Breaking News
recent

ಪ್ರಜ್ವಲ್ ದೇವರಾಜ್ ದಂಪತಿಗಳು ಹನಿಮೂನ್ ಗೆ ಎಲ್ಲಿ ಹೋದ್ರು ಗೊತ್ತಾ?

ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅವರು ತಮ್ಮ ಬಾಲ್ಯದ ಗೆಳತಿ ರಾಗಿಣಿ ಚಂದ್ರನ್ ಅವರನ್ನು ಅದ್ಧೂರಿಯಾಗಿ ಮದುವೆಯಾದ ನಂತರ ಅವರು ಹನಿಮೂನ್ ಗೆ ಎಲ್ಲಿ ಹೋಗುತ್ತಾರೆ ಅಂತ ಎಲ್ಲರಿಗೂ ಪ್ರಶ್ನೆ ಅಗಿತ್ತು. ಅದಕ್ಕೆ ಪ್ರಜ್ವಲ್ ಅವರು ಉತ್ತರ ಕೂಡ ನೀಡಿದ್ದಾರೆ.
dynamic prince prajwal devaraj and  ragini

ಹೌದು ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅವರು ತನ್ನ ಮುದ್ದಿನ ಮನದನ್ನೆಯ ಜೊತೆ ಹನಿಮೂನ್ ಗೆಂದು ಸೀದಾ ಯುರೋಪ್ ಗೆ ಹಾರಿದ್ದಾರೆ.


ಈಗಾಗಲೇ ಯುರೋಪ್ ಗೆ ಫ್ಲೈ ಮಾಡಿರುವ ನೂತನ ವಧು-ವರರು, ಹೊರಡುವ ಮುಂಚೆ ಸ್ಯಾಂಡಲ್ ವುಡ್ ನ ತನ್ನ ಗೆಳೆಯರು ಅವಿನಾಶ್, ದಿಗಂತ್, ಗೋಲ್ಡನ್ ಸ್ಟಾರ್ ಗಣೇಶ್, ರವಿಶಂಕರ್, ಜಗ್ಗೇಶ್ ಮುಂತಾದವರೊಂದಿಗೆ, ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿ, ಸಣ್ಣ ಪಾರ್ಟಿ ಮಾಡುವ ಮೂಲಕ ಇನ್ನು ಖುಷಿ ಹೆಚ್ಚಿಸಿದ್ದಾರೆ.


ಈಗಾಗಲೇ ಡೈನಾಮಿಕ್ ಪ್ರಿನ್ಸ್ 'ಭುಜಂಗ' ಚಿತ್ರದ ಕೆಲಸಗಳನ್ನು ಸದ್ದಿಲ್ಲದೇ ಮುಗಿಸಿದ್ದು, ಸಿನಿಮಾ ಸದ್ಯದಲ್ಲೇ ತೆರೆ ಕಾಣಲಿದೆ. ಜೊತೆಗೆ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಅವರ ಜೊತೆ ಮಾಡುತ್ತಿರುವ ಹೊಸ ಪ್ರಾಜೆಕ್ಟ್ 'ದಿಲ್ ಕಾ ರಾಜ' ಸಿನಿಮಾದ ಶೂಟಿಂಗ್ ಕೂಡ ಪ್ರಜ್ವಲ್ ದೇವರಾಜ್ ಅವರು ಹನಿಮೂನ್ ನಿಂದ ಹಿಂತಿರುಗಿ ಬಂದಮೇಲೆ ನಡೆಯಲಿದೆ.


ಡೈನಾಮಿಕ್ ಫ್ಯಾಮಿಲಿಯ ದೊಡ್ಡ ಕುಡಿ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅವರ ಬಾಲ್ಯದ ಗೆಳತಿ ರಾಗಿಣಿ ಚಂದ್ರನ್ ಅವರೊಂದಿಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ, ಗಣ್ಯರ ಸಮ್ಮುಖದಲ್ಲಿ ಅಕ್ಟೋಬರ್ 25 ರಂದು ಅದ್ಧೂರಿಯಾಗಿ ಮದುವೆಯಾಗಿದ್ದರು.
Fresh Kannada

Fresh Kannada

No comments:

Post a Comment

Google+ Followers

Powered by Blogger.