Breaking News
recent

ಡಿಸೆಂಬರ್ 11 ರಂದು ದಿಗಂತ್ 'ಶಾರ್ಪ್ ಶೂಟರ್' ರಿಲೀಸ್

ನಿರ್ದೇಶಕ ಗೌಸ್ ಪೀರ್ ಪ್ಲಾನ್ ಪ್ರಕಾರ ನಡೆದಿದ್ದರೆ, 'ಶಾರ್ಪ್ ಶೂಟರ್' ಈ ತಿಂಗಳು ಬಿಡುಗಡೆ ಆಗಬೇಕಿತ್ತು. ಅದ್ರೆ, ಕಾರಣಾಂತರಗಳಿಂದ ನವೆಂಬರ್ ನಲ್ಲಿ 'ಶಾರ್ಪ್ ಶೂಟರ್' ರಿಲೀಸ್ ಆಗ್ಲಿಲ್ಲ.
ಡಿಸೆಂಬರ್ 11 ರಂದು ದಿಗಂತ್ 'ಶಾರ್ಪ್ ಶೂಟರ್' ರಿಲೀಸ್

ಬದಲಾಗಿ, ಡಿಸೆಂಬರ್ 11 ರಂದು ರಾಜ್ಯಾದ್ಯಂತ ನಿಮ್ಮ ಮುಂದೆ ಬರಲಿದೆ 'ಶಾರ್ಪ್ ಶೂಟರ್'. ಆ ಮೂಲಕ ಎರಡು ವರ್ಷಗಳ ನಂತರ ದೂದ್ ಪೇಡ ದಿಗಂತ್ ಸ್ಯಾಂಡಲ್ ವುಡ್ ಬೆಳ್ಳಿತೆರೆ ಮೇಲೆ ಮಿಂಚಲಿದ್ದಾರೆ.

ಸ್ವಲ್ಪ ಲವ್, ಸ್ವಲ್ಪ ಫ್ರೆಂಡ್ ಶಿಪ್, ಸ್ವಲ್ಪ ರೋಮ್ಯಾನ್ಸ್, ಜಾಸ್ತಿ ತರಲೆ ಇರುವ 'ಶಾರ್ಪ್ ಶೂಟರ್' ಚಿತ್ರದಲ್ಲಿ ದಿಗಂತ್ - ಸಂಗೀತ ಜೋಡಿಯಾಗಿದ್ದಾರೆ. ಚಿತ್ರದ 'ಕಬ್ಬಡಿ' ಐಟಂ ಸಾಂಗ್ ನಲ್ಲಿ ನಟಿ ಐಂದ್ರಿತಾ ರೇ, ದಿಗ್ಗಿ ಜೊತೆ ಸ್ಟೆಪ್ ಹಾಕಿರುವುದು ಸಿನಿಮಾದ ಸ್ಪೆಷಾಲಿಟಿ.

ಎಸ್.ಬಿ. ಎಂರ್ಟಟೈನ್ಮೆಂಟ್ ಅರ್ಪಿಸುವ 'ಶಾರ್ಪ್ ಶೂಟರ್' ಚಿತ್ರ ಪಕ್ಕಾ ಫ್ಯಾಮಿಲಿ ಎಂರ್ಟಟೈನರ್. ಇದುವರೆಗೂ ಚಾಕಲೇಟ್ ಹೀರೋ ಆಗಿ ಕಾಣಿಸಿಕೊಳ್ಳುತ್ತಿದ್ದ ದಿಗಂತ್ ಈ ಚಿತ್ರದಲ್ಲಿ ಸ್ವಲ್ಪ ಫೈಟ್ ಮಾಡಿ ಆಕ್ಷನ್ ಗೂ ಸೈ ಅಂದಿದ್ದಾರೆ.

ಲಾಂಗ್ ಗ್ಯಾಪ್ ನಂತರ ಅದೃಷ್ಟ ಪರೀಕ್ಷೆಗೆ ನಿಂತಿರುವ ದಿಗಂತ್ ಗೆ ಪ್ರೇಕ್ಷಕರು ದೂದ್ ಪೇಡ ತಿನ್ನಿಸ್ತಾರೋ, ಇಲ್ವೋ ಅಂತ ಕಾದು ನೋಡ್ಬೇಕು.
Fresh Kannada

Fresh Kannada

No comments:

Post a Comment

Google+ Followers

Powered by Blogger.