Breaking News
recent

ನ.27 ರಂದು ಹುಟ್ಟೋ ಮಗುವಿಗೆ 2 ಲಕ್ಷ ಕೊಡ್ತಾರಂತೆ!

ಒಂದು ಸಿನಿಮಾದ ಪ್ರಚಾರಕ್ಕೆ ಚಿತ್ರತಂಡ ಅದೇನನ್ನು ಮಾಡಲು ಸಿದ್ಧ ಅನ್ನೋದಕ್ಕೆ ಒಂದು ಉತ್ತಮ ಉದಾಹರಣೆ, ಅಂದ್ರೆ 'ಫಸ್ಟ್ ರ್ಯಾಂಕ್ ರಾಜು' ಸಿನಿಮಾ. ಅಂದಹಾಗೆ ಇದೀಗ ಚಿತ್ರದ ನಿರ್ಮಾಪಕರು ಒಂದು ವಿನೂತನ ಕಾರ್ಯ ಮಾಡುತ್ತಿದ್ದಾರೆ.
ನ.27 ರಂದು ಹುಟ್ಟೋ ಮಗುವಿಗೆ 2 ಲಕ್ಷ ಕೊಡ್ತಾರಂತೆ!

ಅದೇನಪ್ಪಾ ಅಂದ್ರೆ ನವೆಂಬರ್ 27 ರಂದು ಹುಟ್ಟುವ ಮಗುವಿಗೆ ಎರಡು ಲಕ್ಷ ರೂಪಾಯಿಗಳ ಉಚಿತ ಬಾಂಡ್ ಕೊಡಲು 'ಫಸ್ಟ್ ರ್ಯಾಂಕ್ ರಾಜು' ಚಿತ್ರತಂಡ ತಯಾರಿ ಮಾಡುತ್ತಿದೆ.

ನವೆಂಬರ್ 27ರಂದು ನಿರ್ದೇಶಕ ನರೇಶ್ ಕುಮಾರ್ ಆಕ್ಷನ್-ಕಟ್ ಹೇಳಿರುವ 'ಫಸ್ಟ್ ರ್ಯಾಂಕ್ ರಾಜು' ಸಿನಿಮಾ ಬಿಡುಗಡೆಯಾಗುತ್ತಿದ್ದು, ಅಂದು ಜನಿಸುವ ಮಗುವಿನ ಶಿಕ್ಷಣಕ್ಕೆ ಎರಡು ಲಕ್ಷ ರೂಪಾಯಿ ಮೊತ್ತವನ್ನು ಗಿಫ್ಟಾಗಿ ನೀಡಲು ಚಿತ್ರದ ನಿರ್ಮಾಪಕ ಮಂಜುನಾಥ್ ಕಂದಕೂರ್ ಅವರು ನಿರ್ಧರಿಸಿದ್ದಾರೆ.

ಇನ್ನು ಸುಮ್ಮನೆ ಆ ದಿನ ಹುಟ್ಟಿದ ಎಲ್ಲಾ ಮಗುವಿಗೆ ಸಿಗುವುದಿಲ್ಲ ಬದಲಾಗಿ ಯಾವುದಾದರು ಒಂದು ಲಕ್ಕಿ ಮಗುವಿಗೆ ಈ ಆಫರ್ ಸಿಗುತ್ತದೆ. ಅದಕ್ಕಾಗಿ ಮೊದಲು 7846888805 ವಾಟ್ಸಾಪ್ ನಂಬರ್ ಗೆ ರಿಜಿಸ್ಟರ್ ಮಾಡಿಕೊಳ್ಳಬೇಕು.

ನಂತರ ಬಂದಂತಹ ಎಲ್ಲಾ ನಂಬರ್ ಗಳನ್ನು ಒಂದೆಡೆ ಕಲೆ ಹಾಕಿ, ಒಂದನ್ನು ಮಾತ್ರ ಲಕ್ಕಿ ಡಿಪ್ ಮೂಲಕ ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ಮಗುವಿಗೆ ನಿರ್ಮಾಪಕರು ಎರಡು ಲಕ್ಷ ರೂಪಾಯಿಯ ಬಾಂಡ್ ವಿತರಿಸುತ್ತಾರೆ.

ಇದು ಈ ಸಿನಿಮಾದ ಹೊಸ ಗಿಮಿಕ್. ಹೇಗಿದೆ, ಸೂಪರ್ ಅಲ್ವಾ?, ಒಟ್ನಲ್ಲಿ ಇದು ಯಶಸ್ವಿಯಾದರೆ, ಇಂತಹ ಮತ್ತಷ್ಟು ಯೋಜನೆಗಳನ್ನು ಚಿತ್ರರಂಗದವರು ಕಂಡುಕೊಂಡರೆ ಅದರಲ್ಲೂ ಆಶ್ಚರ್ಯವಿಲ್ಲ. ನೀವೇನಂತೀರಾ?.
Fresh Kannada

Fresh Kannada

No comments:

Post a Comment

Google+ Followers

Powered by Blogger.