Breaking News
recent

Bigg Boss maneya niyama murididdakke Huccha Venkat Bigg Boss maneyinda 'out'

Bigg Boss maneya niyama murididdakke Huccha Venkat Bigg Boss maneyinda 'out'

Bigg Boss maneya niyama murididdakke Huccha Venkat Bigg Boss maneyinda 'out'

ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಸೀಸನ್ 3ರ ಸ್ಪರ್ಧಿಯಾಗಿ ಎಲ್ಲರ ಗಮನ ಸೆಳೆದಿದ್ದ ಹುಚ್ಚಾ ವೆಂಕಟ್ ಬಿಗ್ ಬಾಸ್ ಮನೆಯಿಂದ ಹೊರಬಿದ್ದಿದ್ದಾರೆ.

ಬಿಗ್ ಬಾಸ್ ಸೀಸನ್ 3ರಲ್ಲಿ ಹುಚ್ಚಾ ವೆಂಕಟ್ ಅವರ ಹೈಡ್ರಾಮಾದಿಂದಾಗಿ ಎಲ್ಲರ ಗಮನ ಸೆಳೆದಿದ್ದರು. ಇದೀಗ ಬಿಗ್ ಬಾಸ್ ಮನೆಯಲ್ಲಿನ ಶೋ ನಿಯಮ ಮುರಿದಿರುವ ಹುಚ್ಚ ವೆಂಕಟ್ ಅವರಿಗೆ ಗೇಟ್ ಪಾಸ್ ನೀಡಲಾಗಿದೆ ಎಂದು ಟಿವಿ9 ವರದಿ ತಿಳಿಸಿದೆ.

ಸ್ಪರ್ಧಾಳು (ರವಿ ಮೂರುರ್ ಜೊತೆ ಗಲಾಟೆ ಮಾಡಿಕೊಂಡು ಹಲ್ಲೆಗೆ ಮುಂದಾಗಿದ್ದರು ಎಂದು ಮೂಲಗಳು ತಿಳಿಸಿವೆ) ಮೇಲೆ ಹಲ್ಲೆಗೆ ಯತ್ನಿಸಿದ್ದರಿಂದ ಹುಚ್ಚಾ ವೆಂಕಟ್ ಅವರನ್ನು ಬಿಗ್ ಬಾಸ್ ಮನೆಯಿಂದ ಹೊರಕ್ಕೆ ಹಾಕಲಾಗಿದೆ ಎಂದು ಕಲರ್ಸ್ ಕನ್ನಡದ ಬಿಗ್ ಬಾಸ್ ಶೋ ನಿರ್ದೇಶಕ ಪರಮೇಶ್ವರ್ ಗುಂಡ್ಕಲ್ ತಿಳಿಸಿದ್ದಾರೆ.


ರಮ್ಯಾಗಾಗಿ ಮನೆ ಖಾಲಿ ಮಾಡಿದ್ನಾ ವೆಂಕಟ್?
ಬಿಗ್‌ಬಾಸ್‌ ನ ಮೂರನೇ ಸೀಸನ್ ನ ಬಿಗ್‌ಬಾಸ್‌ ಎಂದೇ ಬಿಂಬಿಸಲ್ಪಟ್ಟಿದ್ದ ಹುಚ್ಚಾ ವೆಂಕಟ್ ಸದ್ಯ ಬಿಗ್ ಬಾಸ್ ಮನೆಯಿಂದ ಕಿಕ್ ಔಟ್ ಆಗಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಹುಚ್ಚಾ ವೆಂಕಟ್ ತಮ್ಮ ರಫ್ ಅಂಡ್ ಟಫ್ ಮ್ಯಾನರಿಸಂ ಮೂಲಕ ಬಿಗ್ ಬಾಸ್ ಮನೆಗೆ ಕಿಚ್ಚು ಹಚ್ಚಿದ್ದರು. ಹೀಗೆ ತಮ್ಮ ಸ್ವಾಭಾವವನ್ನು ಬಿಡದ ಹುಚ್ಚಾ ವೆಂಕಟ್ ಸ್ಫರ್ಧಾಳುಗಳ ಮೇಲೆ ಹಲ್ಲೆಗೆ ಯತ್ನಿಸಿದ್ದು, ಬಿಗ್ ಬಾಸ್ ಮನೆಯ ನಿಯಮ ಉಲ್ಲಂಘಿಸಿದ್ದಾರೆ. ಈ ಹಿನ್ನೆಲೆಯಲ್ಲಿ ವೆಂಕಟ್ ನನ್ನು ಮನೆಯಿಂದ ಹೊರ ಹಾಕಲಾಗಿದೆ ಎಂದು ಬಿಗ್ ಬಾಸ್ ಕಾರ್ಯಕ್ರಮದ ನಿರ್ದೇಶಕ ಪರಮೇಶ್ವರ್ ಗುಂಡ್ಕಲ್ ಹೇಳಿದ್ದಾರೆ.
ರಮ್ಯಾಗಾಗಿ ಮನೆ ಖಾಲಿ ಮಾಡಿದ್ನಾ ವೆಂಕಟ್
ಬಿಗ್ ಬಾಸ್ ಮನೆಗೆ ನಟಿ ರಮ್ಯಾ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ನೀಡುತ್ತಿದ್ದಾರೆ. ರಮ್ಯಾಗಾಗಿ ಹುಚ್ಚಾ ವೆಂಕಟನನ್ನು ಬಿಗ್ ಬಾಸ್ ಮನೆಯಿಂದ ಹೊರ ಹಾಕಲಾಗುತ್ತಿದೆಯೇ ಎಂಬ ಸಂಶಯವೂ ಒಂದೆಡೆ ಮೂಡತೊಡಗಿದೆ.
Source Kannadaprabha 
Fresh Kannada

Fresh Kannada

No comments:

Post a Comment

Google+ Followers

Powered by Blogger.