Breaking News
recent

ಹುಚ್ಚ ವೆಂಕಟ್ ಹೊರ ಕಳಿಸುವ ಮುನ್ನ ಸುದೀಪ್ ಹೇಳಿದ್ದೇನು..?

– ನಮ್ಮ ಮನೆಯ ಹೆಣ್ಮಕ್ಳನ್ನು ನೋಡೋದಿಕ್ಕೆ ಹೊರಗಡೆ ಇರೋ ಗಂಡಸು ಬೇಕಾಗಿಲ್ಲ!
– ಮಾತೆತ್ತಿದ್ದರೆ ಎಕ್ಡಾ ಎಕ್ಡಾ ಅಂತೀರಿ. ಏನ್ರೀ ಎಕ್ಡಾ..? ಅದು ಕಾಲಲ್ಲಿರಬೇಕು!
– ವಾರದ ಕಥೆ ಕಿಚ್ಚನ ಜೊತೆಯಲ್ಲಿ ಅಚ್ಚರಿಯ ಸರಮಾಲೆ
ಹುಚ್ಚ ವೆಂಕಟ್ ಹೊರ ಕಳಿಸುವ ಮುನ್ನ ಸುದೀಪ್ ಹೇಳಿದ್ದೇನು..?
ಹುಚ್ಚ ವೆಂಕಟನ ಹೊರಕಳಿಸುವ ಮುನ್ನ ಸುದೀಪ್ ಅವರಿಂದ ಹುಚ್ಚ ವೆಂಕಟ್ ಗೆ ಬುದ್ಧಿಮಾತು. ಚಿತ್ರ ಕೃಪೆ: ಕಲರ್ಸ್ ಕನ್ನಡ
ಅನಿರೀಕ್ಷಿತ ಬೆಳವಣಿಗೆಯಲ್ಲಿ ಬಿಗ್ ಬಾಸ್ 3 ಮನೆಯಿಂದ ಹುಚ್ಚ ವೆಂಕಟ್ ಹೊರ ಬಿದ್ದಿದ್ದಾರೆ. ಹುಚ್ಚ ವೆಂಕಟ್ ತನ್ನ ಇನ್ನೊಬ್ಬ ಪ್ರತಿಸ್ಪರ್ಧಿ ರವಿ ಮೂರೂರು ಮೇಲೆ ಹಲ್ಲೆ ನಡೆಸಿದ್ದಕ್ಕೆ ಬಿಗ್ ಬಾಸ್ ಹೌಸ್‍ನಿಂದ ಔಟ್ ಆಗಿದ್ದಾರೆ.
ವೆಂಕಟ್ ಅವರನ್ನು ಹೊರಗೆ ಕಳಿಸುವ ಮುನ್ನ ಕಿಚ್ಚ ಸುದೀಪ್ ಹುಚ್ಚ ವೆಂಕಟ್‍ಗೆ ಬುದ್ಧಿ ಮಾತು ಹೇಳಿದ್ದಾರೆ. ಕಿಚ್ಚ ಹುಚ್ಚ ವೆಂಕಟ್‍ಗೆ ಏನ್ ಹೇಳಿದ್ರು ಅಂತಾ ಕಿಚ್ಚನ ಮಾತಲ್ಲೇ ಓದಿ.
ಮಿಸ್ಟರ್ ವೆಂಕಟ್ ಸರ್, ಕೈ ಎತ್ತೋದಕ್ಕಿಂತ ಮುಂಚೆ ಯೋಚನೆ ಮಾಡಬೇಡಿ. ಮಾತು ಮಾತಾಡಂಗಿದ್ದರೆ ಮಾತಾಡ್ತೀನಿ. ಕೈ ಹೆಂಗೆ ಎತ್ತಿದ್ರಿ ನೀವು. ಕೈ ಎತ್ತೋಕೆ ಹೋಗಬೇಡಿ.
ನನ್ ಶೋ ಒಳಗೆ ನನ್ನ ಒಬ್ಬೊಬ್ಬ ಕಂಟೆಸ್ಟೆಂಟೂ ನನ್ನ ಫ್ಯಾಮಿಲಿ ಇದ್ದಂಗೆ. ನನಗೆ ಏಕವಚನದಲ್ಲಿ ಕರೆಯಿರಿ, ನಾನು ಮಾತನಾಡ್ತೀನಿ, ತಲೆ ತಗ್ಗಿಸ್ತೀನಿ ನಿಮಗೆ. ನನ್ನ ಕಂಟೆಸ್ಟೆಂಟ್, ಫ್ಯಾಮಿಲಿಯವರಿಗೆ ಕೈ ಎತ್ತಿದ್ದು ಗೊತ್ತಾದ್ರೆ ಮಾತ್ರ…..
ಫ್ಯಾಮಿಲಿ ಥರಾ ನಿಮ್ಮನ್ನು ಅವತ್ತಿಂದ ಇವತ್ತಿನವರೆಗೂ ಮಾತನಾಡಿಸಿದ್ದೀನಿ ವೆಂಕಟ್ ಅವರೇ.. ಕೈ ಎತ್ತೋಕೆ ಹೋಗಬೇಡಿ. ಮತ್ತೆ ಹೇಳ್ತೀನಿ, ಕೈ ಎತ್ತೋಕೆ ಹೋಗಬೇಡಿ. ಎಲ್ಲದಕ್ಕೂ ಬಿಗ್ ಬಾಸ್ ಇದ್ದಾನೆ ಅನ್ನೋ ನೀವು ಯಾಕೆ ಕೈ ಎತ್ತುತ್ತೀರಾ..? ನಮ್ಮ ಮನೆಯ ಹೆಣ್ಮಕ್ಳನ್ನು ನೋಡೋದಿಕ್ಕೆ ಹೊರಗಡೆ ಇರೋ ಗಂಡಸು ಬೇಕಾಗಿಲ್ಲ.
ರೆಸ್ಪೆಕ್ಟ್ ಬೇಕಾದವನು ಫಸ್ಟ್ ರೆಸ್ಪೆಕ್ಟ್ ಕೊಡುವುದು ಕಲಿಯಬೇಕು. ಈ ಬಿಗ್ ಬಾಸ್ ಶೋ ಒಳಗೆ ಇವತ್ತಿನವರೆಗೂನೂ ಒಬ್ಬ ಒಬ್ಬರ ಮೇಲೆ ಕೈ ಮಾಡಿಲ್ಲ. ನಿಮ್ಮ ಮೇಲೆ ಗೌರವವಿದೆ ನನಗೆ. ಅಪಾರವಾದ ಗೌರವವಿದೆ. ನೀವೇನು ಕರೆದ್ರೂ ಕರೆಸ್ಕೊಳ್ಳೋಕೆ ರೆಡಿ ಇದ್ದೀವಿ ನಾವು. ಯಾಕೆಂದರೆ ವ್ಯಕ್ತಿತ್ವದಿಂದ ವ್ಯಕ್ತಿತ್ವಕ್ಕೆ ಇರೋದು ಅದೊಂದೇ ವ್ಯತ್ಯಾಸ. ಎಲ್ಲಾ ದಾಟ್ಕೊಂಡೇ ಇಲ್ಲಿವರೆಗೆ ಬಂದಿರೋದು ವೆಂಕಟ್ ಅವರೇ ನಾವು. ನಿಮ್ ಜೀವನ ನೀವು ನೋಡ್ಕೊಳ್ಳಿ. ಅದ್ಹೆಂಗೆ ಕೈ ಮಾಡಿದ್ರಿ ನೀವು ಅವರ್ ಮೇಲೆ.
ನೀವ್ ಮಾತು ಕಮ್ಮಿ ಆಡಿದ್ದೀರಾ? ಮಾತೆತ್ತಿದ್ದರೆ ಎಕ್ಡಾ ಎಕ್ಡಾ ಅಂತೀರಿ. ಏನ್ರೀ ಎಕ್ಡಾ..? ಅದು ಕಾಲಲ್ಲಿರಬೇಕು. ನಿಮಗೆ ಹೆಂಗಾದ್ರೂ ಮಾತಾಡಿದ್ರೆ ಆಗಲ್ಲ. ಬೇರೆಯವರು ನಿಮಗೆ ಕೂಗಿದರೆ ಆಗಲ್ಲ. ಆದ್ರೂ ನಾನು ಮಗು ಥರಾ ನೋಡ್ಕೋತಾ ಇದೀನಿ. ಒಂದು ಮಾತ್ರ ಹೇಳ್ತೀನಿ ವೆಂಕಟ್, ಗೌರವ ಸಂಪಾದಿಸಬೇಕು. ಕಿತ್ಕೊಳ್ಳೋಕಾಗಲ್ಲ. ಪ್ರತಿಯೊಂದಕ್ಕೂ ಒಂದು ಲಿಮಿಟ್ ಇದೆ. ನಾವು ಯಾರೂ ಬಲವಂತವಾಗಿ ನಿಮ್ಮನ್ನು ಒಳಗೆ ಕರೆದುಕೊಂಡು ಹೋಗಿ ಕೂರಿಸಿಲ್ಲ. ನಿಮ್ಮ ಒಪ್ಪಿಗೆ, ಪ್ರೀತಿಯಿಂದ ನೀವು ಹೋಗ್ತೀನಿ ಎಂದಿದ್ದಕ್ಕೆ ಅಲ್ಲಿ ಕೂರಿಸಿರೋದು ನಾವು. ಪ್ರೀತಿ ವಿಶ್ವಾಸ ಗೌರವ, ಇದೆಲ್ಲಾ ಸಂಪಾದಿಸ್ಕೋಬೇಕು ನಾವು. ಬಟ್ ಬಹಳ ನೊಂದ್ಕೊಂಡು ಹೇಳಬೇಕಾಗುತ್ತೆ. ಬಿಗ್ ಬಾಸ್ ಮನೆಯ ನಿಯಮದ ಪ್ರಕಾರ ಮೊದಲನೇ ಬಾರಿ ಬಿಗ್ ಬಾಸ್ ಇತಿಹಾಸದಲ್ಲಿ ಒಬ್ಬ ವ್ಯಕ್ತಿ ಮೇಲೆ ಕೈ ಮಾಡಿದ್ದಕ್ಕೆ ಯೂ ವಿಲ್ ಬಿ ಎವಿಕ್ಟೆಡ್ ಫ್ರಂ ದಿ ಹೌಸ್  ರೈಟ್ ಅವೇ. ನಿಮ್ಮನ್ನು ಮನೆಯಿಂದ ಈ ಕ್ಷಣವೇ ಹೊರಗಡೆ ಕಳಿಸಬೇಕಾಗುತ್ತದೆ.
Fresh Kannada

Fresh Kannada

No comments:

Post a Comment

Google+ Followers

Powered by Blogger.