Breaking News
recent

ಕರಾವಳಿ ಜಿಲ್ಲೆಯಲ್ಲಿ 'ರೈಟ್ ಬೊಕ್ಕ ಲೆಫ್ಟ್' ಸಿನಿಮಾ ಗುಂಗು

ಮಂಗಳಾಂಬಿಕಾ ಪ್ರೊಡಕ್ಷನ್ ಲಾಂಛನದಲ್ಲಿ ತಯಾರಾದ ಕಲ್ಲಡ್ಕ ಚಂದ್ರಶೇಖರ ರೈ ನಿರ್ಮಾಣದಲ್ಲಿ ಯತೀಶ್ ಆಳ್ವ ನಿರ್ದೇಶನದ 'ರೈಟ್ ಬೊಕ್ಕ ಲೆಫ್ಟ್' ತುಳು ಸಿನಿಮಾ ಕರಾವಳಿ ಜಿಲ್ಲೆಯಾದ್ಯಂತ 10 ಟಾಕೀಸ್ ಗಳಲ್ಲಿ ತೆರೆಕಂಡಿದೆ. 
ಕರಾವಳಿ ಜಿಲ್ಲೆಯಲ್ಲಿ 'ರೈಟ್ ಬೊಕ್ಕ ಲೆಫ್ಟ್' ಸಿನಿಮಾ ಗುಂಗು

ಮಂಗಳೂರಿನಲ್ಲಿ ಜ್ಯೋತಿ. ಬಿಗ್ ಸಿನೆಮಾಸ್, ಸಿನಿಪೊಲಿಸ್, ಪಿ.ವಿ.ಆರ್, ಉಡುಪಿಯಲ್ಲಿ ಅಲಂಕಾರ್, ಪುತ್ತೂರಿನಲ್ಲಿ ಅರುಣಾ, ಕಾರ್ಕಳದಲ್ಲಿ ರಾಧಿಕಾ, ಬಿ.ಸಿ.ರೋಡ್ ನಲ್ಲಿ ನಕ್ಷತ್ರ, ಮೂಡಬಿದ್ರೆಯಲ್ಲಿ ಅಮರಶ್ರೀ, ಬೆಳ್ತಂಗಡಿಯಲ್ಲಿ ಭಾರತ್ ಟಾಕೀಸ್ ನಲ್ಲಿ ಪ್ರದರ್ಶನ ಕಾಣುತ್ತಿದೆ.

ರೈಟ್ ಬೊಕ್ಕ ಲೆಫ್ಟ್' ತುಳು ಸಿನಿಮಾದ ಬಿಡುಗಡೆ ಸಮಾರಂಭವು ಮಂಗಳೂರಿನ ಜ್ಯೋತಿ ಥಿಯೇಟರ್ ನಲ್ಲಿ ಜರಗಿತು. ಸಮಾರಂಭವನ್ನು ಕಲ್ಲಡ್ಕ ಪರಮೇಶ್ವರಿ ರೈ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು.

ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್ ಬೈಲ್ ಮುಖ್ಯ ಅತಿಥಿಯಾಗಿದ್ದರು. ತುಳು ಸಿನಿಮಾರಂಗದಲ್ಲಿ ರೈಟ್ ಬೊಕ್ಕ ಲೆಫ್ಟ್ ಸಿನಿಮಾ ಶತದಿನವನ್ನು ಆಚರಿಸಲಿ ಎಂದು ಶುಭ ಹಾರೈಕ್ಸಿದರು. ನ್ಯಾಯವಾದಿ ಕೆ.ಎಸ್.ಕಲ್ಲೂರಾಯ ಅವರು ಮಾತನಾಡಿ ತುಳುವಿನಲ್ಲಿ ಸದಭಿರುಚಿಯ ಚಿತ್ರಗಳು ಮೂಡಿ ಬರುವಂತಾಗಲಿ ಎಂದರು.

ರೈಟ್ ಬೊಕ್ಕ ಲೆಫ್ಟ್ ಟ್ರೈಲರ್:
ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ ಮಾತನಾಡಿ ತುಳುವಿನಲ್ಲಿ ಹಾಸ್ಯದ ಜತೆಗೆ ಸಮಾಜಕ್ಕೆ ಸಂದೇಶ ನೀಡುವ ಚಿತ್ರಗಳು ನಿರ್ಮಾಣವಾಗಲಿ ಎಂದು ಶುಭ ಹಾರೈಸಿದರು.

ಕುಡೊಂಜಿ ಜನ್ಮೊಗು ಹಾಡು:
ಸಮಾರಂಭದಲ್ಲಿ ಚಲನ ಚಿತ್ರದ ನಿರ್ಮಾಪಕ ಕಲ್ಲಡ್ಕ ಚಂದ್ರಶೇಖರ ರೈ, ಸೆನ್ಸಾರ್ ಮಂಡಳಿಯ ಸದಸ್ಯ ಡಾ.ಶಂಕರ್, ನಾಗೇಶ್, ರಾಜೇಶ್, ಮಂಜುನಾಥ ಪಾಂಡವಪುರ, ನಾಯಕಿ ನಟಿ ಛಾಯಾ ಅಶ್ವಿನಿ ಸಂಗೀತ ನಿರ್ದೇಶಕ ಡಾ.ನಿತಿನ್ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು. ಕಲ್ಲಡ್ಕ ಚಂದ್ರ ಶೇಖರ ರೈ ಸ್ವಾಗತಿಸಿದರು. ಭಾಸ್ಕರ್ ಕಾರ್ಯಕ್ರಮ ನಿರ್ವಹಿಸಿದರು.
Fresh Kannada

Fresh Kannada

No comments:

Post a Comment

Google+ Followers

Powered by Blogger.