Breaking News
recent

'ಬಿಗ್ ಬಾಸ್ 3' ಮೂಲಕ ಸಾವಿರಾರು ಮನಸ್ಸುಗಳನ್ನು ಗೆದ್ದ ಕಿಚ್ಚ..!

ನಮ್ಮೆಲ್ಲರ ಪ್ರೀತಿಯ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಬರೀ ನಟ ಮಾತ್ರವಲ್ಲದೇ, ಅದ್ಭುತ ಹೃದಯ ವೈಶಾಲ್ಯವನ್ನು ಹೊಂದಿರುವ ವ್ಯಕ್ತಿ. ಇದೀಗ ನಟ ಕಿಚ್ಚ ಸುದೀಪ್ ಅವರು ಸಾವಿರಾರು ಜನರ ಹೃದಯ ಗೆದ್ದಿದ್ದಾರೆ. ಯಾಕಂತೀರಾ?.
'ಬಿಗ್ ಬಾಸ್ 3' ಮೂಲಕ ಸಾವಿರಾರು ಮನಸ್ಸುಗಳನ್ನು ಗೆದ್ದ ಕಿಚ್ಚ..!

ಯಾಕೆಂದರೆ ನವೆಂಬರ್ 14 ರಂದು ಕನ್ನಡದ ಬಿಗ್ ಬಾಸ್ ಮನೆಯಲ್ಲಿ ಯೂಟ್ಯೂಬ್ ಸ್ಟಾರ್ ಹುಚ್ಚ ವೆಂಕಟ್ ಅವರಿಂದ ಶುರುವಾದ ಡ್ರಾಮಾದಿಂದ, ಶಾಂತವಾಗಿದ್ದ ದೊಡ್ಡಣ್ಣನ ಮನೆ ಬಿರುಗಾಳಿ ಎದ್ದಾಂತಾಗಿತ್ತು. ಎಲ್ಲವೂ ಸರಿಯಾಗಿದ್ದ ಬಿಗ್ ಬಾಸ್ ಮನೆಯಲ್ಲಿ ಹುಚ್ಚ ವೆಂಕಟ್ ನ ಹುಚ್ಚು ಅವತಾರದಿಂದ ಇದೀಗ ಉಲ್ಟಾ ಪಲ್ಟಾ ಆದಂತಾಗಿದೆ.

ಮೊನ್ನೆ ಶನಿವಾರ (ನವೆಂಬರ್ 14) ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ಸುದೀಪ್ ಅವರು ಎಂದಿನಂತೆ ಸ್ಪರ್ಧಿಗಳ ಜೊತೆ ವಾರದ ಕಥೆಯನ್ನು ಚರ್ಚಿಸುತ್ತಿದ್ದ ಸಂದರ್ಭದಲ್ಲಿ ಬ್ಯಾನ್ ಸ್ಟಾರ್ ಹುಚ್ಚ ವೆಂಕಟ್ ಅವರು ಬಿಗ್ ಬಾಸ್ ಮನೆಯ ರೂಲ್ಸ್ ಬ್ರೇಕ್ ಮಾಡಿ, ತಮ್ಮ ಹುಚ್ಚ ವೆಂಕಟ್ ಸೇನೆಯ ವಿರುದ್ದ ಮಾತಾಡಿದ್ದಕ್ಕಾಗಿ, ವೆಂಕಟ್ ಅವರು ತಮ್ಮ ಕೋ ಸ್ಪರ್ಧಿ ರವಿ ಮುರೂರು ಅವರ ಮೇಲೆ ಹಲ್ಲೆ ನಡೆಸಿದ್ದು, ಎಲ್ಲಾ ನಿಮಗೆ ಗೊತ್ತೆ ಇದೆ ಅಲ್ವಾ?.

ಆ ಸಂದರ್ಭದಲ್ಲಿ ಕಿಚ್ಚ ಸುದೀಪ್ ಅವರು ಹುಚ್ಚ ವೆಂಕಟ್ ಅವರಿಗೆ ಸರಿಯಾಗಿ ಬೆಂಡೆತ್ತಿದ್ದು, ಅಲ್ಲದೇ ಹಲ್ಲೆಗೊಳಗಾದ ರವಿ ಮುರೂರು ಅವರನ್ನು ಕ್ಷಮೆಯಾಚಿಸಿ, ಅಲ್ಲಿದ್ದ ರವಿ ಅವರ ಕುಟುಂಬದವರಲ್ಲೂ ಕ್ಷಮೆ ಯಾಚಿಸಿದರು. ಟಿ.ಆರ್.ಪಿ ಕಿಂಗ್ ಹುಚ್ಚ ವೆಂಕಟ್ ವಿರುದ್ಧ ಗುಡುಗಿದ ಕಿಚ್ಚ ಸುದೀಪ್.!

ಮಾತ್ರವಲ್ಲದೇ ಕಾರ್ಯಕ್ರಮದಲ್ಲಿ ಹಾಜರಿದ್ದ, ರವಿ ಮುರೂರು ಅವರ ತಾಯಿಯ ಪಾದಕ್ಕೆರಗಿ ಸುದೀಪ್ ಅವರು ಕ್ಷಮೆಯಾಚಿಸಿದರು. ಜೊತೆಗೆ ರವಿ ಅವರ ಪತ್ನಿಯ ಬಳಿಯೂ ಕ್ಷಮೆ ಯಾಚಿಸಿ, ಅವರ ಮಗಳನ್ನು ತಬ್ಬಿಕೊಂಡು ಕಣ್ಣೀರು ಹಾಕಿದರು.

ಇದರಿಂದ ಗೊತ್ತಾಗುತ್ತೆ ನಮ್ಮ ಸುದೀಪ್ ಅವರು ಎಷ್ಟು ಹೃದಯ ವೈಶಾಲ್ಯತೆ ಉಳ್ಳವರು ಎಂದು. ಅಲ್ಲದೇ ಬಿಗ್ ಬಾಸ್ ಮನೆಯಲ್ಲಿರುವ ಎಲ್ಲಾ ಸ್ಪರ್ಧಿಗಳನ್ನು, ಅವರು ನನ್ನ ಮನೆಯ ಸದಸ್ಯರಿದ್ದಂತೆ ಎಂದು ಹೇಳುವ ಮೂಲಕ ಇದೀಗ ತಮ್ಮ ನಟನೆಯ ಮೂಲಕ ಮಾತ್ರವಲ್ಲದೇ, ತಮ್ಮ ಹೃದಯ ವೈಶಾಲ್ಯತೆಯಿಂದ ಕೂಡ ಇದೀಗ ಸಾವಿರಾರು ಮನಸ್ಸುಗಳನ್ನು ಗೆದ್ದಿದ್ದಾರೆ. ಔಟ್ ಆದ್ಮೇಲೆ ಈಗೆಲ್ಲಿದ್ದಾರೆ ನಿಮ್ಮೆಲ್ಲರ ಅಚ್ಚುಮೆಚ್ಚಿನ ಹುಚ್ಚ ವೆಂಕಟ್?

ಒಟ್ನಲ್ಲಿ ಕಿಚ್ಚ ಸುದೀಪ್ ಅವರು ಹೃದಯವಂತಿಕೆ ಉಳ್ಳವರು ಎಂಬುದು ರಿಯಾಲಿಟಿ ಶೋ ಬಿಗ್ ಬಾಸ್ 3 ಮೂಲಕ ಇಡೀ ಕರ್ನಾಟಕದ ಜನತೆಗೆ ಗೊತ್ತಾಗಿದೆ.
Fresh Kannada

Fresh Kannada

No comments:

Post a Comment

Google+ Followers

Powered by Blogger.