಿಗಳ ಹೆಸರುಗಳನ್ನು ಮಾತ್ರ ಆಯ್ಕೆ ಮಾಡುತ್ತಿತ್ತು. ಆದರೆ ಈ ಬಾರಿ ಕನ್ನಡದ ತಾರೆಯರಿಗೂ ಆದ್ಯತೆ ನೀಡಿದ್ದು, ಈ ಸುದ್ದಿ ಕನ್ನಡ ಸಿನಿಪ್ರೀಯರಿಗೆ ಈ ವರ್ಷದ ದೀಪಾವಳಿಗೆ ಧಮಾಕೇದಾರ್ ಉಡುಗೊರೆ ನೀಡಿದಂತಾಗಿದೆ.
Fresh Kannada

Fresh Kannada

No comments:

Post a Comment

Google+ Followers

Powered by Blogger.