Breaking News
recent

ಹುಚ್ಚ ವೆಂಕಟ್ ವಾಪಸ್ ಕರೆಸುವಂತೆ ಪ್ರತಿಭಟನೆ

ಮೈಸೂರು/ಹಾವೇರಿ: ಪ್ರತಿಸ್ಪರ್ಧಿಯ ಮೇಲೆ ಹಲ್ಲೆ ನಡೆಸಿದ ಹಿನ್ನೆಲೆಯಲ್ಲಿ ಬಿಗ್ ಬಾಸ್‍ನಿಂದ ಕಿಕ್ ಔಟ್ ಆದ ಹುಚ್ಚ ವೆಂಕಟ್ ಪರವೂ ಪ್ರತಿಭಟನೆ ನಡೆಯಿತು. ಹುಚ್ಚ ವೆಂಕಟ್‍ನನ್ನು ಬಿಗ್‍ಬಾಸ್ ಮನೆಯಿಂದ ಹೊರ ಹಾಕಿದ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಹುಚ್ಚ ವೆಂಕಟ್ ಅಭಿಮಾನಿಗಳ ಪ್ರತಿಭಟನೆ ನಡೆಸಿದರು.
ಹುಚ್ಚ ವೆಂಕಟ್ ವಾಪಸ್ ಕರೆಸುವಂತೆ ಪ್ರತಿಭಟನೆ

ಹುಚ್ಚ ವೆಂಕಟ್‍ನನ್ನು ಮತ್ತೆ ವಾಪಸ್ ಕರೆಸಿಕೊಳ್ಳಲು ಒತ್ತಾಯಿಸಿ, ಹುಚ್ಚ ವೆಂಕಟ್ ಪರ ಅಭಿಮಾನಿಗಳು ಘೋಷಣೆ ಕೂಗಿದರು. ಇದೇ ವೇಳೆ ಸ್ಪರ್ಧಿಗಳಾದ ರೆಹಮಾನ್, ರವಿ ಮೂರೂರು ಹಾಗೂ ಚಂದನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಹಾವೇರಿಯಲ್ಲೂ ಸಿಟ್ಟು: ಬಿಗ್ ಬಾಸ್ ಮನೆಯಿಂದ ಹೊರ ಹಾಕಿದ ಹಿನ್ನೆಲೆಯಲ್ಲಿ ಅಭಿಮಾನಿಗಳು ಪ್ರತಿಭಟಿಸಿದರು. ಹಾವೇರಿಯ ಜೆ.ಪಿ.ವೃತ್ತದಲ್ಲಿ ಹುಚ್ಚ ವೆಂಕಟ್ ಅಭಿಮಾನಿಗಳು ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು. ಹುಚ್ಚ ವೆಂಕಟ್‍ನನ್ನು ಮತ್ತೆ ಬಿಗ್ ಬಾಸ್ ಮನೆಗೆ ವಾಪಸ್ ಕರೆಸಿಕೊಳ್ಳಬೇಕು ಎಂದು ಅಭಿಮಾನಿಗಳು ಒತ್ತಾಯಿಸಿದರು.
Fresh Kannada

Fresh Kannada

No comments:

Post a Comment

Google+ Followers

Powered by Blogger.