Breaking News
recent

ದೀಪಾವಳಿ ಹಬ್ಬಕ್ಕೆ 10 ಲಕ್ಷ ಖರ್ಚು ಮಾಡಿದ ಕಿಚ್ಚ ಸುದೀಪ್!

ಬಿಗ್ ಬಾಸ್ ಮೂಲಕ ಹವಾ ಕ್ರಿಯೇಟ್ ಮಾಡುತ್ತಿರುವ ನಟ-ನಿರ್ದೇಶಕ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು 10 ಲಕ್ಷ ರೂಪಾಯಿಯನ್ನ ದೀಪಾವಳಿ ಹಬ್ಬಕ್ಕೆ ವಿನಿಯೋಗಿಸುತ್ತಿದ್ದಾರೆ. ಅಬ್ಬಾ! ಅಷ್ಟೊಂದು ಹಣನಾ?, ಅಷ್ಟು ಹಣ ತಗೊಂಡು ಅದ್ಯಾವ ತರ ಹಬ್ಬ ಆಚರಿಸ್ತಾರೆ ಅಂತ ಆಶ್ಚರ್ಯ ಪಡ್ತಾ ಇದ್ದೀರಾ.
ದೀಪಾವಳಿ ಹಬ್ಬಕ್ಕೆ 10 ಲಕ್ಷ ಖರ್ಚು ಮಾಡಿದ ಕಿಚ್ಚ ಸುದೀಪ್!

ಹೌದು ಹಣ ವಿನಿಯೋಗಿಸಿದ್ದು, ಏನೋ ನಿಜ, ಆದರೆ ದೀಪಾವಳಿ ಪಟಾಕಿಗೆ ಆಗ್ಲಿ, ಅಥವಾ ಬೇರೆ ತರದ ಶಾಪಿಂಗ್ ಗೆ ಆಗ್ಲಿ ನಮ್ಮ ಕಿಚ್ಚ ಹಣ ದುರುಪಯೋಗ ಮಾಡ್ತಾ ಇಲ್ಲ. ಬದ್ಲಾಗಿ ಅವರು ದೀಪಾವಳಿ ಹಬ್ಬದ ಪ್ರಯುಕ್ತ 10 ಲಕ್ಷ ರೂಪಾಯಿಯನ್ನು ಚಾರಿಟಿಯೊಂದಕ್ಕೆ ಕೊಡುವ ಮೂಲಕ ಸಮಾಜ ಸೇವೆ ಮಾಡ್ತಾ ಇದ್ದಾರೆ.

ಸದ್ಯಕ್ಕೆ ಎಲ್ಲರ ಅಚ್ಚುಮೆಚ್ಚಿನ ನಟನಾಗಿರುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ದೀಪಾವಳಿ ಹಬ್ಬದ ಪರವಾಗಿ ಸುಮಾರು 10 ಲಕ್ಷ ರೂಪಾಯಿಗಳನ್ನು ಚಾರಿಟಿ ಒಂದಕ್ಕೆ ದೇಣಿಗೆಯಾಗಿ ನೀಡಿದ್ದಾರೆ. ಆದರೆ ಯಾವ ಚಾರಿಟಿ ಟ್ರಸ್ಟ್ ಗೆ ನೀಡಿದ್ದು, ಎಂಬ ವಿಚಾರವನ್ನು ಮಾತ್ರ ಗೌಪ್ಯವಾಗಿ ಇಡಲಾಗಿದೆ.

ಶ್ರೀಮಂತರು ತಮ್ಮಿಷ್ಟದಂತೆ ದೀಪಾವಳಿ ಹಬ್ಬ ಆಚರಿಸುವ ಈ ಕಾಲದಲ್ಲಿ ಬಡವರಿಗೆ ಹಾಗೂ ಏನೂ ಇಲ್ಲದವರು ಸಂತಸದಿಂದ ಹಬ್ಬ ಆಚರಿಸಲಿ ಎಂದು ಕಿಚ್ಚ ಸುದೀಪ್ ಅವರು 10 ಲಕ್ಷ ರೂಪಾಯಿಗಳನ್ನು ಚಾರಿಟಿಗೆ ನೀಡಿದ್ದಾರೆ.

ಇನ್ನು ಸುದೀಪ್ ಅವರು ದೇಣಿಗೆಯಾಗಿ ನೀಡಿರುವ ಈ ಹಣ ಕೇವಲ ದೀಪಾವಳಿ ಹಬ್ಬ ಆಚರಿಸಲು ಮಾತ್ರವಲ್ಲದೇ, ಬಡಮಕ್ಕಳ ಶಿಕ್ಷಣ ಹಾಗೂ ವೈದ್ಯಕೀಯ ಖರ್ಚು ವೆಚ್ಚಗಳಿಗೆ ಇದು ಉಪಯೋಗವಾಗಲಿದೆ.

ಅದೇನೇ ಇರಲಿ, ಮೊನ್ನೆ ಮೊನ್ನೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ತಮ್ಮ ಗಾಯನದಿಂದ ಬರುವ ಆದಾಯವನ್ನು ಚಾರಿಟಿಗೆ ನೀಡಿರುವ ವಿಷಯವನ್ನು ನಾವು ನಿಮಗೆ ಹೇಳಿದ್ದು, ಇದೀಗ ಕಿಚ್ಚ ಸುದೀಪ್ ಅವರ ಸರದಿ, ದೀಪಾವಳಿ ಹಬ್ಬದ ಪ್ರಯುಕ್ತ ಬಡವರಿಗೆ ಸಹಾಯ ಮಾಡುವ ಮೂಲಕ ಸುದೀಪ್ ಅವರು ತೆರೆಯ ಮೇಲೆ ಮಾತ್ರವಲ್ಲದೇ ತೆರೆಯ ಹಿಂದೆ ಕೂಡ ಶೈನ್ ಆಗಿದ್ದು, ಅಭಿಮಾನಿಗಳ ದೇವರಾಗಿದ್ದಾರೆ.
Fresh Kannada

Fresh Kannada

No comments:

Post a Comment

Google+ Followers

Powered by Blogger.