Breaking News
recent

ಹುಚ್ಚ ವೆಂಕಟ್ ನ ಬೈಯ್ಯೋರು ಇದ್ದಾರೆ ಸ್ವಾಮಿ..!

'ಬಿಗ್ ಬಾಸ್' ಮನೆಯಿಂದ ಹೊರಬಂದ ಮೇಲೆ ಎಲ್ಲಿ ನೋಡಿದ್ರೂ ಹುಚ್ಚ ವೆಂಕಟ್ ರದ್ದೇ ಮಾತು. 'ಬಿಗ್ ಬಾಸ್-3' ಕಾರ್ಯಕ್ರಮದಲ್ಲಿ ಗಾಯಕ ರವಿ ಮುರೂರು ಮೇಲೆ ಯೂಟ್ಯೂಬ್ ಸ್ಟಾರ್ ಹುಚ್ಚ ವೆಂಕಟ್ ಹಲ್ಲೆ ಮಾಡಿದ್ದು ಸರಿ ಅಂತ ಅನೇಕರು ಒಂದ್ಕಡೆ ವಾದ ಮಾಡ್ತಿದ್ರೆ, ಇನ್ನೊಂದ್ಕಡೆ ಹುಚ್ಚ ವೆಂಕಟ್ ಕಿವಿ ಹಿಂಡುವವರೂ ಇದ್ದಾರೆ ಸ್ವಾಮಿ.
ಹುಚ್ಚ ವೆಂಕಟ್ ನ ಬೈಯ್ಯೋರು ಇದ್ದಾರೆ ಸ್ವಾಮಿ..!

ಫೇಸ್ ಬುಕ್ ಸೇರಿದಂತೆ ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಹುಚ್ಚ ವೆಂಕಟ್ ಬಗ್ಗೆ ಚರ್ಚೆ ಅತಿರೇಕಕ್ಕೆ ಏರಿದೆ. ಇದುವರೆಗೂ ಹುಚ್ಚ ವೆಂಕಟ್ ಗೆ ಜೈ ಜೈ ಅನ್ನುವವರ ಸಂಖ್ಯೆ ಹೆಚ್ಚಿತ್ತು. ಇದೀಗ ಹುಚ್ಚ ವೆಂಕಟ್ ವಿರುದ್ಧ ತೊಡೆ ತಟ್ಟುವ ಮಂದಿ ಜಾಸ್ತಿಯಾಗ್ತಿದ್ದಾರೆ.

ಹುಚ್ಚ ವೆಂಕಟ್ ಗೆ ಜನಸಾಮಾನ್ಯರು ನೀಡಿರುವ ಮಾತಿನ ಪೆಟ್ಟು ಫೋಟೋ ಸಮೇತ ಇಲ್ಲಿದೆ. ಕೆಳಗಿರುವ ಅಪ್ಡೇಟ್ ಓದುತ್ತಾ ಹೋಗಿ.....

1. ಹುಚ್ಚ ವೆಂಕಟ್ ಸೇನೆ ಏನ್ಮಾಡ್ತಿದೆ?
ಗಾಯಕ ರವಿ ಮುರೂರು ಮೇಲೆ ದ್ವೇಷ ಸಾಧಿಸುವ ಬದಲು ಅತ್ಯಾಚಾರ ಮಾಡುವವರನ್ನ ಹುಚ್ಚ ವೆಂಕಟ್ ಸೇನೆ ಹಿಡಿಯಲಿ ಅನ್ನೋದು ವೀಕ್ಷಕರ ಆಗ್ರಹ.

2. ನಿಜವಾದ ಹುಚ್ಚ
''ಬಿಗ್ ಬಾಸ್' ಮನೆಯಲ್ಲಿ ಹುಚ್ಚಾಟ ಪ್ರದರ್ಶನ ಮಾಡಿ ಹುಚ್ಚ ವೆಂಕಟ್ ನಿಜವಾದ ಹುಚ್ಚ ಅಂತ ಪ್ರೂವ್ ಮಾಡಿದ್ದಾರೆ

3. ಸುದೀಪ್ ಗೆ ಜೈಕಾರ
ರವಿ ಮುರೂರು ಮಗಳಿಗೆ ಕ್ಷಮೆ ಕೇಳಿ ಸಮಾಧಾನ ಹೇಳಿದ ಸುದೀಪ್ ಗೆ ಅಭಿಮಾನಿಗಳು ಜೈಕಾರ ಹಾಕ್ತಿದ್ದಾರೆ.

4. ಜನ ಮರುಳೋ....ಜಾತ್ರೆ ಮರುಳೋ..?
ಹುಚ್ಚ ವೆಂಕಟ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅವಾಚ್ಯ ಶಬ್ದಗಳನ್ನ ಬಳಸಿ ನಿಂದಿಸುವವರೂ ಇದ್ದಾರೆ.

5. ಹುಚ್ಚ ವೆಂಕಟ್ ಮನಸ್ಸು ಒಳ್ಳೆಯದ್ದೇ.!
ಹುಚ್ಚ ವೆಂಕಟ್ ರವರ ಕೆಲ ಮಾತುಗಳು ಅವರ ಮುಗ್ಧ ಮನಸ್ಸಿನ ಪ್ರತಿಬಿಂಬ.


6. ಚಪ್ಪಲಿ ಹೊತ್ತು ನಿಂತ ಹುಚ್ಚ ವೆಂಕಟ್.!
ಇತರರಿಗೆ ಅಹಂಕಾರ ತೋರಿಸಿದರೂ, ತಮ್ಮ ತಂದೆ ವಿಚಾರ ಬಂದಾಗ ಹುಚ್ಚ ವೆಂಕಟ್ ಶಿಕ್ಷೆ ಅನುಭವಿಸಿ ಅನೇಕರ ಹೃದಯ ಗೆದ್ದರು.
Fresh Kannada

Fresh Kannada

No comments:

Post a Comment

Google+ Followers

Powered by Blogger.