Breaking News
recent

ಅಮೀರ್ ಹೇಳಿಕೆಗೆ ಟ್ವಿಟ್ಟರ್‍ನಲ್ಲಿ ಟಾಂಗ್ ಕೊಟ್ಟ ಉಪೇಂದ್ರ

ಬಾಲಿವುಡ್ ನಟ ಅಮೀರ್ ಖಾನ್ ಅವರ ಅಸಹಿಷ್ಣುತೆ ಬಗೆಗಿನ ಹೇಳಿಕೆ ದೇಶದೆಲ್ಲೆಡೆ ಭಾರಿ ಚರ್ಚೆಗೆ ಕಾರಣವಾಗುತ್ತಿದೆ. ಇದೀಗ ಸ್ಯಾಂಡಲ್‍ವುಡ್ ನಟ ರಿಯಲ್ ಸ್ಟಾರ್ ಉಪೇಂದ್ರ ಟ್ವಿಟ್ಟರ್‍ನಲ್ಲಿ ಟ್ವೀಟ್ ಮಾಡುವ ಮೂಲಕ ಅಮೀರ್ ಅವರಿಗೆ ಟಾಂಗ್ ಕೊಟ್ಟಿದ್ದಾರೆ.
ಅಮೀರ್ ಹೇಳಿಕೆಗೆ ಟ್ವಿಟ್ಟರ್‍ನಲ್ಲಿ ಟಾಂಗ್ ಕೊಟ್ಟ ಉಪೇಂದ್ರ

”ತಲೆ ಕೆಡಿಸಿ ಕೊಳ್ಳಬೇಡಿ ಅಮೀರ್ ಮತ್ತು ಶಾರುಖ್ ಖಾನ್ ನಿಮ್ಮ ಮುಂದಿನ ಚಿತ್ರ ಸೂಪರ್ ಹಿಟ್ ಆಗುತ್ತದೆ. ಭಾರತೀಯರು ಎಷ್ಟು ಸಹಿಷ್ಣುತೆ ಹೊಂದಿದ್ದಾರೆ ಎನ್ನುವುದನ್ನು ಸಾಬೀತು ಮಾಡುತ್ತಾರೆ” ಎಂದು ಉಪೇಂದ್ರ ಟ್ವೀಟ್ ಮಾಡಿದ್ದಾರೆ.
”ನಾನು ಮೆಚ್ಚಿಕೊಳ್ಳುವ ನಟರಲ್ಲಿ ನೀವು ಒಬ್ಬರು. ದೇಶದಲ್ಲಿ ಅಸಹಿಷ್ಣುತೆ ಇದೆ ಎನ್ನುವುದೇ ಆದರೆ ಅದನ್ನು ಸರಿಪಡಿಸುವ ಕೆಲಸ ಹೀರೋ ಆಗಿ ಮಾಡಬೇಕು. ಅದನ್ನು ಬಿಟ್ಟು ದೇಶಬಿಟ್ಟು ಹೋಗುವ ಮಾತಾಡಿದರೆ ಅದು ಹೇಡಿತನ. ನೀವೊಬ್ಬ ಸುದೀರ್ಘ ನಾಯಕನಾಗಿ ಉಳಿಯಲ್ಲ ಎಂದು ಹೇಳಲು ವಿಷಾದಿಸುತ್ತೇನೆ” ಎಂದು ಉಪೇಂದ್ರ ತಮ್ಮ ಟ್ವೀಟ್‍ನಲ್ಲಿ ತಿಳಿಸಿದ್ದಾರೆ.

Dear @aamir_khan, you were one of the heroes whom I admired, if there is any intolerance as a hero you need to stand-up and try resolve it

— Upendra (@realupendra) November 24, 2015
But if you runaway from it then you will be known as a coward, regret to say @aamir_khan, you are no longer a hero for me n many other fans

— Upendra (@realupendra) November 24, 2015
Fresh Kannada

Fresh Kannada

No comments:

Post a Comment

Google+ Followers

Powered by Blogger.