Breaking News
recent

ವೀಕೆಂಡ್ ಅಂತ ಮತ್ತೆ ಬಂದ್ರು, ರಮೇಶ್ ಅರವಿಂದ್

ನಟ ಕಮ್ ನಿರ್ದೇಶಕ ರಮೇಶ್ ಅರವಿಂದ್ ಅವರು ಮತ್ತೆ ಕಿರುತೆರೆ ಕ್ಷೇತ್ರಕ್ಕೆ ವಾಪಸಾಗುತ್ತಿದ್ದಾರೆ. ಹೌದು ನೀವು ಬಹಳ ದಿನಗಳಿಂದ ಕಾಯುತ್ತಿದ್ದ ಆ ಶುಭ ಘಳಿಗೆ ಹತ್ತಿರವಾಗುತ್ತಿದೆ.
ವೀಕೆಂಡ್ ಅಂತ ಮತ್ತೆ ಬಂದ್ರು, ರಮೇಶ್ ಅರವಿಂದ್

ಅದೇನಪ್ಪಾ ಅಂದ್ರೆ, ಚಂದನವನದ ನಟ ಕಮ್ ನಿರ್ದೇಶಕ ರಮೇಶ್ ಅರವಿಂದ್ ಅವರು ಫೇಮಸ್ ರಿಯಾಲಿಟಿ ಶೋ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದ ಮೂಲಕ ಮತ್ತೆ ಕಿರುತೆರೆ ಸ್ಕ್ರೀನ್ ಮೇಲೆ ಮಿಂಚಲಿದ್ದಾರೆ.

ಈಗಾಗಲೇ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದ ಸೆಕೆಂಡ್ ಸೀಸನ್ ಗೆ ಎಲ್ಲಾ ತಯಾರಿ ನಡೆಯುತ್ತಿದ್ದು, ಕನ್ನಡದ ನಟ-ನಿರ್ದೇಶಕ ರಮೇಶ್ ಅವರು ಮತ್ತೆ ಕಿರುತೆರೆಗೆ ವಾಪಸಾಗುತ್ತಿದ್ದಾರೆ.

ಇನ್ನು ಸ್ಯಾಂಡಲ್ ವುಡ್ ಕ್ಷೇತ್ರದ ಸ್ಟಾರ್ ಗಳು ಸೇರಿದಂತೆ ಇನ್ನಿತರೇ ಕ್ಷೇತ್ರಗಳಲ್ಲಿ ಬಹಳಷ್ಟು ಸಾಧನೆ ಮಾಡಿದ ಮಹನಿಯರನ್ನು ನಟ ರಮೇಶ್ ಅವರು ವೀಕೆಂಡ್ ನಲ್ಲಿ ಕರೆತರುವ ಮೂಲಕ ಅವರೆಲ್ಲರ ಸಾಧನೆಯನ್ನು ಇಡೀ ಜಗತ್ತಿಗೆ ತೋರಿಸಿ ಯಶಸ್ವಿಯಾಗಿರುವ ವಿಷಯ ನಿಮಗೆ ತಿಳಿದೇ ಇದೆ.

ಇದೀಗ ಮತ್ತೊಮ್ಮೆ ಅದೇ ಸಾಹಸಕ್ಕೆ ಕೈ ಹಾಕಿದ್ದಾರೆ ನಟ ರಮೇಶ್ ಅರವಿಂದ್ ಅವರು. ಇದು ಕೇವಲ ಮಾತುಕತೆ ಮಾತ್ರವಲ್ಲದೇ, ಯಾವ ವ್ಯಕ್ತಿಯನ್ನು ಕರೆಸಿದ್ದಾರೋ ಅವರ ಇಡೀ ಫ್ಯಾಮಿಲಿ ಸೇರಿದಂತೆ, ಬಾಲ್ಯದ ಕೆಲವು ಘಟನೆಗಳನ್ನು, ಮರೆತು ಹೋದ ಆ ದಿನಗಳನ್ನು ನಟ ರಮೇಶ್ ಅವರು ಈ ಕಾರ್ಯಕ್ರಮದ ಮೂಲಕ ನೆನಪು ಮಾಡಿಸುತ್ತಿದ್ದರು.

ಸ್ಯಾಂಡಲ್ ವುಡ್ ಟಾಪ್ ಸ್ಟಾರ್ ಗಳಾದ ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ಯಶ್, ರಾಧಿಕಾ ಪಂಡಿತ್, ಉಪೇಂದ್ರ, ರವಿಚಂದ್ರನ್, ಅರ್ಜುನ್ ಸರ್ಜಾ, ಯೋಗರಾಜ್ ಭಟ್, ಪಬ್ಲಿಕ್ ಟಿವಿ ನಿರೂಪಕ ರಂಗನಾಥ್ ಮುಂತಾದವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರೇಕ್ಷಕರನ್ನು ರಂಜಿಸುವುದರ ಜೊತೆ ಜೊತೆ ತಮ್ಮ ಬಗ್ಗೆ ಹಂಚಿಕೊಂಡು, ಕಳೆದು ಹೋದ ದಿನಗಳನ್ನು ನೆನಪಿಸಿಕೊಂಡು ಸಂಭ್ರಮ ಪಟ್ಟಿದ್ದರು.

ಒಟ್ನಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ವೀಕೆಂಡ್ ವಿತ್ ರಮೇಶ್' ಜನಮನ್ನಣೆ ಗಳಿಸಿ ನಟ ರಮೇಶ್ ಅರವಿಂದ್ ಅವರು ವೀಕ್ಷಕರನ್ನು ಮೋಡಿ ಮಾಡಿದ್ದರು. ಇದೀಗ ಮತ್ತೆ ರಮೇಶ್ ಅವರು ವಾಪಸಾಗಿದ್ದು, ಮತ್ತೊಮ್ಮೆ ವೀಕ್ಷಕರನ್ನು ಮೋಡಿ ಮಾಡಲಿದ್ದಾರೆ.
Fresh Kannada

Fresh Kannada

No comments:

Post a Comment

Google+ Followers

Powered by Blogger.