Breaking News
recent

ಅಪ್ಪುಗೆ, 'ಚಕ್ರವ್ಯೂಹ' 25ನೇ ಚಿತ್ರನಾ, ಅಥವಾ 'ದೊಡ್ಮನೆ ಹುಡುಗ'ನಾ?

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ 'ಚಕ್ರವ್ಯೂಹ' ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿ ಅಭಿಮಾನಿಗಳಿಂದ ಭಾರಿ ರೆಸ್ಪಾನ್ಸ್ ಗಿಟ್ಟಿಸಿಕೊಂಡಿದೆ. ಅದರೊಂದಿಗೆ ಪುನೀತ್ ಅವರ 'ದೊಡ್ಮನೆ ಹುಡುಗ' ಸಿನಿಮಾ ಕೂಡ ತಯಾರಾಗುತ್ತಿದ್ದು, ಯಾವುದು ಮೊದಲು ರಿಲೀಸ್ ಆಗುತ್ತೆ ಅಂತ ಅಭಿಮಾನಿಗಳು ಕಾಯ್ತಾ ಇದ್ದಾರೆ.
ಅಪ್ಪುಗೆ, 'ಚಕ್ರವ್ಯೂಹ' 25ನೇ ಚಿತ್ರನಾ, ಅಥವಾ 'ದೊಡ್ಮನೆ ಹುಡುಗ'ನಾ?

ಅಂದಹಾಗೆ ಇದೀಗ ವಿಷ್ಯಾ ಏನಪ್ಪಾ ಅಂದ್ರೆ, 'ಚಕ್ರವ್ಯೂಹ' ಪುನೀತ್ ಅವರ 25ನೇ ಚಿತ್ರ ಅಂತ ಎಲ್ಲೆಡೆ ಸುದ್ದಿಯಾಗಿದೆ. ಆದರೆ 'ಚಕ್ರವ್ಯೂಹ' ಚಿತ್ರದ ಶೂಟಿಂಗ್ ಈಗಾಗಲೇ ಬಹುತೇಕ ಮುಗಿಯುವ ಹಂತಕ್ಕೆ ಬಂದಿದ್ದು, ನಿರ್ದೇಶಕ ದುನಿಯಾ ಸೂರಿ ಅವರ 'ದೊಡ್ಮನೆ ಹುಡುಗ' ಚಿತ್ರಕ್ಕಿಂತ ಮೊದಲೇ 'ಚಕ್ರವ್ಯೂಹ' ಬಿಡುಗಡೆಯಾಗುವ ಹಂತದಲ್ಲಿದೆ.

ಇನ್ನು ಅಪ್ಪು ಅವರ 24ನೇ ಸಿನಿಮಾ 'ದೊಡ್ಮನೆ ಹುಡುಗ' ಚಿತ್ರದಲ್ಲಿ ನಿಧನರಾದ 'ಕೆ.ಎಸ್ ಎಲ್ ಸ್ವಾಮಿ' ಅವರು ಪ್ರಮುಖ ಪಾತ್ರ ವಹಿಸುತ್ತಿದ್ದರು, ಅಲ್ಲದೇ ಅವರ ಭಾಗದ ಅರ್ಧದಷ್ಟು ಚಿತ್ರೀಕರಣ ಮುಗಿದಿತ್ತು. ಆದರೆ ಸ್ವಲ್ಪ ದಿನಗಳ ಹಿಂದೆ ಕೆ.ಎಸ್ ಎಲ್ ಸ್ವಾಮಿ ಅವರು ನಿಧನರಾದ್ದರಿಂದ ಅವರ ಪಾತ್ರವನ್ನು ಯಾರು ನಿಭಾಯಿಸಲಿದ್ದಾರೆ ಅಂತ ಇನ್ನು ತಿಳಿದು ಬಂದಿಲ್ಲ.

ಆದ್ದರಿಂದ 'ದೊಡ್ಮನೆ ಹುಡುಗ' ಚಿತ್ರದ ಶೂಟಿಂಗ್ ಡಿಲೇ ಆಗುವ ಸಾಧ್ಯತೆ ಇದ್ದು, ದುನಿಯಾ ಸೂರಿ ಅವರ ಸಿನಿಮಾಕ್ಕಿಂತ ಮುಂಚೆ 'ಚಕ್ರವ್ಯೂಹ' ರಿಲೀಸ್ ಆಗುವ ಸಾಧ್ಯತೆ ಹೆಚ್ಚಿದೆ. ಅಲ್ಲದೇ ಅಪ್ಪು ಅವರ 'ಚಕ್ರವ್ಯೂಹ'ದ ಬದಲು 'ದೊಡ್ಮನೆ ಹುಡುಗ' 25ನೇ ಚಿತ್ರ ಆಗಬಹುದು ಎಂದು ಗಾಂಧಿನಗರದಲ್ಲಿ ಮಾತುಗಳು ಕೇಳಿ ಬರುತ್ತಿದೆ.

'ಚಕ್ರವ್ಯೂಹ' ಚಿತ್ರದ 90 ರಷ್ಟು ಭಾಗದ ಚಿತ್ರೀಕರಣ ಮುಗಿದಿದ್ದು, ದೀಪಾವಳಿ ಸ್ಪೆಷಲ್ ಅಂತ ಚಿತ್ರತಂಡ ಫಸ್ಟ್ ಲುಕ್ ಪೋಸ್ಟರ್ ಕೂಡ ಬಿಡುಗಡೆ ಮಾಡಿದೆ. ಆದ್ದರಿಂದ ತಮಿಳು ನಿರ್ದೇಶಕ ಎಮ್ ಸರವಣನ್ ಆಕ್ಷನ್-ಕಟ್ ಹೇಳಿರುವ 'ಚಕ್ರವ್ಯೂಹ' ಮೊದಲು ಬಿಡುಗಡೆಯಾಗಿ, ನಿರ್ದೇಶಕ ದುನಿಯಾ ಸೂರಿ ಆಕ್ಷನ್ -ಕಟ್ ಹೇಳಿರುವ 'ದೊಡ್ಮನೆ ಹುಡುಗ' 25ನೇ ಚಿತ್ರವಾಗುವ ಸಾಧ್ಯತೆ ಇದೆ.
Fresh Kannada

Fresh Kannada

No comments:

Post a Comment

Google+ Followers

Powered by Blogger.