Breaking News
recent

ಇಷ್ಟಪಟ್ಟು ಮಂಗಳಮುಖಿಯಾದೆ, ಎಂದ ಆ ಖಳನಾಯಕ ಯಾರು?

'ಕೇಸ್ ಮಾಡೋದು ದೊಡ್ಡ್ ವಿಚಾರ ಅಲ್ಲ. ಮಾಡಿದ್ರೆ, ಇಂತ ಕೇಸ್ ಇದ್ಯಾ ಅಂತ ಲಾಯರ್ ತಡಕಾಡ್ ಬೇಕು, ಪೊಲೀಸ್ ಹುಡುಕಾಡ್ ಬೇಕು' ಅನ್ನೋ ಡೈಲಾಗ್ ನಿಮಗೆ ಎಲ್ಲೋ ಕೇಳಿದ್ದೀವಿ ಅನ್ಸುತ್ತೆ ಅಲ್ವಾ.
ಭಜರಂಗಿ ಲೋಕಿ
ಭಜರಂಗಿ ಲೋಕಿ

ಹೌದು ಇದು ನಟ 'ಉಗ್ರಂ' ಶ್ರೀಮುರಳಿ ಅವರ ಈ ವರ್ಷದ ಬಹುನಿರೀಕ್ಷಿತ 'ರಥಾವರ' ಚಿತ್ರದ ಖಡಕ್ ಡೈಲಾಗ್.

ಅಂದಹಾಗೆ ನಾವು ಈ ಸಿನಿಮಾದ ಬಗ್ಗೆ ಯಾಕೆ ಪೀಠಿಕೆ ಹಾಕುತ್ತಿದ್ದೇವೆ ಅಂದುಕೊಂಡ್ರ, ಯಾಕೆಂದರೆ, ಈ ಚಿತ್ರದಲ್ಲಿ ಖಳನಟ ರವಿಶಂಕರ್ ಮಾತ್ರವಲ್ಲದೆ ಇನ್ನೊಬ್ಬ ಖ್ಯಾತ ಖಳನಟ ಕೂಡ ಮಿಂಚಿದ್ದಾರೆ.ಟ್ರೈಲರ್: 'ರಥಾವರ'ದಲ್ಲಿ ಉಗ್ರರೂಪ ತಾಳಿದ ರೋರಿಂಗ್ ಸ್ಟಾರ್

ಆದರೆ ಅವರನ್ನು ನಮಗೆ ಟ್ರೈಲರ್ ನಲ್ಲೂ ನೋಡಲು ಸಿಗಲಿಲ್ಲ, ಯಾಕೆಂದರೆ ಆ ಪಾತ್ರ ಮಾಡಿದ ಇನ್ನೊಬ್ಬ ಖಳನಟನ ಪಾತ್ರವನ್ನು ಬಹಳ ರಹಸ್ಯವಾಗಿ ಇಟ್ಟಿದ್ದಾರೆ, ಚೊಚ್ಚಲ ನಿರ್ದೇಶಕ ಚಂದ್ರಶೇಖರ ಬಂಡಿಯಪ್ಪ.

ಆದರೆ ಸದ್ಯಕ್ಕೆ ಆ ಪ್ರಮುಖ ಖಳನಟ ಯಾರು ಅನ್ನೋ ನಿಮ್ಮ ಕುತೂಹಲವನ್ನು ನಾವು ತಣಿಸುತ್ತೇವೆ. ರವಿಶಂಕರ್ ಅಲ್ಲದೇ ಇನ್ನೊಬ್ಬ ಖಳನಟನ ಪಾತ್ರದಲ್ಲಿ ಮಿಂಚಿರುವ ಆ ನಟನೇ ನಮ್ಮ 'ಭಜರಂಗಿ' ಲೋಕಿ.

ಹಲವಾರು ಸಿನಿಮಾಗಳಲ್ಲಿ ಖಳನಟನಾಗಿ ಮಿಂಚಿರುವ ಭಜರಂಗಿ ಲೋಕಿ ಅವರಿಗೆ 'ರಥಾವರ' ಚಿತ್ರದಲ್ಲಿ ಒಂದು ಪ್ರಮುಖ ಪಾತ್ರವಿದೆ ಅದೇನೆಂಬುದನ್ನು ತಿಳಿಯಲು ಕೆಳಗಿನ ಅಪ್ಡೇಟ್ ಓದಿ..


1. ಸೌರವ್ ಲೋಕೇಶ್ ಅಲಿಯಾಸ್ 'ಭಜರಂಗಿ' ಲೋಕಿ
ಇವರ ನಿಜವಾದ ಹೆಸರು ಸೌರವ್ ಲೋಕೇಶ್, ಆದರೆ ಶಿವಣ್ಣ ಅವರ 'ಭಜರಂಗಿ' ಚಿತ್ರದಲ್ಲಿ ಖಳನಟನಾಗಿ ತಮ್ಮ ಅದ್ಭುತ ನಟನೆಯನ್ನು ತೋರಿದ ಈ ನಟ ತದನಂತರ ಸ್ಯಾಂಡಲ್ ವುಡ್ ಕ್ಷೇತ್ರದಲ್ಲಿ 'ಭಜರಂಗಿ' ಲೋಕಿ ಎಂದೇ ಖ್ಯಾತಿ ಗಳಿಸಿದರು.

2. ರಂಗಭೂಮಿಯ ಕಲಾವಿದ
ನಟ ಸೌರವ್ ಲೋಕೇಶ್ ಅವರು ಚಿತ್ರರಂಗಕ್ಕೆ ಬರುವ ಮೊದಲು ರಂಗಭೂಮಿಯ ಕಲಾವಿದರಾಗಿದ್ದರು. ಅವರ ಅತ್ಯುತ್ತಮ ನಾಟಕ 'ಪೋಲಿ ಕಿಟ್ಟಿ' ಭಾರಿ ಜನಪ್ರಿಯತೆ ಗಳಿಸಿತ್ತು.

3. 'ಭಜರಂಗಿ' ಯಲ್ಲಿ ಅಸುರನಾದ ಲೋಕಿ
ನಿರ್ದೇಶಕ ಎ.ಹರ್ಷ ಅವರು ಆಕ್ಷನ್-ಕಟ್ ಹೇಳಿದ್ದ 'ಭಜರಂಗಿ' ಚಿತ್ರದಲ್ಲಿ ಸೌರವ್ ಲೋಕೇಶ್ ಅವರು ಖಳನಾಯಕನಾಗಿ ಕೃಷ್ಣೆಯ ಶಾಪಕ್ಕೆ ಗುರಿಯಾಗುವ ಕೆಟ್ಟ ಅಸುರನ ಪಾತ್ರದಲ್ಲಿ ಮಿಂಚಿ ಪ್ರೇಕ್ಷಕರ ಮನಸ್ಸಿನಲ್ಲಿ ಭದ್ರ ಜಾಗ ಮಾಡಿ ಎಲ್ಲರಿಂದ ಶಭಾಶ್ ಗಿರಿ ಪಡೆದುಕೊಂಡರು.

4. 'ಜಸ್ಟ್ ಮದ್ವೇಲಿ' ಸಿನಿಮಾದಲ್ಲಿ ಖಳನಟ
ನಿರ್ದೇಶಕ ತುಮಕೂರು ಸೀನ ಅವರು ಆಕ್ಷನ್-ಕಟ್ ಹೇಳಿರುವ 'ಜಸ್ಟ್ ಮದ್ವೇಲಿ' ಸಿನಿಮಾದಲ್ಲಿ ಲೋಕಿ ಅವರು ಹಳ್ಳಿಯಲ್ಲಿ ತಾನು ಬಯಸಿದ್ದೆಲ್ಲಾ ಆಗಬೇಕು. ತಾನು ಇಷ್ಟಪಟ್ಟ ಹುಡುಗಿ ತನ್ನ ಕಾಲಬುಡದಲ್ಲಿ ಬಿದ್ದಿರಬೇಕು, ಎನ್ನುವ ಅಹಂಕಾರದ ಪಾತ್ರದಲ್ಲಿ ಮಿಂಚಿದ್ದರು.

5. 'ರಥಾವರ'ದಲ್ಲಿ ಮಂಗಳಮುಖಿ
ನಟ ಶ್ರೀಮುರಳಿ ಅವರ 'ರಥಾವರ' ದಲ್ಲೂ ಪ್ರಮುಖ ಪಾತ್ರ ವಹಿಸುತ್ತಿದ್ದು, ಅದರಲ್ಲೂ ಮಂಗಳಮುಖಿಯ ಪಾತ್ರದಲ್ಲಿ ಮಿಂಚಿದ್ದಾರೆ. ಇದಕ್ಕಾಗಿ ಸಖತ್ ಕಸರತ್ತು ಕೂಡ ಮಾಡಿದ್ದಾರಂತೆ. ಜೊತೆಗೆ ಅವರ ಪಾತ್ರವನ್ನು ತೆರೆಯ ಮೇಲೆ ತೋರಿಸಲು ಭಾರಿ ಉತ್ಸುಕರಾಗಿದ್ದಾರಂತೆ, 'ಭಜರಂಗಿ' ಲೋಕಿ.

6. ಲೋಕಿ ಪಾತ್ರದ ಬಗ್ಗೆ ಶ್ರೀಮುರಳಿ ಏನಂದ್ರು?
ಲೋಕಿ ಪಾತ್ರದ ಬಗ್ಗೆ ನಟ ಶ್ರೀಮುರಳಿ ಅವರು 'ಈ ಸಿನಿಮಾದಲ್ಲಿ ಲೋಕಿ ಅವರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಸಿನಿಮಾದಲ್ಲಿ ಅವರ ಪಾತ್ರವೇ ಸಖತ್ ಹೈಲೈಟ್ ಆಗುತ್ತದೆ. ನನಗೆ ಅವರ ಪಾತ್ರದ ಬಗ್ಗೆ ಹೇಳಲು ಆಗುವುದಿಲ್ಲ. ಆದರೆ ಅವರ ಪಾತ್ರದಲ್ಲಿ ಉತ್ತಮ ಅಂಶವಿದೆ. ಜೊತೆಗೆ ತುಂಬಾ ಮೌಲ್ಯಯುತ ಸಂದೇಶವಿದೆ. ಮಾತ್ರವಲ್ಲದೇ ನಾವು ಆ ಪಾತ್ರವನ್ನು ತುಂಬಾ ಗೌರವದಿಂದ ನೋಡುವಂತಿದೆ. ಆದರೆ ಯಾವ ತರದ ಪಾತ್ರ ಅಂತ ಚಿತ್ರ ಬಿಡುಗಡೆಯಾದ ನಂತರ ನೋಡಿ ಎಂದು ಶ್ರೀಮುರಳಿ ಅವರು ನುಡಿಯುತ್ತಾರೆ.

7. ಸವಾಲೊಡ್ಡಿದ ಪಾತ್ರ ಮಂಗಳಮುಖಿ - ಲೋಕಿ
ಇದೇ ಮೊದಲ ಬಾರಿಗೆ ಖಳನಟ ಲೋಕಿ ಅವರು ಮಂಗಳಮುಖಿಯ ಪಾತ್ರದಲ್ಲಿ ಮಿಂಚಿದ್ದು, ತಮ್ಮ ಪಾತ್ರ ಮಾಡಲು ತುಂಬಾ ಸವಾಲುಗಳನ್ನು ಎದುರಿಸಿದ್ದಾರಂತೆ. ನಿರ್ದೇಶಕರು ನೀವು ಈ ಪಾತ್ರ ಮಾಡಬೇಕು ಎಂದಾಗ ಅವರು ತುಂಬಾ ಯೋಚನೆ ಮಾಡಿ ಹಾಗೂ ಮಂಗಳಮುಖಿಯರಿಗೆ ಸಂಬಂಧಪಟ್ಟ ಸಿನಿಮಾಗಳನ್ನು ನೋಡಿ ಶಾಟ್ ಗೆ ತಯಾರಾದೆ ಎನ್ನುತ್ತಾರೆ ಲೋಕಿ ಅವರು.

8. 10 ಕೆ.ಜಿ ತೂಕ ಹೆಚ್ಚಿಸಿಕೊಂಡ ಲೋಕಿ
ಈ ಪಾತ್ರಕ್ಕಾಗಿ ನಟ ಲೋಕಿ ಅವರು 10 ಕೆ.ಜಿ ಜಾಸ್ತಿ ತೂಕ ಹೆಚ್ಚಿಸಿಕೊಂಡಿದ್ದಾರಂತೆ. ಅದ್ರಲ್ಲೂ ಚಿತ್ರದ ಡಬ್ಬಿಂಗ್ ಸಂದರ್ಭದಲ್ಲಿ ನನ್ನ ಪಾತ್ರವನ್ನು ನೋಡಿದಾಗ 6 ತಿಂಗಳಿನಿಂದ ಮಾಡಿದ ಪ್ರಯತ್ನಕ್ಕೆ ತಕ್ಕ ಫಲ ದೊರೆತಿದೆ ಎಂದು ಸಂತಸ ಪಟ್ಟರಂತೆ ಲೋಕಿ ಅವರು.

9. ಡಿಸೆಂಬರ್ 4 ಕ್ಕೆ ರಥಾವರ
ನಿರ್ದೇಶಕ ಚಂದ್ರಶೇಖರ ಬಂಡಿಯಪ್ಪ ಆಕ್ಷನ್-ಕಟ್ ಹೇಳಿರುವ ನಟ ಶ್ರೀಮುರಳಿ, ರಚಿತಾ ರಾಮ್, ರವಿಶಂಕರ್, ಹಾಗೂ ಭಜರಂಗಿ ಲೋಕಿ ಲೀಡ್ ರೋಲ್ ನಲ್ಲಿ ಮಿಂಚಿರುವ ಬಹುನಿರೀಕ್ಷಿತ 'ರಥಾವರ' ಡಿಸೆಂಬರ್ 4 ರಂದು ಕರ್ನಾಟಕದಾದ್ಯಂತ ಭರ್ಜರಿಯಾಗಿ ತೆರೆಗೆ ಅಪ್ಪಳಿಸಲು ತಯಾರಾಗಿದೆ.
Fresh Kannada

Fresh Kannada

No comments:

Post a Comment

Google+ Followers

Powered by Blogger.