Breaking News
recent

ಮಂಡ್ಯದಲ್ಲಿ ವೆಂಕಟ್ ಭಾವಚಿತ್ರಕ್ಕೆ ಸುದೀಪ್ ಅಭಿಮಾನಿಗಳಿಂದ ಹಾಲಿನ ಅಭಿಷೇಕ

ಮಂಡ್ಯ: ಹುಚ್ಚ ವೆಂಕಟ್ ಅವರನ್ನು ಮತ್ತೆ ಬಿಗ್ ಬಾಸ್ ಮನೆಗೆ ವಾಪಸ್ ಕರೆಸಿಕೊಳ್ಳಬೇಕೆಂದು ಸುದೀಪ್ ಅಭಿಮಾನಿಗಳು ಮಂಡ್ಯದಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಮಂಡ್ಯದಲ್ಲಿ ವೆಂಕಟ್ ಭಾವಚಿತ್ರಕ್ಕೆ ಸುದೀಪ್ ಅಭಿಮಾನಿಗಳಿಂದ ಹಾಲಿನ ಅಭಿಷೇಕ

ಮಂಡ್ಯದ ಗುತ್ತಲು ರಸ್ತೆಯಲ್ಲಿ ಸೇರಿದ ಯುವಕರ ತಂಡ ಹುಚ್ಚ ವೆಂಕಟ್ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಿದರು. ನಂತರ ಮಾತನಾಡಿದ ಅವರು ನಾವು ಸುದೀಪ್ ಅಭಿಮಾನಿಗಳು. ಆದರೆ ಹುಚ್ಚ ವೆಂಕಟ್ ಅವರನ್ನು ಬಿಗ್ ಬಾಸ್‍ನಿಂದ ತೆಗೆದು ಹಾಕಿರುವುದು ನೋವಾಗಿದೆ. ಮನೆಯಲ್ಲಿ ಅವರೇ ಕೇಂದ್ರಬಿಂದು. ಹೀಗಾಗಿ ಮತ್ತೆ ಅವರನ್ನು ಮನೆಗೆ ಸೇರಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.
ಸುದೀಪ್ ಅವರು ಇನ್ನೊಮ್ಮೆ ವಿಡಿಯೋ ದೃಶ್ಯಗಳನ್ನು  ನೋಡಿ, ಹುಚ್ಚ ವೆಂಕಟ್‍ಗೆ ಮತ್ತೊಮ್ಮೆ ಬಿಗ್ ಬಾಸ್ ಮನೆಯಲ್ಲಿ ಅವಕಾಶ ಕೊಡಬೇಕು ಎಂದು ಅವರು ವಿನಂತಿಸಿಕೊಂಡರು.

ಮಂಡ್ಯದಲ್ಲಿ ವೆಂಕಟ್ ಭಾವಚಿತ್ರಕ್ಕೆ ಸುದೀಪ್ ಅಭಿಮಾನಿಗಳಿಂದ ಹಾಲಿನ ಅಭಿಷೇಕ ವೀಡಿಯೊ ವೀಡಿಯೊ ಡೌನ್ಲೋಡ್ ಮಾಡಿಕೊಳ್ಳಿ
MediaBunch
Fresh Kannada

Fresh Kannada

No comments:

Post a Comment

Google+ Followers

Powered by Blogger.