Breaking News
recent

'ಲಂಕಾ ಟಿ20 ವಿಶ್ವಕಪ್ ಕ್ರಿಕೆಟ್ ಟೀಮ್'ನ ರಾಯಭಾರಿಯಾದ ಹರ್ಷಿಕಾ..!

ಚಂದನವನದ ತಾರೆಯರಾದ ಉಪೇಂದ್ರ, ಪುನೀತ್ ರಾಜ್ ಕುಮಾರ್, ರಮ್ಯಾ ಸೇರಿದಂತೆ ಅನೇಕ ಸ್ಟಾರ್ ನಟ-ನಟಿಯರು ಐಪಿಎಲ್ ಕ್ರಿಕೆಟ್ ಟೀಮ್ ಗೆ ರಾಯಾಭಾರಿಗಳಾಗಿರುವ ವಿಷಯ ನಿಮಗೆ ತಿಳಿದೇ ಇದೆ.

ಅಷ್ಟೇ ಯಾಕೆ ನಮ್ಮ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಸಿಸಿಎಲ್ ಹಾಗೂ ಕೆಪಿಎಲ್ ಮ್ಯಾಚ್ ನ ಕ್ಯಾಪ್ಟನ್ ಆಗಿದ್ದು, ಹಾಗೂ ಕೆಪಿಎಲ್ ಕ್ರಿಕೆಟ್ ಟೀಮ್ ನ ಓನರ್ ಕೂಡ ಹೌದು.

ಇದೀಗ ವಿಷ್ಯಾ ಏನಪ್ಪಾ ಅಂದ್ರೆ, ಇವರೆಲ್ಲರ ಸಾಲಿಗೆ ಹೊಸ ಸೇರ್ಪಡೆ ನಮ್ಮ ಕೊಡಗಿನ ಬೆಡಗಿ ನಟಿ ಹರ್ಷಿಕಾ ಪೂನಚ್ಚ ಅವರು. ಹೊಸದಾಗಿ ನಟಿ ಹರ್ಷಿಕಾ ಪೂನಚ್ಚ ಅವರು ಇಂಟರ್ ನ್ಯಾಷನಲ್ ಲೆವಲ್ ನ ಕ್ರಿಕೆಟ್ ಟೀಮ್ ಗೆ ಬ್ರ್ಯಾಂಡ್ ಅಂಬಾಸಿಡರ್ ಆಗಿ ಆಯ್ಕೆಯಾಗಿದ್ದಾರೆ.

ಅಂದಹಾಗೆ ಕೊಡಗಿನ ಸುಂದರಿ ಹರ್ಷಿಕಾ ಅವರು ಕೊಲಂಬೊ ಶ್ರೀಲಂಕಾ ಟಿ-20 ವಿಶ್ವಕಪ್ ತಂಡದ ಪ್ರಚಾರ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ. ಇದು ಪ್ರಾಯೋಜಕತ್ವದ ಪ್ರಚಾರ ಭಾಗವಾಗಿದ್ದು, ನಟಿ ಹರ್ಷಿಕಾ ಅವರು ಈಗಾಗಲೇ ಶ್ರೀಲಂಕಾ ತಂಡದ ಖ್ಯಾತ ಕ್ರಿಕೆಟ್ ಪಟು ಮಾಲಿಂಗ ಹಾಗೂ ಉಳಿದ ಕ್ರಿಕೆಟ್ ತಾರೆಯರನ್ನು ಭೇಟಿಯಾಗಿದ್ದಾರೆ.

ಬೆಂಗಳೂರು ಮೂಲದ ಕಂಪೆನಿಯೊಂದು ಲಂಕಾ ಟಿ.20 ವಿಶ್ವಕಪ್ ಕ್ರಿಕೆಟ್ ಮ್ಯಾಚ್ ಅನ್ನು ಪ್ರಾಯೋಜಿಸುತ್ತಿರುವುದರಿಂದ ನಮ್ಮ ಕನ್ನಡತಿಯಾದ ನಟಿ ಹರ್ಷಿಕಾ ಪೂನಚ್ಚ ಅವರು ಈ ಜಾಹೀರಾತು ರಾಯಭಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
Fresh Kannada

Fresh Kannada

No comments:

Post a Comment

Google+ Followers

Powered by Blogger.