Breaking News
recent

ಅಚ್ಚರಿ.! ಸಂಭಾವನೆ ಪಡೆಯದೇ ನಟಿಸಿದ, ಸ್ಯಾಂಡಲ್ ವುಡ್ ನ ನಟರು

ಕೂತರೂ ಕಾಸೇ ನಿಂತರೂ ಕಾಸೇ, ಕೆಮ್ಮಿದರೂ ಕಾಸೇ, ಹೋದಲ್ಲೆಲ್ಲ ಇವರಿಗೆ ಸಂಭಾವನೆ, ಎಲ್ಲಾ ಕಡೆ ಸಂಭಾವನೆ ತೆಗೆದುಕೊಳ್ಳುತ್ತಾರೆ ಎಂದು ಕೆಲವು ನಟರ ಮೇಲೆ ಕೆಲವೆಡೆ ಆರೋಪ ಕೇಳಿ ಬರುತ್ತದೆ.
ಅಚ್ಚರಿ.! ಸಂಭಾವನೆ ಪಡೆಯದೇ ನಟಿಸಿದ, ಸ್ಯಾಂಡಲ್ ವುಡ್ ನ ನಟರು

ಆದರೆ ಒಂದು ಪೈಸೆ ಕೂಡ ಸಂಭಾವನೆ ಪಡೆಯದೇ ಸಂಮ್ ಥಿಂಗ್ ಸ್ಪೆಷಲ್ ಆಗಿ ಕಾಣಿಸಿಕೊಳ್ಳುವ ನಟರೂ ಇದ್ದಾರೆ. ಇನ್ನು ಬೇರೆ ಕಡೆ ಯಾಕೆ ನಮ್ಮದೇ ಕನ್ನಡ ಇಂಡಸ್ಟ್ರಿಯಲ್ಲಿ ಒಂದೇ ಒಂದು ರೂಪಾಯಿ ಸಂಭಾವನೆ ಪಡೆಯದೇ ನಟಿಸಿದ ನಟರು ನಮಗೆ ಕಾಣಸಿಗುತ್ತಾರೆ.

ಒಂದೇ ರೂಪಾಯಿ ಸಂಭಾವನೆ ಪಡೆದು ಕನ್ನಡದ 'ಅಮೃತಧಾರೆ' ಚಿತ್ರದಲ್ಲಿ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ನಟಿಸಿದ್ದರು. ಅಲ್ಲದೇ ನಷ್ಟ ಉಂಟಾದ ನಿರ್ಮಾಪಕರಿಗೆ, ವಿತರಕರಿಗೆ ಮತ್ತೆ ಫ್ರೀ ಕಾಲ್ ಶೀಟ್ ಕೊಟ್ಟು ಆರ್ಥಿಕವಾಗಿ ಹೆಗಲು ಕೊಟ್ಟಿದ್ದರು.

ಇನ್ನು ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅವರ ವಿಷಯಕ್ಕೆ ಬಂದರೆ, ಆಗಾಗ್ಗೆ ಇಂತಹ ಉಚಿತ ಸೇವೆಗಳು ನಡೆಯುತ್ತಲೇ ಇರುತ್ತದೆ. ಇದೆಲ್ಲಾ ಕೇವಲ ಪ್ರೀತಿ ಮತ್ತು ಸ್ನೇಹಪೂರ್ವಕವಾಗಿ ನಡೆಯುವ ಸೇವೆಗಳು.

ಇದೀಗ ಇಂತಹದೇ ಸಾಲಿಗೆ ನಮ್ಮ ಚಂದನವನದ ನಟರೂ ಸೇರುತ್ತಾರೆ. ಅಂದಹಾಗೆ ಈ ಮೂವರು ಸ್ಟಾರ್ ನಟರು ಹಾಗೂ ಬಾಲಿವುಡ್ ನ ಖ್ಯಾತ ನೃತ್ಯ ನಿರ್ದೇಶಕರು ಒಬ್ಬರು ಇಂತಹ ಸೇವೆ ಮಾಡಿ ಎಲ್ಲರ ಮೆಚ್ಚುಗೆ ಗಳಿಸಿ ತಮ್ಮ ದೊಡ್ಡತನ ಮೆರೆದಿದ್ದಾರೆ. ಅವರು ಯಾರು ಎಂದು ನೋಡುವ ಕುತೂಹಲ ನಿಮಗಿದ್ದರೆ ಫೋಟೋ ಮತ್ತು ಕೆಳಗಿನ ಅಪ್ಡೇಟ್ ಓದಿ 

1. 'ಕೃಷ್ಣ' ಅಲಿಯಾಸ್ ಅಜೇಯ್ ರಾವ್
'ಕೃಷ್ಣಲೀಲಾ' ಖ್ಯಾತಿಯ ಸ್ಟಾರ್ ನಟ ಅಜೇಯ್ ರಾವ್ ಅವರು ಒಂದೇ ಒಂದು ರೂಪಾಯಿ ಸಂಭಾವನೆ ಪಡೆಯದೇ 'ಮಾಮು ಟೀ ಅಂಗಡಿ' ಎಂಬ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಹಾಡೊಂದಕ್ಕೆ ಡಾನ್ಸ್ ಕೂಡ ಮಾಡಿದ್ದಾರೆ.


2. ಲವ್ಲೀ ಸ್ಟಾರ್ ಪ್ರೇಮ್
ಕನ್ನಡದ ಲವ್ಲೀ ಸ್ಟಾರ್ ಪ್ರೇಮ್ ಅವರು ಕೂಡ ನಿರ್ದೇಶಕ ಎ.ಪರಮೇಶ್ ಆಕ್ಷನ್-ಕಟ್ ಹೇಳಿರುವ 'ಮಾಮು ಟೀ ಅಂಗಡಿ' ಚಿತ್ರದಲ್ಲಿ ಅತಿಥಿ ಪಾತ್ರ ಮಾಡುತ್ತಿದ್ದು, ಇವರೂ ಕೂಡ ಒಂದು ರೂಪಾಯಿ ಸಂಭಾವನೆ ಪಡೆಯದೇ ನಟಿಸಿದ್ದಾರೆ. ಇನ್ನೊಂದು ವಿಶೇಷ ಏನಪ್ಪಾ ಅಂದ್ರೆ, ನಟ ಪ್ರೇಮ್ ಅವರ ಮಗ ಏಕಾಂತ್ ಕೂಡ ಈ ಚಿತ್ರದ ಹಾಡೊಂದರಲ್ಲಿ ಕಾಣಿಸಿಕೊಂಡಿದ್ದಾರೆ.


3. ನಟ ಶ್ರೀನಗರ ಕಿಟ್ಟಿ
'ಅಭಿನೇತ್ರಿ', 'ರಿಂಗ್ ರೋಡ್' ಚಿತ್ರದಲ್ಲಿ ಗೆಸ್ಟ್ ರೋಲ್ ನಿರ್ವಹಿಸಿದ ನಟ ಶ್ರೀನಗರ ಕಿಟ್ಟಿ ಅವರು ಹೊಸಬರ 'ಮಾಮು ಟೀ ಅಂಗಡಿ' ಚಿತ್ರದಲ್ಲೂ ಅತಿಥಿ ಪಾತ್ರ ಮಾಡಿದ್ದಾರೆ. ಇದೀಗ ಈ ನಟ ಕೂಡ ಅಜೇಯ್ ರಾವ್ ಹಾಗೂ ಪ್ರೇಮ್ ಅವರ ಸಾಲಿಗೆ ಸೇರುತ್ತಾರೆ.


4. ಈ ಮೂವರು ನಟರ ಎಂಟ್ರಿ ಮುಖ್ಯ ತಿರುವಿನಲ್ಲಿ
ಅಂದಹಾಗೆ ಈ ಮೂವರು ನಟರು ಈ ಚಿತ್ರದ ಮುಖ್ಯ ತಿರುವೊಂದರಲ್ಲಿ ಎಂಟ್ರಿ ಪಡೆದುಕೊಳ್ಳುತ್ತಿದ್ದು, ಚೊಚ್ಚಲ ನಿರ್ದೇಶಕ ಪರಮೇಶ್ ಅವರು ಹಿಂದೆ ಒಂದು ಬಾರಿ ಈ ಮೂವರು ನಟರಿಗೆ ಮಾಡಿದ ಸಹಾಯವನ್ನು ನೆನಪಿಟ್ಟುಕೊಂಡು ಚೊಚ್ಚಲ ಚಿತ್ರಕ್ಕೆ ಈ ಮೂಲಕ ಸಹಾಯ ಮಾಡುತ್ತಿದ್ದಾರೆ.


5. ಸಿನಿಮಾ ಪ್ರಚಾರಕ್ಕೆ ಸ್ಟಾರ್ ನಟರನ್ನು ಹಾಕಿಕೊಂಡಿಲ್ಲ
ಈ ಮೂವರು ಸ್ಟಾರ್ ನಟರನ್ನು ಕೇವಲ ಸಿನಿಮಾ ಪ್ರಚಾರಕ್ಕೆ ಮಾತ್ರ ಚಿತ್ರದಲ್ಲಿ ಪಾತ್ರ ಮಾಡಿಸಿಲ್ಲ, ಅಥವಾ ಅವರು ಸ್ಟಾರ್ ನಟರು ಅಗಿರುವುದರಿಂದ, ಹೊಸಬರ ಸಿನಿಮಾ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡುತ್ತದೆ ಎಂಬ ವ್ಯವಹಾರದ ಕಾರಣಕ್ಕೂ ಮಾಡಿಲ್ಲ. ಬದ್ಲಾಗಿ ಕಥೆಗೆ ಅಗತ್ಯ ಇತ್ತು ಆದ್ದರಿಂದ ಅಜೇಯ್ ರಾವ್, ಶ್ರೀನಗರ ಕಿಟ್ಟಿ ಹಾಗೂ ಲವ್ಲೀ ಸ್ಟಾರ್ ಪ್ರೇಮ್ ಅವರನ್ನು ಹಾಕಿಕೊಂಡು ಸಿನಿಮಾ ಮಾಡಿದ್ದೇನೆ ಎಂದು ನಿರ್ದೇಶಕ ಎ.ಪರಮೇಶ್ ನುಡಿಯುತ್ತಾರೆ.


6. ಸ್ಟಾರ್ ನಟನಿಗೆ ಕಷ್ಟ ಕಾಲದಲ್ಲಿ ಸಹಾಯ ಮಾಡಿದ ಚೊಚ್ಚಲ ನಿರ್ದೇಶಕ
ಅಂದಹಾಗೆ ವೃತ್ತಿಯಲ್ಲಿ ಪತ್ರಕರ್ತನಾಗಿರುವ, ಚೊಚ್ಚಲ ನಿರ್ದೇಶಕ ಎ.ಪರಮೇಶ್ ಅವರು ಪತ್ರಿಕೋದ್ಯಮದಿಂದ ದೂರ ಸರಿದು ಸಿನಿಮಾ ಮಾಡುವ ಕನಸು ಹೊತ್ತು ತಿರುಗಾಡುತ್ತಿದ್ದ ಸಂದರ್ಭದಲ್ಲಿ ಕಿಟ್ಟಿ ಹಾಗೂ ಅಜೇಯ್ ರಾವ್ ಅವರು ಸಹಾಯ ಮಾಡಿದ್ದರು. ಅಲ್ಲದೇ ನಟ ಪ್ರೇಮ್ ಅವರು ಕಷ್ಟ ಕಾಲದಲ್ಲಿದ್ದ ಸಂದರ್ಭದಲ್ಲಿ ಇದೇ ಪರಮೇಶ್ ಸಹಾಯ ಮಾಡಿದ್ದರು. ಅದಕ್ಕಾಗಿ ಯಾವುದೇ ಸಂಭಾವನೆ ಪಡೆಯದೇ 'ಮಾಮು ಟೀ ಅಂಗಡಿ' ಚಿತ್ರದಲ್ಲಿ ನಟಿಸಲು ಈ ಮೂರು ಸ್ಟಾರ್ ನಟರು ನಿರ್ಧರಿಸಿದ್ದಾರೆ.


7. ಬಾಲಿವುಡ್ ನೃತ್ಯ ನಿರ್ದೇಶಕ ಟೆರೆನ್ಸ್ ಲೆವಿಸ್
ಇನ್ನು ಈ ಸ್ಟಾರ್ ನಟರ ಲಿಸ್ಟ್ ಗೆ ಇನ್ನೊಬ್ಬ ನೃತ್ಯ ನಿರ್ದೇಶಕ ಸೇರ್ಪಡೆಗೊಂಡಿದ್ದಾರೆ. ಅವರೇ ನಮ್ಮ ಬಾಲಿವುಡ್ ನ ಖ್ಯಾತ ನಿರ್ದೇಶಕ ಟೆರೆನ್ಸ್ ಲೆವಿಸ್ ಅವರು ಕನ್ನಡದ 'ಮಾಮು ಟೀ ಅಂಗಡಿ' ಚಿತ್ರದಲ್ಲಿ ಗೆಸ್ಟ್ ರೋಲ್ ಮಾಡಿದ್ದು, ಇವರು ಕೂಡ ಸಂಭಾವನೆ ಪಡೆದುಕೊಂಡಿಲ್ಲ.


8. ನವೆಂಬರ್ 20 ಕ್ಕೆ 'ಮಾಮು ಟೀ ಅಂಗಡಿ'
ಹೊಸ ಪ್ರತಿಭೆಗಳಾದ ರಿತೇಶ್, ಮಹೇಶ್ ರಾಜ್, ಅಭಿಷೇಕ್, ಇಂಡಿಯಾ ಗಾಟ್ ಟ್ಯಾಲೆಂಟ್ ರಿಯಾಲಿಟಿ ಶೋನ ಪ್ರತಿಭೆ ವರುಣ್, ಅರ್ಚನಾ ಸಿಂಗ್ ಮುಂತಾದವರು ಕಾಣಿಸಿಕೊಂಡಿರುವ 'ಮಾಮು ಟೀ ಅಂಗಡಿ' ನವೆಂಬರ್ 20 ರಂದು ರಾಜ್ಯಾದ್ಯಂತ ತೆರೆ ಮೇಲೆ ಅಪ್ಪಳಿಸಲಿದೆ. ಸಂಭಾವನೆ ಪಡೆಯದೇ ನಟಿಸಿರುವ ಸ್ಟಾರ್ ನಟರ ಮಲ್ಟಿ ಟೀ ಅಂಗಡಿ ಹೇಗಿರುತ್ತದೆ ಅಂತ ಕಾದು ನೋಡೋಣ.
Fresh Kannada

Fresh Kannada

No comments:

Post a Comment

Google+ Followers

Powered by Blogger.