Breaking News
recent

ಫೇಸ್‍ಬುಕ್ ಪೋಸ್ಟ್ ನಿರ್ಬಂಧ: ಭಾರತದಿಂದಲೇ ಅತಿ ಹೆಚ್ಚು ವಿನಂತಿ

ನವದೆಹಲಿ: ಅಮೆರಿಕ ಬಿಟ್ಟರೆ ಅತಿ ಹೆಚ್ಚು ಫೇಸ್‍ಬುಕ್ ಬಳಕೆದಾರರಿರುವ ದೇಶವಾಗಿ ಈಗಾಗಲೇ ಹೊರಹೊಮ್ಮಿದೆ. ಇದರ ಜೊತೆಗೆ ಈಗ ವಿಶ್ವದಲ್ಲೇ ಅತಿ ಹೆಚ್ಚು ಫೇಸ್‍ಬುಕ್ ವಿಷಯಗಳಿಗೆ ನಿರ್ಬಂಧ ಹೊಂದಿದ ದೇಶಗಳ ಪೈಕಿಯೂ ಮೊದಲ ಸ್ಥಾನ ಗಳಿಸಿದೆ.
ಫೇಸ್‍ಬುಕ್ ಪೋಸ್ಟ್ ನಿರ್ಬಂಧ: ಭಾರತದಿಂದಲೇ ಅತಿ ಹೆಚ್ಚು ವಿನಂತಿ

ಈ ವರ್ಷ ಭಾರತ ಒಟ್ಟು 15,155 ವಿಷಯಗಳನ್ನು ತೆಗೆದು ಹಾಕಬೇಕೆಂದು ಫೇಸ್‍ಬುಕ್‍ನಲ್ಲಿ ಕೇಳಿಕೊಂಡಿದೆ. ಭಾರತ ಅಲ್ಲದೇ ಒಟ್ಟು 92 ದೇಶಗಳು ಬಳಕೆದಾರರ ಪೋಸ್ಟ್ ಗಳನ್ನು ಕಿತ್ತು ಹಾಕುವಂತೆ ಕೇಳಿಕೊಂಡಿದ್ದಾರೆ ಎಂದು ಫೇಸ್‍ಬುಕ್ ತಿಳಿಸಿದೆ.
2014ರ ಜೂನ್ ಅವಧಿಯಲ್ಲಿ 5,832 ಪೋಸ್ಟ್ ಗಳನ್ನು ಡಿಲೀಟ್ ಮಾಡಬೇಕೆಂದು ಭಾರತ ಸರ್ಕಾರ ಕೇಳಿಕೊಂಡಿತ್ತು. ಫೇಸ್‍ಬುಕ್ ಗ್ರಾಹಕರ ಗೌಪ್ಯತೆಯನ್ನು ಕಾಯ್ದುಕೊಂಡಿರುತ್ತದೆ. ಆದರೆ ಕೆಲವೊಮ್ಮೆ ಸಮಾಜಕ್ಕೆ ಧಕ್ಕೆ ತರುವಂತಹ ವಿಷಯಗಳನ್ನು ಬಳಕೆದಾರ ಪೋಸ್ಟ್ ಮಾಡಿದ್ದರೆ ಭಾರತದ ಸರ್ಕಾರದ ಪರವಾಗಿ ಕಂಪ್ಯೂಟರ್ ಎಮರ್ಜನ್ಸಿ ರೆಸ್ಪಾನ್ಸ್ ಟೀಂ(ಸಿಇಆರ್‍ಟಿ) ಫೇಸ್‍ಬುಕ್ ಜೊತೆ ಸಂಪರ್ಕಿಸಿ ಆ ಪೋಸ್ಟ್ ಗಳನ್ನು ಡಿಲೀಟ್ ಮಾಡಿಸುತ್ತದೆ.
ಭಾರತದ ನಂತರ ಟರ್ಕಿಯಿಂದ 4,496 ವಿನಂತಿಗಳು ಬಂದಿದ್ದರೆ, ಫ್ರಾನ್ಸ್ ನಿಂದ 295 ವಿನಂತಿಗಳು ಫೇಸ್‍ಬುಕ್‍ಗೆ ಬಂದಿದೆ.
Fresh Kannada

Fresh Kannada

No comments:

Post a Comment

Google+ Followers

Powered by Blogger.