Breaking News
recent

ಪೂಜಾ ನಾಟೌಟ್ – ಸೀಕ್ರೆಟ್ ರೂಮಲ್ಲಿರ್ತಾರೆ ಪೂಜಾ

ಬಿಗ್‍ಬಾಸ್ ಕನ್ನಡದ ಸೀಸನ್ 3ರಲ್ಲಿ ಇದೇ ಮೊದಲ ಬಾರಿಗೆ ಸ್ಪರ್ಧಿಯೊಬ್ಬರು ಎಲಿಮಿನೇಟ್ ಆಗಿದ್ದರೂ, ಸೀಕ್ರೆಟ್ ರೂಮಿನಲ್ಲಿದ್ದು ಮತ್ತೆ ಬಿಗ್‍ಬಾಸ್ ಮನೆಯೊಳಗೆ ಪ್ರವೇಶ ಮಾಡುವ ಅವಕಾಶ ಸಿಕ್ಕಿದೆ.

ಹೌದು, ಈ ವಾರದ ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ಎಲಿಮಿನೇಟ್ ಆಗಿ ಮನೆಯಿಂದ ಹೊರಬಂದಿದ್ದ ಪೂಜಾ ಗಾಂಧಿ ಈಗ ಸೀಕ್ರೆಟ್ ರೂಮಿನಲ್ಲಿದ್ದಾರೆ. ಈ ಬಾರಿ ನಾಮಿನೇಟ್ ಆದವರಲ್ಲಿ ಪೂಜಾ ಔಟ್ ಆಗುತ್ತಾರೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಆದರೆ ಇದೀಗ ಪೂಜಾ ಎಲಿಮಿನೇಷನ್‍ಗೆ ಹೊಸ ಟ್ವಿಸ್ಟ್ ಸಿಕ್ಕಿದ್ದು ಅವರು ಕೆಲ ದಿನಗಳ ನಂತರ ಮತ್ತೆ ಮನೆಯೊಳಗೆ ಹೋಗಲಿದ್ದಾರೆ.
ಇಷ್ಟು ದಿನ ಪೂಜಾ ಜೊತೆ ಆತ್ಮೀಯವಾಗಿದ್ದವರು ಮನೆಯಿಂದ ಹೊರಹೋದ ಮೇಲೆ ಅವರ ಬಗ್ಗೆ ಏನೇನು ಮಾತನಾಡಬಹುದು, ಪೂಜಾರ ಬಗ್ಗೆ ಅವರಿಗಿದ್ದ ನಿಜವಾದ ಅಭಿಪ್ರಾಯವೇನು ಎಂದು ಈಗ ಪೂಜಾ ಸೀಕ್ರೆಟ್ ರೂಮಿನಲ್ಲಿ ಇದ್ದುಕೊಂಡು ತಿಳಿದುಕೊಳ್ಳಲಿದ್ದಾರೆ. ಅಲ್ಲದೆ ಅಯ್ಯಪ್ಪ ಪೂಜಾ ಇಲ್ಲದೆ ವಿರಹ ವೇದನೆ ಅನುಭವಿಸುತ್ತಾರಾ ಇಲ್ಲ ಬಿಂದಾಸ್ ಆಗೇ ಇದ್ದುಬಿಡುತ್ತಾರಾ ಎಂಬುದು ಕೂಡ ಪೂಜಾಗೆ ಸದ್ಯದಲ್ಲೇ ಮನದಟ್ಟಾಗಲಿದೆ.
Fresh Kannada

Fresh Kannada

No comments:

Post a Comment

Google+ Followers

Powered by Blogger.