Breaking News
recent

ಸುದೀಪ್ ಗೆ ಏಕವಚನ; ಹುಚ್ಚ ವೆಂಕಟ್ v/s ಕಿಚ್ಚ ಫ್ಯಾನ್ಸ್ ಸಮರ




ಹುಚ್ಚ V/S ಕಿಚ್ಚ
ಕಿಚ್ಚ ಸುದೀಪ್ ಫ್ಯಾನ್ಸ್ V/S ಹುಚ್ಚ ವೆಂಕಟ್ ನಡುವೆ ಸಮರ ಆರಂಭವಾಗಿದೆ. ಅದಕ್ಕೆ ಫೇಸ್ ಬುಕ್ ವೇದಿಕೆ ಆಗಿದೆ. ಈ ವಾರವೂ ಕಿಚ್ಚ ಸುದೀಪ್ ವಿರುದ್ಧ ಹುಚ್ಚ ವೆಂಕಟ್ ಏನಾದರೂ ತಲೆಹರಟೆ ಮಾಡಿದ್ರು ಅಂದ್ರೆ, ಸುದೀಪ್ ಫ್ಯಾನ್ಸ್ ರೊಚ್ಚಿಗೇಳುವುದು ಗ್ಯಾರೆಂಟಿ.

ತಂಟೆಗೆ ಬಂದ್ರೆ ತಮ್ಮದೇ ಸ್ಟೈಲ್ ನಲ್ಲಿ 'ಸಿಮೆಂಟ್ ಕೋಟಿಂಗ್' ಕೊಟ್ಟು ತರಾಟೆಗೆ ತೆಗೆದುಕೊಳ್ಳುವ ಜಾಯಮಾನ ಕಿಚ್ಚ ಸುದೀಪ್ ರದ್ದು. ಅವರ ಅಭಿಮಾನಿಗಳು ಕೂಡ ಹಾಗೆ, ಯಾರ ತಂಟೆಗೂ ಹೋಗಲ್ಲ. ಅವರ 'ಬಾಸ್' ತಂಟೆಗೆ ಬಂದ್ರೆ, ಸುಮ್ನೆ ಬಿಡಲ್ಲ.
ಸುದೀಪ್ ಗೆ ಏಕವಚನ; ಹುಚ್ಚ ವೆಂಕಟ್ v/s ಕಿಚ್ಚ ಫ್ಯಾನ್ಸ್ ಸಮರ

ಇದಕ್ಕೆ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಸದ್ಯ ನಡೆಯುತ್ತಿರುವ ಸಮರವೇ ಸಾಕ್ಷಿ. ಅಷ್ಟಕ್ಕೂ ಈ ಫೇಸ್ ಬುಕ್ ವಾರ್ ಗೆ ಪ್ರಮುಖ ಕಾರಣಕರ್ತ ಮಿಸ್ಟರ್ 'ಹುಚ್ಚ ವೆಂಕಟ್'.

ವೀಕ್ಷಕರ ಒತ್ತಾಯದ ಮೇರೆಗೆ 'ಬಿಗ್ ಬಾಸ್-3' ರಿಯಾಲಿಟಿ ಶೋನಲ್ಲಿ ಹುಚ್ಚ ವೆಂಕಟ್ ಭಾಗವಹಿಸಿದ್ದಾರೆ. ರಿಯಾಲಿಟಿ ಶೋ ಆದ ಕಾರಣ, ರಿಯಲ್ ನಲ್ಲಿ ಹೇಗಿರ್ತಾರೋ ಹಾಗೇ ಇರಬೇಕು ನಿಜ. ಆದ್ರೆ, ಹುಚ್ಚ ವೆಂಕಟ್ ಹುಚ್ಚಾಟ ಕಿಚ್ಚ ಸುದೀಪ್ ಮುಂದೆ ನಡೆದ್ರೆ, ಅವರ ಫ್ಯಾನ್ಸ್ ಸುಮ್ನೆ ಇರ್ತಾರಾ. ಖಂಡಿತ ಇಲ್ಲ.

'ಬಿಗ್ ಬಾಸ್-3' ಪ್ರೀಮಿಯರ್ ಸಂಚಿಕೆಯಲ್ಲಿ ಹುಚ್ಚ ವೆಂಕಟ್ 'ಆವೇಷ'ದಲ್ಲಿ ಮಾಡಿಕೊಂಡ ಸಣ್ಣ ಎಡವಟ್ಟು ಇದೀಗ ಫೇಸ್ ಬುಕ್ ನಲ್ಲಿ ಅವರ ವಿರುದ್ಧ ಎಲ್ಲರೂ ಬೆರಣಿ ತಟ್ಟುವಂತೆ ಆಗಿದೆ. ಹುಚ್ಚ ವೆಂಕಟ್ ವಿರುದ್ಧ ಕಿಚ್ಚ ಸುದೀಪ್ ಅಭಿಮಾನಿಗಳು ತೊಡೆ ತಟ್ಟಿ ನಿಂತಿದ್ದಾರೆ.
Fresh Kannada

Fresh Kannada

No comments:

Post a Comment

Google+ Followers

Powered by Blogger.