Breaking News
recent

ಭಂಗಿರಂಗ 'ರಿಂಗ್ ಮಾಸ್ಟರ್' ಬಗ್ಗೆ ವಿಮರ್ಶಕರ ಅಭಿಪ್ರಾಯವೇನು?

ಬಹುಮುಖ ಪ್ರತಿಭೆ ಎನ್ನಲಡ್ಡಿಯಿಲ್ಲದ 'ಬಿಗ್ ಬಾಸ್' ಖ್ಯಾತಿಯ ಕನ್ನಡ ನಟ ಅರುಣ್ ಸಾಗರ್, ನಟಿ ನಿರೂಪಕಿ ಅನುಶ್ರೀ, ಕಾಣಿಸಿಕೊಂಡಿರುವ 'ರಿಂಗ್ ಮಾಸ್ಟರ್' ಈ ವಾರ ಅದ್ದೂರಿಯಾಗಿ ಬಿಡುಗಡೆಗೊಂಡಿದೆ. 
ಭಂಗಿರಂಗ 'ರಿಂಗ್ ಮಾಸ್ಟರ್' ಬಗ್ಗೆ ವಿಮರ್ಶಕರ ಅಭಿಪ್ರಾಯವೇನು?

ನಟ ಅರುಣ್ ಸಾಗರ್ ಅವರ ಸಿನಿಮಾ ಪಯಣದಲ್ಲೊಂದು ವಿಭಿನ್ನವಾಗಿರುವ ಥ್ರಿಲ್ಲರ್ ಕಥೆಯನ್ನಾಧರಿಸಿದ 'ರಿಂಗ್ ಮಾಸ್ಟರ್' ಚಿತ್ರಕ್ಕೆ ಖ್ಯಾತ ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ನವ ನಿರ್ದೇಶಕ ವಿಶ್ರುತ್ ನಾಯಕ್ ನಿರ್ದೇಶನದ ನಟ ಅರುಣ್ ಸಾಗರ್, ಅನುಶ್ರೀ, ಶ್ವೇತಾ ಹಾಗೂ ನಟ ಶೃಂಗ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ 'ರಿಂಗ್ ಮಾಸ್ಟರ್' ಆಟದ ಬಗ್ಗೆ ಕನ್ನಡದ ಖ್ಯಾತ ದಿನಪತ್ರಿಕೆಗಳು ನೀಡಿರುವ ಮಿಶ್ರ ವಿಮರ್ಶೆಗಳ ಕಲೆಕ್ಷನ್ಸ್ ಇಲ್ಲಿದೆ. ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ..

ಭಂಗಿರಂಗ 'ರಿಂಗ್ ಮಾಸ್ಟರ್' ಬಗ್ಗೆ ವಿಮರ್ಶಕರ ಅಭಿಪ್ರಾಯವೇನು?

1. ತಪ್ಪು ಮಾಡದವರಿಗೂ ಶಿಕ್ಷೆ ತಪ್ಪಿದ್ದಲ್ಲ: ಉದಯವಾಣಿ 
ಶ್ರೀಮಂತಿಕೆಯ ಮದ, ದುಂದುವೆಚ್ಚ, ಅಕ್ರಮ ಸಂಪರ್ಕಗಳು, ಇವು ಯಾವುದೇ ಕಾಲಕ್ಕೆ ಶ್ರೀಮಂತ ಹುಡುಗರನ್ನು ಆರೋಪಿ ಸ್ಥಾನಕ್ಕೆ ನಿಲ್ಲಿಸೋ ದೂರುಗಳು. ಅದನ್ನು ಹಾಗೆ ಇಟ್ಟಿರುವ ನಿರ್ದೇಶಕರು ಒಂದೇ ಕೋಣೆಯಲ್ಲಿ ಮೊದಲರ್ಧ ಸಂಭಾಷಣೆ, ದ್ವಿತೀಯಾರ್ಧ ಆಕ್ಷನ್ ಮೂಲಕ ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ. ಹಾಗೆ ನೋಡಿದರೆ ಅವರ ಸಿನಿಮಾಕ್ಕೆ ಹೀರೋ ಕೂಡ ಅರುಣ್ ಸಾಗರ್, ವಿಲನ್ ಕೂಡ ಅರುಣ್. ಬಹಳಷ್ಟು ಕಾಲ ಕಿರುಚುತ್ತಲೇ ಇರುವ ಅರುಣ್ ತಮ್ಮ ಅಗಾಧ ಪ್ರತಿಭೆಯನ್ನು ನಾಟಕೀಯವಾಗಿ ಚಿತ್ರದ ತುಂಬಾ ತುಂಬಿದ್ದಾರೆ. -ವಿಕಾಸ್ ನೇಗಿಲೋಣಿ

2. ಹಲವಾರು ಬಂಧಗಳ ಸೂತ್ರದಾರ: ಪ್ರಜಾವಾಣಿ 
ಅರುಣ್ ಸಾಗರ್ ಚಿತ್ರದ ಸೂತ್ರದಾರ. ಅವರ ವರ್ತನೆ ಸನ್ನಿವೇಶದಿಂದ ಸನ್ನಿವೇಶಕ್ಕೆ ಬದಲಾಗುತ್ತದೆ. ಇದು ಸಿನಿಮಾದ ಮಿತಿ ಮತ್ತು ಶಕ್ತಿಯೂ ಹೌದು. ಅವರ ಬದಲಾಗುವಿಕೆ ಮೆಚ್ಚುಗೆಗೆ ಅರ್ಹವಾದಂತೆ 'ಅತಿಯಾಯಿತೇ;' ಎಂದು ಮೂಗುಮುರಿಯಲು ಕಾರಣವಾಗುತ್ತದೆ. ಆರಂಭದಲ್ಲಿ ಕೋಣೆಯೊಳಗೆ ಆವರಿಸುವ ತಂಬಾಕಿನ ಹೊಗೆ ಮತ್ತು ಸನ್ನಿವೇಶಗಳು ಅತಿ ಎನಿಸುತ್ತದೆ.- ಡಿ.ಎಂ.ಕುರ್ಕೆ ಪ್ರಶಾಂತ್ 

3. ಮಾಸ್ಟರ್ ಮುಂದೆ ಪ್ರೇಕ್ಷಕನೇ ಕಟ್ ಡೌನ್: ಕನ್ನಡಪ್ರಭ 
ದಾರಿ ತಪ್ಪಿದ ಇಬ್ಬರು ಹುಡುಗಿಯರು, ಒಬ್ಬ ಹುಡುಗನ ಮೂಲಕ ಇಂದಿನ ಯುವ ಸಮುದಾಯಕ್ಕೆ ಬದುಕಿನ ಪಾಠ ಹೇಳುವ ಭಂಗಿರಂಗನಾಗಿ ಅರುಣ್ ಸಾಗರ್ ಹೊಸ ಅವತಾರ ಎತ್ತಿದ್ದಾರೆ. ಅವರ ವೇಷ, ಸಂಭಾಷಣೆಗಳು, ವರ್ತನೆ, ನಟನೆ ನೋಡಿದಾಗ ಇಂಗ್ಲಿಷ್ ನಾಟಕವನ್ನು ನೋಡಿದಂತಾಗುತ್ತದೆ. ಇಡೀ ಚಿತ್ರವನ್ನು ಒಂದೇ ಮನೆಯಲ್ಲಿ ಮಾಡಿದ್ದಾರೆ ಎನ್ನುವ ಪ್ರಯೋಗವನ್ನು ಬದಿಗಿಟ್ಟರೆ 'ರಿಂಗ್ ಮಾಸ್ಟರ್' ಮಾಮೂಲಿ ಸಿನಿಮಾ. ಸಾಕಷ್ಟು ತಾಳ್ಮೆ ಪರೀಕ್ಷೆ ಮಾಡುವ ಚಿತ್ರದಲ್ಲಿ ಹಿಂಸೆ ಮತ್ತು ಬೋಧನೆ ಎರಡೂ ಅತಿರೇಕವಾಗಿ ಮೂಡಿಬಂದಿದೆ.-ಆರ್ ಕೇಶವಮೂರ್ತಿ

4. ದೇವರ ಮುಖವಾಡದಲ್ಲಿ ದೆವ್ವ: ವಿಜಯ ಕರ್ನಾಟಕ 
ಸ್ವಾಸ್ಥ ಸಮಾಜಕ್ಕೆ ನಿಜವಾಗಲೂ ಬೇಕಾಗಿರುವುದು ಏನು ಎನ್ನುವುದನ್ನು ಅರಿಯದವರು, ಹಿಂಸೆಯೇ ಎಲ್ಲಕ್ಕೂ ಪರಿಹಾರ ಎಂಬುದನ್ನು ನಂಬಿಕೊಂಡ ಅಜ್ಞಾನಿಗಳು ಪ್ರವಚನ ಕೊಟ್ಟರೆ ಏನಾಗುತ್ತದೆ ಎನ್ನುವುದಕ್ಕೆ 'ರಿಂಗ್ ಮಾಸ್ಟರ್' ಚಿತ್ರ ಸಾಕ್ಷಿ. ಮನರಂಜನೆ ಹುಡುಕಿ ಬರುವ ಪ್ರೇಕ್ಷಕ ಬರೀ ಹಿಂಸೆಯನ್ನು ನೋಡಿ ಸುಸ್ತಾಗುವುದು ಖಂಡಿತ.- ಪದ್ಮಾ ಶಿವಮೊಗ್ಗ


Fresh Kannada

Fresh Kannada

No comments:

Post a Comment

Google+ Followers

Powered by Blogger.