Breaking News
recent

ಮುದ್ದು ಫ್ರೆಂಡ್ ಗೆ ದೀಪಾವಳಿ ಗಿಫ್ಟ್ ಮಾಡಿದ 'ಉಗ್ರಂ' ಬೆಡಗಿ

ಇದೀಗ ಎಲ್ಲೆಡೆ ದೀಪಾವಳಿ ಹಬ್ಬದ ಸಂಭ್ರಮ, ಎಲ್ಲರೂ ತಮ್ಮ ತಮ್ಮ ಗೆಳೆಯರಿಗೆ, ಸಂಬಂಧಿಕರಿಗೆ ವಿಧ ವಿಧದ ಉಡುಗೊರೆಗಳನ್ನು ಈ ಸಂಧರ್ಭದಲ್ಲಿ ನೀಡೋದು ಸಹಜ. ಆದ್ರೆ ನಮ್ಮ ಸ್ಯಾಂಡಲ್ ವುಡ್ ನ 'ಉಗ್ರಂ' ಬೆಡಗಿ ಹರಿಪ್ರಿಯಾ ಅವರು ಮಾತ್ರ ತಮ್ಮ ನೆಚ್ಚಿನ ಫ್ರೆಂಡ್ ಗೆ ಒಂದು ಬ್ಯೂಟಿಫುಲ್ ಗಿಫ್ಟ್ ನೀಡಿದ್ದಾರೆ.
ಮುದ್ದು ಫ್ರೆಂಡ್ ಗೆ ದೀಪಾವಳಿ ಗಿಫ್ಟ್ ಮಾಡಿದ 'ಉಗ್ರಂ' ಬೆಡಗಿ

ಅಂದಹಾಗೆ 'ನೀರ್ ದೋಸೆ' ಬೆಡಗಿ ಹರಿಪ್ರಿಯಾ ಅವರು ನೀಡಿದ ದೀಪಾವಳಿ ಉಡುಗೊರೆ ಯಾವುದು ಅಂತೀರಾ, ಅದೇ ಕಾಲರ್ ಬೆಲ್ಟ್! ಶಾಕ್ ಆದ್ರಾ?, ಕಾಲರ್ ಬೆಲ್ಟ್ ಗಿಫ್ಟ್ ಮಾಡಿದ್ದೇನೋ ನಿಜ. ಆದರೆ ಹರಿಪ್ರಿಯಾ ಉಡುಗೊರೆ ನೀಡಿದ್ದು, ತಮ್ಮ ಮುದ್ದಿನ ನಾಯಿಗೆ.

ನಟಿ ಹರಿಪ್ರಿಯಾ ಅವರು ತಮ್ಮ ಪ್ರೀತಿಯ ನಾಯಿಯನ್ನು 'ಬೇಬಿ' ಎಂದು ಕರೆಯುತ್ತಿದ್ದು, ಅದಕ್ಕೆ ನೀಲಿ ಬಣ್ಣದ ಹೊಸ ಕಾಲರ್ ಬೆಲ್ಟ್ ಹಾಕಿ ಮುದ್ದಿನ ನಾಯಿಯೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮ ಪಟ್ಟಿದ್ದಾರೆ. ಇದೀಗ ಆ ಫೋಟೊವನ್ನು ಟ್ವಿಟ್ಟರ್ ನಲ್ಲಿ ಹಾಕಿ ಖುಷಿ ಪಟ್ಟಿದ್ದಾರೆ.

ಪ್ರಾಣಿ ಪ್ರೀಯೆ ಹರಿಪ್ರಿಯಾ ಅವರು ತಮ್ಮ ಮುದ್ದು ನಾಯಿಯನ್ನು ತುಂಬಾ ಪ್ರೀತಿಸುತ್ತಿದ್ದು, ಇದೀಗ ಅದಕ್ಕೆ ದೀಪಾವಳಿ ಉಡುಗೊರೆ ನೀಡಿ ತಾವು ತಮ್ಮ ಪ್ರೀತಿಯ ಪಪ್ಪಿಯೊಂದಿಗೆ ಭರ್ಜರಿ ದೀಪಾವಳಿ ಆಚರಿಸುತ್ತಿದ್ದಾರೆ.
Fresh Kannada

Fresh Kannada

No comments:

Post a Comment

Google+ Followers

Powered by Blogger.