Breaking News
recent

ಭರ್ಜರಿ 50 ದಿನ ಪೂರೈಸಿದ ಬಾಕ್ಸಾಫೀಸ್ ಸುಲ್ತಾನನ, 'ಐರಾವತ'..!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ, ಈ ವರ್ಷ ಬಹಳ ನಿರೀಕ್ಷೆ ಹುಟ್ಟಿಸಿದ್ದ 'Mr ಐರಾವತ' ಚಿತ್ರ ಭರ್ಜರಿ 50 ದಿನಗಳನ್ನು ಪೂರೈಸಿದ್ದು, ಇದೀಗ 100 ನೇ ದಿನದತ್ತ ದಾಪುಗಾಲಿಕ್ಕುತ್ತಿದೆ.
ಭರ್ಜರಿ 50 ದಿನ ಪೂರೈಸಿದ ಬಾಕ್ಸಾಫೀಸ್ ಸುಲ್ತಾನನ, 'ಐರಾವತ'..!

ಸಿನಿ ವಿಮರ್ಶಕರಿಂದ ಅಷ್ಟಾಗಿ ತೇರ್ಗಡೆ ಹೊಂದದಿದ್ದರೂ ಖ್ಯಾತ ನಿರ್ದೇಶಕ ಎ.ಪಿ ಅರ್ಜುನ್ ಆಕ್ಷನ್-ಕಟ್ ಹೇಳಿದ್ದ 'Mr ಐರಾವತ' ಇದೀಗ ಜನಮೆಚ್ಚುಗೆ ಪಡೆದು ಸುಮಾರು 72 ಚಿತ್ರಮಂದಿರಗಳಲ್ಲಿ ಭರ್ಜರಿ 50 ದಿನಗಳನ್ನು ಪೂರೈಸಿದೆ.

ಬಾಲಿವುಡ್ ಬೆಡಗಿ ಊರ್ವಶಿ ರೌಟೇಲ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಲೀಡ್ ರೋಲ್ ನಲ್ಲಿ ಮಿಂಚಿದ್ದ, 'Mr ಐರಾವತ' ಅಕ್ಟೋಬರ್ 1 ರಂದು ಗ್ರ್ಯಾಂಡ್ ರಿಲೀಸ್ ಆಗಿತ್ತು.

2015 ರಲ್ಲಿ ಸುಮಾರು 30 ಕೋಟಿ ರೂಪಾಯಿಗಳನ್ನು 'Mr ಐರಾವತ' ಚಿತ್ರ ಗಳಿಸಿದೆ ಎಂದು ಹೇಳಲು ಹೆಮ್ಮೆಯಾಗುತ್ತಿದೆ ಎಂದು ಚಿತ್ರದ ನಿರ್ಮಾಪಕ ಸಂದೇಶ್ ನಾಗರಾಜ್ ಅವರು ಸಂಭ್ರಮದಿಂದ ನುಡಿಯುತ್ತಾರೆ.

ಎಲ್ಲಾ ವಿಮರ್ಶಕರಿಗೂ ಅವರ ಅಭಿಪ್ರಾಯ ತಿಳಿಸುವ ಹಕ್ಕಿದೆ, ಆದರೆ ಕೊನೆಗೆ ಫೈನಲ್ ಆಗೋದು ಮಾತ್ರ ಪ್ರೇಕ್ಷಕರದೇ ಅಭಿಪ್ರಾಯ. ಆದ್ದರಿಂದ 'Mr ಐರಾವತನನ್ನು' ಪ್ರೇಕ್ಷಕರು ಗೆಲ್ಲಿಸಿದ್ದಾರೆ, ಒಂದು ರೀತಿಯಲ್ಲಿ ಪ್ರತೀ ಪ್ರೇಕ್ಷಕನೂ ವಿಮರ್ಶಕನೇ. ಸಾಮಾಜಿಕ ಜಾಲತಾಣಗಳಲ್ಲಿ ಪ್ರತೀ ಪ್ರೇಕ್ಷಕನೂ ತನ್ನ ಅಭಿಪ್ರಾಯ ವ್ಯಕ್ತಪಡಿಸುತ್ತಾನೆ, ಎನ್ನುತ್ತಾರೆ ಚಿತ್ರದ ನಿರ್ದೇಶಕ ಎ.ಪಿ ಅರ್ಜುನ್.

'ಇಂದು ಸಿನಿಮಾ ಕ್ಷೇತ್ರ ಎಷ್ಟು ವಾಣಿಜ್ಯಕರಣ ಆಗಿದೆ ಎಂದರೆ, 100 ದಿನ ಪೂರೈಸಿದ ಸಿನಿಮಾ ಮಾಡುವ ನಿರ್ದೇಶಕನಿಗೂ ಅವಕಾಶಗಳ ಮಹಾಪೂರವೇನೂ ಇರುವುದಿಲ್ಲ, ಗಾಂಧಿನಗರದ ಮಂತ್ರ ಏನಪ್ಪಾ ಅಂದ್ರೆ, 'ನನಗೆ ದುಡ್ಡು ತೋರಿಸು' ಎನ್ನುವುದು. ಆದ್ದರಿಂದ ನಮ್ಮಂತವರ ವೃತ್ತಿ ಜೀವನ ತೊಂದರೆಯಲ್ಲಿದೆ.

ಸಿನಿಮಾ ಚೆನ್ನಾಗಿದ್ದು ಬ್ಲಾಕ್ ಬಸ್ಟರ್ ಎನ್ನಿಸಿಕೊಂಡರು, ನಿರ್ಮಾಪಕನಿಗೆ ಲಾಭ ತಂದುಕೊಡುತ್ತದೆ ಹೊರತು ನಿರ್ದೇಶಕರುಗಳ ಮುಂದಿನ ಯೋಜನೆಗೆ ಯಾರೂ ಅವಕಾಶ ನೀಡುವುದಿಲ್ಲ ಎಂದು ನಿರ್ದೇಶಕ ಎ.ಪಿ ಅರ್ಜುನ್ ಅವರು ಬೇಸರ ವ್ಯಕ್ತಪಡಿಸುತ್ತಾರೆ.

ಇನ್ನು 'ಐರಾವತ' ಚಿತ್ರ ನಿರ್ದೇಶನ ಮಾಡುವಾಗ ಹಲವು ಉಬ್ಬು-ತಗ್ಗುಗಳನ್ನು ನೋಡಿದ್ದೇನೆ. ಅದು ನನಗೆ ಪಾಠ ಕಲಿಸಿದೆ. ದೊಡ್ಡ ಸ್ಟಾರ್ ಮತ್ತು ದೊಡ್ಡ ಬಜೆಟ್ ಸಿನಿಮಾವನ್ನು ಎಂದಾಗ ಅದನ್ನ ಚೆನ್ನಾಗಿ ನಿಭಾಯಿಸುವುದನ್ನು ಕಲಿತೆ. ಅದಕ್ಕಿಂತಲೂ ಹೆಚ್ಚಾಗಿ ಚಿತ್ರರಂಗದಲ್ಲಿ ಹೆಚ್ಚು ವೃತ್ತಿಪರತೆಯಿಂದ ಇರುವುದನ್ನು ಕಲಿತೆ ಎನ್ನುತ್ತಾರೆ ಅರ್ಜುನ್.

ಇನ್ನು ತಮ್ಮ ಮುಂದಿನ ಯೋಜನೆಯ ಬಗ್ಗೆ ಹಂಚಿಕೊಂಡ, ನಿರ್ದೇಶಕರು 'ಆರ್ ಎಸ್ ನಿರ್ಮಾಣ ಸಂಸ್ಥೆಯಿಂದ ಒಂದು ಅವಕಾಶವಿದೆ. ನಟ ಧ್ರುವ ಸರ್ಜಾ ಅವರ ಜೊತೆ ಮತ್ತೊಂದು ಯೋಜನೆ ಸಿದ್ಧವಾಗುವ ಸಾಧ್ಯತೆ ಇದೆ. ಹಾಗೆಯೇ ಇನ್ನೆರಡು ಯೋಜನೆಗಳು ಕೈಯಲ್ಲಿದೆ. ಯಾವ ಸಿನಿಮಾ ಆರಂಭ ಮಾಡಬೇಕು ಎನ್ನುವ ಸ್ಪಷ್ಟತೆ ಸಿಕ್ಕ ನಂತರ ಚಿತ್ರೀಕರಣ ಆರಂಭಿಸಲಿದ್ದೇನೆ' ಎನ್ನುತ್ತಾರೆ.
Fresh Kannada

Fresh Kannada

No comments:

Post a Comment

Google+ Followers

Powered by Blogger.