Breaking News
recent

ವೀಕ್ಷಕರೇ ಹೇಳಿದ್ದು.! 'ಬಿಗ್ ಬಾಸ್' ಮನೆಯಲ್ಲಿ 'ಡ್ರಾಮಾ ಕ್ವೀನ್' ಇವರೇ.!

'ನಾಟಕಕ್ಕೆ ಇಲ್ಲಿ ಜಾಗ ಇಲ್ಲ'.....ಇದು 'ಬಿಗ್ ಬಾಸ್-3' ಕಾರ್ಯಕ್ರಮದ ಟ್ಯಾಗ್ ಲೈನ್.
ಕೃತಿಕಾ

ಮನೆಯ ಮೂಲೆ ಮೂಲೆಯಲ್ಲೂ ಕ್ಯಾಮರಾ ಫಿಕ್ಸ್ ಮಾಡಿರುವ 'ಬಿಗ್ ಬಾಸ್', ನಾಟಕಕ್ಕೆ ಜಾಗವೇ ಇಲ್ಲ ಅಂತ ಹೇಳ್ಬಹುದು. ಆದ್ರೂ, ಕ್ಯಾಮರಾ ಮುಂದೆ ನಾಟಕ ಮಾಡುವವರ ಸಂಖ್ಯೆ 'ಬಿಗ್ ಬಾಸ್-3' ಕಾರ್ಯಕ್ರಮದಲ್ಲಿ ಕಮ್ಮಿ ಇಲ್ಲ ಅನ್ನೋದು ವೀಕ್ಷಕರ ಅಭಿಪ್ರಾಯ.

'ಬಿಗ್ ಬಾಸ್' ಮನೆಗೆ ಕಾಲಿಟ್ಟಾಗಿನಿಂದಲೂ, ಕಿರುತೆರೆ ನಟಿ 'ರಾಧಾ ಕಲ್ಯಾಣ' ಖ್ಯಾತಿಯ ಕೃತಿಕಾ, ನಟಿ ಪೂಜಾ ಗಾಂಧಿ, ನಟಿ ಶ್ರುತಿ ಮತ್ತು ಗಗನಸಖಿ ನೇಹಾ ಗೌಡ ತುಂಬಾ ನಾಟಕ ಮಾಡ್ತಿದ್ದಾರೆ ಅನ್ನುವ ಅಭಿಪ್ರಾಯ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗಿತ್ತು.

ಇದೇ ವಿಚಾರವಾಗಿ ನಿಮ್ಮ 'ಫ್ರೆಶ್ ಕನ್ನಡ' ಕೂಡ ನಿನ್ನೆ ಟ್ವಿಟ್ಟರ್ ನಲ್ಲಿ ''ಬಿಗ್ ಬಾಸ್' ಮನೆಯಲ್ಲಿ ಡ್ರಾಮಾ ಕ್ವೀನ್ ಯಾರು'' ಅನ್ನುವ POLL ಕಂಡಕ್ಟ್ ಮಾಡಿತ್ತು.!

ಕೃತಿಕಾ ಮತ್ತು ಪೂಜಾ ಗಾಂಧಿ ಪೈಕಿ ಒಬ್ಬರಿಗೆ ವೀಕ್ಷಕರು ವೋಟ್ ಹಾಕ್ಬೇಕಿತ್ತು. ಸಿಕ್ಕ ವೋಟ್ ಗಳ ಪ್ರಕಾರ 'ಡ್ರಾಮಾ ಕ್ವೀನ್' ಪಟ್ಟ ಕೃತಿಕಾಗೆ ಸಿಕ್ಕಿದೆ. 74% ರಷ್ಟು ಮಂದಿ ಕೃತಿಕಾ 'ಡ್ರಾಮಾ ಕ್ವೀನ್' ಅಂತ ಮತ ಹಾಕಿದ್ರೆ, 26% ಮಂದಿ ಪೂಜಾ ಗಾಂಧಿ ಅಂತ ಅಭಿಪ್ರಾಯ ಪಟ್ಟಿದ್ದಾರೆ.
Fresh Kannada

Fresh Kannada

No comments:

Post a Comment

Google+ Followers

Powered by Blogger.