Breaking News
recent

ಪರೀಕ್ಷೆ ಬರೆಯಲು ಕುಡಿದು ಬಂದ್ರು ವಿದ್ಯಾರ್ಥಿನಿಯರು: ಮುಂದೇನು?

ಚೆನ್ನೈ: ಶಿಕ್ಷಕರು ಶಾಲೆಗೆ ಕುಡಿದು ಬಂದು ಪಾಠ ಮಾಡುವುದನ್ನು ನೋಡಿರುತ್ತೀರಾ. ಆದರೆ ಯಾವತ್ತದ್ರೂ ವಿದ್ಯಾರ್ಥಿಗಳು ಕುಡಿದು ಶಾಲೆಗೆ ಬಂದಿದ್ದನ್ನು ನೋಡಿದ್ದೀರಾ. ತಮಿಳುನಾಡಿನಲ್ಲಿ ಇಂತಹದೊಂದು ಘಟನೆ ನಡೆದಿದೆ.
ಪರೀಕ್ಷೆ ಬರೆಯಲು ಕುಡಿದು ಬಂದ್ರು ವಿದ್ಯಾರ್ಥಿನಿಯರು: ಮುಂದೇನು?

ತಮಿಳುನಾಡಿನ ತಿರುಚೆನಗೋಡೆ ಎಂಬಲ್ಲಿ ಈ ಘಟನೆ ನಡೆದಿದ್ದು, 11 ತರಗತಿಯಲ್ಲಿ ಓದುತ್ತಿದ್ದ 7 ಮಂದಿ ಹೈ ಸ್ಕೂಲ್ ವಿದ್ಯಾರ್ಥಿನಿಯರು ಪರೀಕ್ಷೆ ಬರೆಯಲು ಶಾಲೆಗೆ ಆಗಮಿಸಿದ್ದರು. ಇದನ್ನು ನೋಡಿ ಕೆಂಡಮಂಡಲರಾದ ಆಡಳಿತ ಮಂಡಳಿ ಎಲ್ಲಾ ವಿದ್ಯಾರ್ಥಿನಿಯರನ್ನು ಡಿಬಾರ್ ಮಾಡಿದೆ.
ಬರ್ತಡೇ ಪಾರ್ಟಿ: ತಮಿಳುನಾಡಿನಾದ್ಯಂತ ಮಳೆಯಿದ್ದ ಕಾರಣ ನವೆಂಬರ್ 16ರಂದು ನಡೆಯಬೇಕಿದ್ದ ಮಧ್ಯವಾರ್ಷಿಕ ಪರೀಕ್ಷೆ 21ಕ್ಕೆ ಮುಂದಾಡಲಾಗಿತ್ತು. ಅಂದೇ ಈ ವಿದ್ಯಾರ್ಥಿನಿಯೊಬ್ಬಳ ಹುಟ್ಟುಹಬ್ಬ ಕೂಡ ಇತ್ತು. ಹೀಗಾಗಿ ತರಗತಿಗೆ ಲಿಕ್ಕರ್ ತಂದು ವಿದ್ಯಾರ್ಥಿನಿಯರು ಪಾರ್ಟಿ ಮಾಡಲು ಆರಂಭಿಸಿದ್ದಾರೆ. ಅದರಲ್ಲಿ 5 ವಿದ್ಯಾರ್ಥಿನಿಯರು ಮೊದಲ ಬಾರಿಗೆ ಮದ್ಯಪಾನ ಮಾಡಿದ್ದರು ಎನ್ನಲಾಗಿದೆ. ಸದ್ಯ ಎಲ್ಲಾ ವಿದ್ಯಾರ್ಥಿನಿಯರಿಗೂ ಆಡಳಿತ ಮಂಡಳಿ ಪೋಷಕರನ್ನು ಕರೆಸಿ ಟಿಸಿ ನೀಡಿ ಮನೆಗೆ ಕಳುಹಿಸಿದ್ದಾರೆ.
Fresh Kannada

Fresh Kannada

No comments:

Post a Comment

Google+ Followers

Powered by Blogger.