Breaking News
recent

5 ದಿನ ಯಶ್ ಮಾಸ್ಟರ್ ಪೀಸ್ ಆಡಿಯೋ ರಿಲೀಸ್!

ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹು ನಿರೀಕ್ಷಿತ ‘ಮಾಸ್ಟರ್ ಪೀಸ್’ ಚಿತ್ರದ ಆಡಿಯೋ ಒಂದಲ್ಲ ಎರಡಲ್ಲ ಐದು ದಿನ ರಿಲೀಸಾಗುತ್ತಿದೆ. ಚಿತ್ರದ ಒಂದೊಂದು ಹಾಡನ್ನು ಒಂದೊಂದು ದಿನ ಎಫ್.ಎಮ್ ಚಾನೆಲ್ ಮೂಲಕ ರಿಲೀಸ್ ಮಾಡುವ ಕಾರ್ಯಕ್ರಮವನ್ನು ಚಿತ್ರತಂಡ ಹಮ್ಮಿಕೊಂಡಿದ್ದು, ಚಿತ್ರದಲ್ಲಿನ ‘ಅಣ್ಣನಿಗೆ ಲವ್ವಾಗಿದೆ’ ಹಾಡು ನಾಳೆ ಎಫ್. ಎಂ ಮೂಲಕ ಲೋಕಾರ್ಪಣೆಯಾಗಲಿದೆ.
5 ದಿನ ಯಶ್ ಮಾಸ್ಟರ್ ಪೀಸ್ ಆಡಿಯೋ ರಿಲೀಸ್!

4, 7, 8, 10 ಹೀಗೆ ಐದು ದಿನ ಐದು ಹಾಡುಗಳು ಎಫ್.ಎಂ ಮೂಲಕವೇ ಕೇಳುಗರಿಗೆ ಅರ್ಪಣೆಯಾಗಲಿವೆ. ಅಂದಹಾಗೆ ಈ ರೀತಿ ಹಾಡುಗಳನ್ನು ಬಿಡುಗಡೆ ಮಾಡಲು ಕಾರಣ..? ಒಂದು ಮಾಮೂಲಿಯಾಗಿ ಯಾವುದೋ ಒಂದು ಹಾಲ್‍ನಲ್ಲಿ ಕಾರ್ಯಕ್ರಮ ಆಯೋಜಿಸಿ ಬಿಡುಗಡೆ ಮಾಡಿದರೆ ವಿಶೇಷತೆ ಏನಿರಲ್ಲ ಎನ್ನುವುದು. ಇನ್ನೊಂದು ಚಿತ್ರತಂಡ ಸದ್ಯ ಶೂಟಿಂಗ್, ಪೋಸ್ಟ್ ಪ್ರೊಡಕ್ಷನ್ ಎಂದು ಬ್ಯುಸಿಯಾಗಿರುವುದರಿಂದ ಆಡಿಯೋ ರಿಲೀಸ್ ಮಾಡುವುದಕ್ಕೆ ಟೈಮ್ ಇಲ್ಲದೇ ಇರುವುದರಿಂದ ಈ ರೀತಿಯಾಗಿ ಆಡಿಯೋ ರಿಲೀಸ್ ಮಾಡುತ್ತಿದೆ.
ಚಿತ್ರದಲ್ಲಿ ಯಶ್‍ಗೆ ಜೋಡಿಯಾಗಿ ಮೊದಲ ಬಾರಿಗೆ ಶಾನ್ವಿ ನಟಿಸುತ್ತಿದ್ದಾರೆ. ಮಂಜು ಮಾಂಡವ್ಯ ನಿರ್ದೇಶನದ ಈ ಚಿತ್ರದ ಬಿಡುಗಡೆಯ ದಿನಾಂಕ ಈಗಾಗಲೇ ಘೋಷಣೆಯಾಗಿದ್ದು, ಚಿತ್ರ ಡಿಸೆಂಬರ್ 24ಕ್ಕೆ ತೆರೆಗೆ ಬರಲಿದೆ.
Fresh Kannada

Fresh Kannada

No comments:

Post a Comment

Google+ Followers

Powered by Blogger.