Breaking News
recent

ನ.1ರಂದು ಸದಾಶಿವನಗರದಲ್ಲಿ ಪಿಬಿಎಸ್ ಉದ್ಯಾನವನ ಲೋಕಾರ್ಪಣೆ

ನಾಡಿನೆಲ್ಲೆಡೆ 'ಕನ್ನಡ ರಾಜ್ಯೋತ್ಸವ'ಕ್ಕೆ ಭರ್ಜರಿ ತಯಾರಿ ನಡೆಯುತ್ತಿದೆ. ನವೆಂಬರ್ ತಿಂಗಳು ಪೂರ್ತಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲು ಯಾವುದೇ ಅಭ್ಯಂತರ ಇಲ್ಲ ಎಂದು ಕರ್ನಾಟಕ ಮುಖ್ಯಮಂತ್ರಿ ಸಿದ್ಧರಾಮಯ್ಯ ಘೋಷಿಸಿದ್ದಾರೆ.
ನ.1ರಂದು ಸದಾಶಿವನಗರದಲ್ಲಿ ಪಿಬಿಎಸ್ ಉದ್ಯಾನವನ ಲೋಕಾರ್ಪಣೆ

ಇದೀಗ ಕನ್ನಡ ರಾಜ್ಯೋತ್ಸವದ ಅಂಗವಾಗಿ 'ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ' ಸಹಯೋಗದೊಂದಿಗೆ 'ಗಾನಕಲಾ ಸಾರ್ವಭೌಮ, ನಾಡೋಜ, ಡಾ. ಪಿ.ಬಿ.ಶ್ರೀನಿವಾಸ್ ಅವರ 'ಉದ್ಯಾನವನ ಲೋಕಾರ್ಪಣೆ ಹಾಗೂ ಗೀತ ನಮನ' ಎಂಬ ವಿಶೇಷ ಕಾರ್ಯಕ್ರಮವು ದಿನಾಂಕ 01/11/2015 ರಂದು ಸಂಜೆ 6 ಘಂಟೆಗೆ, ಸದಾಶಿವನಗರದ ಪೂರ್ಣ ಪ್ರಜ್ಞ ಶಾಲೆ ಎದುರು ನಡೆಯಲಿದೆ.[ಆಡಿಸಿ ನೋಡು ಬೀಳಿಸಿ ನೋಡು ಮರೆತು ಹೋಗದು]

ಇನ್ನು ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿರುವ ಸ್ಯಾಂಡಲ್ ವುಡ್ ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಸಮ್ಮುಖದಲ್ಲಿ ಗಾನಗಂಧರ್ವ ಪಿ.ಬಿ ಶ್ರೀನಿವಾಸ್ ಅವರು ಹಾಡಿರುವ ಹಾಡುಗಳನ್ನು ಸ್ಯಾಂಡಲ್ ವುಡ್ ನ ವಿವಿಧ ಖ್ಯಾತ ಗಾಯಕರು ಹಾಡಲಿದ್ದು, ಸಂಗೀತ ರಸಸಂಜೆಯ ಮೂಲಕ ನೆರೆದಿರುವವರನ್ನು ರಂಜಿಸಲಿದ್ದಾರೆ.[ರಾಜ್ ಚಿತ್ರದಲ್ಲಿ ಪಿಬಿಎಸ್ ಹಾಡು ನಿಂತಿದ್ದು ಯಾಕೆ: ಕಾರಣ ಇಲ್ಲಿದೆ]

ಸಂಗೀತ ರಸಸಂಜೆ ಕಾರ್ಯಕ್ರಮದಲ್ಲಿ ಮಲ್ನಾಡ್ ಸಿಸ್ಟರ್ಸ್ ತಂಡದ ಅರ್ಚನಾರವಿ, ಅಜಯ್ ವಾರಿಯರ್, ಚಿನ್ಮಯ್, ಶ್ರೀನಾಥ್, ರಾಜೀವ್, ರವಿ, ಸುಪ್ರೀಯ ಆಚಾರ್ಯ, ರಮಾಅರವಿಂದ್ ಮುಂತಾದವರ ಸಿರಿಕಂಠದಲ್ಲಿ, ಜೀ ಟಿವಿಯ ಸರಿಗಮಪ ಖ್ಯಾತಿಯ ಕಬೀರ್ ಮತ್ತು ತಂಡದ ವಾದ್ಯ ವೃಂದದೊಂದಿಗೆ ಸಂಗೀತ ಕಾರ್ಯಕ್ರಮ ಮೂಡಿಬರಲಿದೆ.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ಗಾನಗಂಧರ್ವ, ನಟಸಾರ್ವಭೌಮ ಡಾ.ರಾಜ್ ಕುಮಾರ್ ಮತ್ತು ಗಾನಭೀಷ್ಮ ಡಾ. ಪಿ.ಬಿ ಶ್ರೀನಿವಾಸ್ ಅವರ ಸಮಕಾಲೀನ ಕಲಾವಿದರು ಹಾಗೂ ಗೌರವಾನ್ವಿತ ಜನಪ್ರತಿನಿಧಿಗಳು ಭಾಗವಹಿಸಲಿರುವ ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಎಲ್ಲರಿಗೂ ತುಂಬು ಹೃದಯದ ಆಹ್ವಾನವಿದ್ದು, ಎಲ್ಲರೂ ಭಾಗವಹಿಸಬೇಕು ಎಂದು ಮಲ್ಲೇಶ್ವರಂ ಎಮ್.ಎಲ್.ಎ ಡಾ.ಅಶ್ವತ್ ನಾರಾಯಣ ಸಿ.ಎನ್ ಅವರು ಕೋರಿದ್ದಾರೆ.
Fresh Kannada

Fresh Kannada

No comments:

Post a Comment

Google+ Followers

Powered by Blogger.