Breaking News
recent

ಚಿತ್ರಗಳು: 'ಭರ್ಜರಿ' ಸೆಟ್ ನಲ್ಲಿ, 'ಭರ್ಜರಿ' ಶೂಟಿಂಗ್ ಶುರುವಾಯ್ತು ನೋಡಿ..!

ಸರ್ಜಾ ಕುಟುಂಬದ ಕುಡಿ ಧ್ರುವ ಸರ್ಜಾ ಅವರ 'ಭರ್ಜರಿ' ಚಿತ್ರದ ಬಗ್ಗೆ ಗಾಂಧಿನಗರದಲ್ಲಿ ಭಾರಿ ಚರ್ಚೆ ಏರ್ಪಟ್ಟಿತ್ತು. ಅದೇನಪ್ಪಾ ಅಂದ್ರೆ, ಧ್ರುವ ಸರ್ಜಾ ಅವರ 'ಭರ್ಜರಿ' ಚಿತ್ರ ಅರ್ಧಕ್ಕೆ ನಿಂತುಹೋಗಿದೆ, ಅದೇನೋ ನಿರ್ದೇಶಕ ಚೇತನ್ ಮತ್ತು ನಟ ಧ್ರುವ ನಡುವೆ ಕಿರಿಕ್ ಆಗಿತ್ತತಂತೆ, ಜೊತೆಗೆ ಧ್ರುವ ಸರ್ಜಾ ಅವರ ಮಾವ ಅರ್ಜುನ್ ಸರ್ಜಾ ಅವರಿಗೆ ಸಿನಿಮಾದ ಸ್ಕ್ರಿಪ್ಟ್ ಇಷ್ಟವಾಗಲಿಲ್ಲವಂತೆ, ಅಂತ ಅಂತೆ-ಕಂತೆಗಳ ಸುದ್ದಿ ಹಬ್ಬಿತ್ತು.
ಚಿತ್ರಗಳು: 'ಭರ್ಜರಿ' ಸೆಟ್ ನಲ್ಲಿ, 'ಭರ್ಜರಿ' ಶೂಟಿಂಗ್ ಶುರುವಾಯ್ತು ನೋಡಿ..!

ಆದರೆ ಮತ್ತೆ ನಿರ್ದೇಶಕ ಚೇತನ್ ಅವರು ಅದೆಲ್ಲ ಸುಳ್ಳು ಸುದ್ದಿ. ನಮ್ಮಿಬ್ಬರ ನಡುವೆ ವೈಯಕ್ತಿಕ ಮನಸ್ತಾಪ ಏನೂ ಇಲ್ಲ. ವಿಜಯದಶಮಿ ಹಬ್ಬದ ನಂತರ ಚಿತ್ರದ ಚಿತ್ರೀಕರಣ ನಡೆಸುತ್ತೇವೆ ಅಂತ ಸ್ಪಷ್ಟನೆ ಬೇರೆ ನೀಡಿದ್ದರು.

ಇದೀಗ ಅತೀ ಶೀಘ್ರದಲ್ಲಿ ಟೇಕ್ ಆಫ್ ತೆಗೆದುಕೊಂಡ ಧ್ರುವ ಸರ್ಜಾ ಅವರ 'ಭರ್ಜರಿ' ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ನವೆಂಬರ್ 20 ರಿಂದ 'ಭರ್ಜರಿ' ಚಿತ್ರದ ಚಿತ್ರೀಕರಣಕ್ಕೆ ಅಧಿಕೃತ ಚಾಲನೆ ದೊರೆತಿದೆ.

ಈಗಾಗಲೇ ನಟಿ ತಾರಾ ಹಾಗೂ ನಟ ಧ್ರುವ ಸರ್ಜಾ ಅವರ ಭಾಗದ ಚಿತ್ರೀಕರಣಗಳನ್ನು ದೇವಾಲಯದಲ್ಲಿ ಚಿತ್ರೀಕರಿಸಲಾಗುತ್ತಿದೆ. ಚಿತ್ರಕ್ಕೆ ವಿ.ಹರಿಕೃಷ್ಣ ಅವರು ಮ್ಯೂಸಿಕ್ ಕಂಪೋಸ್ ಮಾಡುತ್ತಿದ್ದಾರೆ.

ಇನ್ನು 'ಭರ್ಜರಿ' ಚಿತ್ರದ ಶೂಟಿಂಗ್ ಸ್ಟಿಲ್ ಗಳು ನಮಗೆ ದೊರೆತಿದ್ದು, ಅದನ್ನು ನೋಡಲು ಫೋಟೋ ಮತ್ತು ಕೆಳಗಿರುವ ಅಪ್ಡೇಟ್ ಓದಿ ..

1. ಶೂಟಿಂಗ್ ಸ್ಪಾಟ್ ನಲ್ಲಿ ನಟಿ ತಾರಾ
ಭರ್ಜರಿ ಚಿತ್ರದ ಶೂಟಿಂಗ್ ಸ್ಪಾಟ್ ನಲ್ಲಿ ನಟಿ ತಾರಾ ಅವರು ನಿರ್ದೇಶಕರ ಆಕ್ಷನ್ ಗೆ ಕಾಯುತ್ತಿರುವ ದೃಶ್ಯ. ಹಾಗು ಇತರ ಸಹಕಲಾವಿದರೊಂದಿಗೆ ಸಮಾಲೋಚನೆಯಲ್ಲಿ ತೊಡಗಿರುವುದು. ವಿಶೇಷ ಅಂದರೆ ಈ ಸಂದರ್ಭದಲ್ಲಿ ನಟಿ ತಾರಾ ಅವರ ಪುಟ್ಟ ಮಗ ಕೂಡ ಸೆಟ್ ನಲ್ಲಿ ಹಾಜರಿತ್ತು.

2. ನಟ ಧ್ರುವ ಸರ್ಜಾ ಜೊತೆ ನಟಿ ತಾರಾ
ಶೂಟಿಂಗ್ ಸ್ಪಾಟ್ ನಲ್ಲಿ ನಟ ಧ್ರುವ ಸರ್ಜಾ ಜೊತೆ ನಟಿ ತಾರಾ ಹಾಗು ನಿರ್ದೇಶಕ ಚೇತನ್ ಅವರು ಚಿತ್ರದ ಶಾಟ್ ಬಗ್ಗೆ ಗಂಭೀರ ಸಮಾಲೋಚನೆಯಲ್ಲಿ ತೊಡಗಿರುವುದು.

3. ಸೆಟ್ ವೀಕ್ಷಿಸುತ್ತಿರುವ ತಾರ
ನಟಿ ತಾರಾ ಅವರು ಶೂಟಿಂಗ್ ಆರಂಭವಾಗುವ ಮೊದಲು ತದೇಕಚಿತ್ತದಿಂದ ಶೂಟಿಂಗ್ ಸೆಟ್ ವೀಕ್ಷಿಸುತ್ತಿರುವುದು.

4. ಸ್ಕ್ರಿಪ್ಟ್ ಬಗ್ಗೆ ಚರ್ಚೆ
ನಟಿ ತಾರಾ ಹಾಗೂ ನಟ ಧ್ರುವ ಸರ್ಜಾ ಅವರು ನಿರ್ದೇಶಕ ಚೇತನ್ ಅವರ ಸಮ್ಮುಖದಲ್ಲಿ ಸ್ಕ್ರಿಪ್ಟ್ ಬಗ್ಗೆ ಚರ್ಚೆ ನಡೆಸುತ್ತಿರುವುದು. ಇನ್ನು ಈ ಚಿತ್ರದಲ್ಲಿ ನಟಿ ತಾರಾ ಯಾವ ಪಾತ್ರದಲ್ಲಿ ಮಿಂಚಲಿದ್ದಾರೆ ಎಂಬುದು ಇನ್ನು ಖಚಿತವಾಗಿಲ್ಲ.

5. ದೇವಸ್ಥಾನದ ಮೆಟ್ಟಿಲೇರುತ್ತಿರುವ ನಟಿ ತಾರಾ
ನಟಿ ತಾರಾ ಅವರು ದೇವಸ್ಥಾನಕ್ಕೆ ಹೋಗುವ ದೃಶ್ಯವನ್ನು ಕ್ಯಾಮರ ಕಣ್ಣಿನಲ್ಲಿ ಸೆರೆಹಿಡಿಯಲು ಛಾಯಾಗ್ರಾಹಕ ಶ್ರೀಶ ಕೂದುವಳ್ಳಿ ಅವರು ತಯಾರಿ ನಡೆಸುತ್ತಿರುವುದು. ಚಿತ್ರದಲ್ಲಿ ನಟಿ ತಾರಾ ಅವರು ದೇವಸ್ಥಾನದ ಮೆಟ್ಟಿಲೇರುತ್ತಿದ್ದಾರೆ.

6. ಐದು ತಿಂಗಳ ನಂತರ 'ಭರ್ಜರಿ'
ಇದೇ ಮೊದಲ ಬಾರಿಗೆ 'ಬುಲ್ ಬುಲ್' ಬೆಡಗಿ ರಚಿತಾ ರಾಮ್ ಅವರು ಧ್ರುವ ಸರ್ಜಾ ಅವರೊಂದಿಗೆ 'ಭರ್ಜರಿ' ಯಲ್ಲಿ ಭರ್ಜರಿಯಾಗಿ ಮಿಂಚಿದ್ದು, ಸುಮಾರು ಐದು ತಿಂಗಳ ನಂತರ ಈ ಚಿತ್ರಕ್ಕೆ ಮರುಜೀವ ದೊರೆತಿದೆ. ಇನ್ನುಳಿದಂತೆ ಸಾಧುಕೋಕಿಲ, ಸುಚೇಂದ್ರ ಪ್ರಸಾದ್, ರಂಗಾಯಣ ರಘು, ಮುಂತಾದವರು ಪ್ರಮುಖ ತಾರಾಗಣದಲ್ಲಿ ಮಿಂಚುತ್ತಿದ್ದಾರೆ.
Fresh Kannada

Fresh Kannada

No comments:

Post a Comment

Google+ Followers

Powered by Blogger.