Breaking News
recent

ಮಳೆಹುಡುಗಿಗೆ ಬಿಗ್ ಬಾಸ್ ಮನೆಯಲ್ಲಿ ಕನ್ನಡ ಪಾಠ

ಮುಂಗಾರು ಮಳೆ ಸಿನಿಮಾದ ಮೂಲಕ ಕನ್ನಡಕ್ಕೆ ಪಾದಾರ್ಪಣೆ ಮಾಡಿದ ಪರಭಾಷಾ ನಟಿ ಪೂಜಾ ಗಾಂಧಿ ನಮ್ಮ ಭಾಷೆಯನ್ನು ಕಲಿತು ಮಾತನಾಡಲು ಪ್ರಯತ್ನಿಸುತ್ತಿರುವುದು ನಿಜಕ್ಕೂ ಪ್ರಶಂಸನಾರ್ಹ.
ಮಳೆಹುಡುಗಿಗೆ ಬಿಗ್ ಬಾಸ್ ಮನೆಯಲ್ಲಿ ಕನ್ನಡ ಪಾಠ

ಆದರೆ ಕೆಲವೊಮ್ಮೆ ಅವರ ಹಿಂದಿ ಮಿಶ್ರಿತ ಕನ್ನಡ ನಗೆ ಪಾಟಲಿಗೆ ಎಡೆ ಮಾಡಿಕೊಟ್ಟಿದ್ದೂ ಉಂಟು. ಆದ್ದರಿಂದ ಇದೀಗ ಬಿಗ್ ಬಾಸ್‍ಮನೆಯಲ್ಲಿ ಇತರ ಸ್ಪರ್ಧಿಗಳು ಪೂಜಾಗೆ ಕನ್ನಡ ಪಾಠ ಆರಂಭಿಸಿದ್ದಾರೆ.
ಪೂಜಾ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಾಗಿಂದಲೂ ಕನ್ನಡ ಮಾತನಾಡಲು ಪ್ರಯತ್ನಿಸುತ್ತಿದ್ದಾರೆ. ಆದರೂ ಹೆಚ್ಚಾಗಿ ಆಂಗ್ಲ ಭಾಷೆಯನ್ನೇ ಮಾತನಾಡಿ ಟಾಸ್ಕ್‍ನಿಂದ ಬರಬೇಕಿದ್ದ ಲಕ್ಸುರಿ ಬಜೆಟ್ ಪಾಯಿಂಟ್ಸ್ ಕೈ ತಪ್ಪಿತು ಎಂಬ ಕಾರಣಕ್ಕೆ ಮನೆಯ ಬಹುತೇಕ ಸ್ಪರ್ಧಿಗಳು ಪೂಜಾರನ್ನು ಈ ಬಾರಿ ನಾಮಿನೇಟ್ ಮಾಡಿದ್ದಾರೆ. ಇದರಿಂದಾಗಿ ಸ್ಪಷ್ಟ ಕನ್ನಡ ಮಾತನಾಡಲೇ ಬೇಕೆಂದು ಪೂಜಾ ನಿರ್ಧರಿಸುವಂತಿದೆ.
ಪೂಜಾ ಅವರ ‘ಅವನು ಬರ್ತಿದೆ, ನಾವು ಮಾಡ್ತದೆ’ ಎಂಬ ಮಾತುಗಳು ಈಗ ಅವನು ಬರ್ತಿದ್ದಾನೆ ಹೋಗ್ತಿದ್ದಾನೆ ಎನ್ನುವ ಮಟ್ಟಿಗೆ ಸುಧಾರಿಸಿದೆ. ಇದಕ್ಕಾಗಿ ಬಿಗ್‍ಬಾಸ್ ಮನೆಯಲ್ಲಿ ಪೂಜಾಗೆ ಕನ್ನಡ ಮೇಷ್ಟ್ರುಗಳು ಸಿಕ್ಕಿದ್ದು ಅವರ ಕನ್ನಡ ಸ್ಪೀಕಿಂಗ್ ಕೋರ್ಸ್ ಜೋರಾಗಿಯೇ ನಡೆಯುತ್ತಿದೆ. ಪೂಜಾ ಕೂಡ ಉತ್ತಮ ವಿದ್ಯಾರ್ಥಿನಿಯಂತೆ ಕನ್ನಡ ಕಲಿಯುತ್ತಿದ್ದಾರೆ. ಇನ್ನು ಮುಂದಾದರೂ ಅವರು ಸ್ಪಷ್ಟವಾಗಿ ಕನ್ನಡ ಮಾತನಾಡುವುದನ್ನು ಕಲಿತು ತೇರ್ಗಡೆಯಾಗ್ತಾರಾ ಇಲ್ಲ ಬಿಗ್‍ಬಾಸ್ ಎಂಬ ಹೆಡ್ ಮಾಸ್ಟರ್‍ನಿಂದ ಮತ್ತೆ ಪನಿಷ್‍ಮೆಂಟ್ ತಗೋತಾರಾ ಗೊತ್ತಿಲ್ಲ.
Fresh Kannada

Fresh Kannada

No comments:

Post a Comment

Google+ Followers

Powered by Blogger.