Breaking News
recent

'ಸುಂಟರಗಾಳಿ' ಬೀಸಿದ ದರ್ಶನ್ 'Mr.ಐರಾವತ'

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 'Mr ಐರಾವತ' ಚಿತ್ರ ನಾಳೆ(ಅಕ್ಟೋಬರ್ 1) ಬಿಡುಗಡೆಯಾಗುತ್ತಿದ್ದು, ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಈಗಾಗಲೇ ಅಡ್ವಾನ್ಸ್ ಟಿಕೇಟ್ ಬುಕ್ಕಿಂಗ್ ಕೂಡ ಓಪನ್ನ್ ಆಗಿದ್ದು, ಬಾಕ್ಸಾಫೀಸ್ ಸುಲ್ತಾನನ 'ಐರಾವತಕ್ಕೆ' ಟಿಕೇಟ್ ಸಿಕ್ಕವರು ಖುಷಿ ಪಟ್ಟರೆ, ದೊರಕದ ಕೆಲವು ಅಭಿಮಾನಿಗಳು ಬೇಜಾರು ಮಾಡಿಕೊಂಡಿದ್ದಾರೆ.
ಸದ್ಯಕ್ಕೆ ಗಾಂಧಿನಗರದಲ್ಲಿ ಬರೀ ದರ್ಶನ್ 'Mr ಐರಾವತ' ದ ಬಗ್ಗೆ ಚರ್ಚೆ ಹಾಗೂ ಎಲ್ಲಿ ಹೋದರೂ ಚಾಲೆಂಜಿಂಗ್ ಸ್ಟಾರ್ ಚಿತ್ರದ ಬಗ್ಗೆನೇ ಮಾತುಗಳು ಕೇಳಿ ಬರುವಷ್ಟರಮಟ್ಟಿಗೆ ಬಾಕ್ಸಾಫೀಸ್ ಸುಲ್ತಾನ ಹವಾ ಎಬ್ಬಿಸುತ್ತಿದ್ದಾರೆ.[ಹೊಸ ದಾಖಲೆ ನಿರ್ಮಿಸಿದ ಚಾಲೆಂಜಿಂಗ್ ಸ್ಟಾರ್ 'Mr.ಐರಾವತ']
ಸಂದೇಶ್ ಪ್ರೊಡಕ್ಷನ್ಸ್ ಅಡಿಯಲ್ಲಿ ಮೂಡಿಬರುತ್ತಿರುವ, ಹಿಟ್ ನಿರ್ದೇಶಕ ಎ.ಪಿ ಅರ್ಜುನ್ ಅವರು ಆಕ್ಷನ್-ಕಟ್ ಹೇಳಿರುವ 'Mr ಐರಾವತ' ದರ್ಶನ್ ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ಹುಟ್ಟಿಸಿದೆ. ಇನ್ನು ದರ್ಶನ್ ಅವರ ಸಖತ್ ಸ್ಟೈಲಿಷ್ ಲುಕ್ ಹಾಗೂ ಖಡಕ್ ಪಂಚ್ ಡೈಲಾಗ್ ಗಳು ಹೈ ಕ್ವಾಲಿಟಿ ಟೀಸರ್ ಹಾಗೂ ಟ್ರೈಲರ್ ನಲ್ಲಿ ಹೈಲೈಟ್ ಆಗಿತ್ತು.['Mr.ಐರಾವತ' ಟಿಕೆಟ್ ಬೆಲೆ ಅಬ್ಬಬ್ಬಾ...ಅಷ್ಟೊಂದಾ.?!]
Mr.ಐರಾವತ ಚಿತ್ರದಲ್ಲಿ ಹಲವು ವಿಶೇಷತೆಗಳಿವೆ. ಅವನ್ನೆಲ್ಲಾ ಒಂದೊಂದಾಗಿ ಹೇಳ್ತೀವಿ. ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ಕಿಸುತ್ತಾ ಹೋಗಿ....
ಖಡಕ್ ಖಾಕಿ ಖದರ್ ನಲ್ಲಿ ದರ್ಶನ್ 
'Mr ಐರಾವತ' ಇಡೀ ಸ್ಯಾಂಡಲ್ ವುಡ್ ಕ್ಷೇತ್ರದಲ್ಲಿ ಅಲೆ ಎಬ್ಬಿಸಲು ಮುಖ್ಯ ಕಾರಣ ಏನಪ್ಪಾ ಅಂದ್ರೆ ದರ್ಶನ್ ಅವರು 'ಸ್ವಾಮಿ' , ಅಯ್ಯ' ಹಾಗೂ 'ಅರ್ಜುನ' ಚಿತ್ರದ ನಂತರ ಮತ್ತೊಮ್ಮೆ ಖಾಕಿ ತೊಟ್ಟು ಖಡಕ್ ಸೂಪರ್ ಕಾಪ್ ಪಾತ್ರದಲ್ಲಿ ಮಿಂಚಿದ್ದಾರೆ.['Mr.ಐರಾವತ' ಯು.ಎಸ್.ಎ ಥಿಯೇಟರ್ ಲಿಸ್ಟ್ ಔಟ್]
ಬರೋಬ್ಬರಿ 11 ತಿಂಗಳ ನಂತರ ತೆರೆ ಮೇಲೆ ದರ್ಶನ್ 
ಸುಮಾರು 11 ತಿಂಗಳ ನಂತರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು 'Mr ಐರಾವತ' ಚಿತ್ರದ ಮೂಲಕ ಬಿಗ್ ಸ್ಕ್ರೀನ್ ಮೇಲೆ ಭರ್ಜರಿಯಾಗಿ ರಾರಾಜಿಸುತ್ತಿದ್ದಾರೆ. ಜೊತೆಗೆ ದರ್ಶನ್ ಪುತ್ರ ವಿನೀಶ್ ತೂಗುದೀಪ್ ಅವರು ಖಾಕಿ ಡ್ರೆಸ್ಸ್ ನಲ್ಲಿ ಚಿತ್ರದಲ್ಲಿ ಮಿಂಚಿರುವುದು ವಿಶೇಷ. ['Mr.ಐರಾವತ' ಬಿಡುಗಡೆಗೆ ಕೌಂಟ್ ಡೌನ್ ಸ್ಟಾರ್ಟ್.!]
ದರ್ಶನ್ v/s ಪ್ರಕಾಶ್ ರೈ 
ಪ್ರತಿಭಾವಂತ ನಟ ಪ್ರಕಾಶ್ ರೈ ಅವರು 'ಐರಾವತ'ದಲ್ಲಿ ನೆಗೆಟಿವ್ ರೋಲ್ ನಲ್ಲಿ ಮಿಂಚಿದ್ದು, ಇದೇ ಮೊದಲ ಬಾರಿಗೆ ದರ್ಶನ್ ಜೊತೆ ಪ್ರಕಾಶ್ ರೈ ಕಾಣಿಸಿಕೊಂಡಿದ್ದಾರೆ. ಆದ್ದರಿಂದ ತೆರೆ ಮೇಲೆ ದರ್ಶನ್ ಹಾಗೂ ಪ್ರಕಾಶ್ ರೈ ಜುಗಲ್ ಬಂದಿ ನೋಡಲು ಪ್ರೇಕ್ಷಕರು ಕಾತರರಾಗಿದ್ದಾರೆ.

ಬಾಲಿವುಡ್ ಬೆಡಗಿ ಊರ್ವಶಿ ರೌಟೇಲ 
ಸೌತ್ ಕೊರಿಯಾದ 'ಮಿಸ್ ಏಷೀಯನ್ ಸೂಪರ್ ಮಾಡೆಲ್ 2011' ಊರ್ವಶಿ ರೌಟೇಲ ಅವರು ಇದೇ ಮೊದಲ ಬಾರಿಗೆ ಸ್ಯಾಂಡಲ್ ವುಡ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ 'Mr ಐರಾವತ' ಮೂಲಕ ದರ್ಶನ್ ಗೆ ಜೊತೆಯಾಗಿದ್ದು, ತಮ್ಮ ಗ್ಲಾಮರಸ್ ನಟನೆಯ ಮೂಲಕ ಪ್ರೇಕ್ಷಕರನ್ನು ರಂಜಿಸಲಿದ್ದಾರೆ.

ಸಂಗೀತ 
ಸಂಗೀತ ಮಾಂತ್ರಿಕ ವಿ.ಹರಿಕೃಷ್ಣ ಅವರು ಚಿತ್ರದ ಹಾಡುಗಳಿಗೆ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ದರ್ಶನ್ ಅವರ ಬಹುತೇಕ ಚಿತ್ರಗಳಿಗೆ ವಿ.ಹರಿಕೃಷ್ಣ ಅವರು ಸಂಗೀತ ನಿರ್ದೇಶನ ಮಾಡಿದ್ದು, ಎಲ್ಲಾ ಹಾಡುಗಳು ಹಿಟ್ ಲಿಸ್ಟ್ ಸೇರಿವೆ. ಅಲ್ಲದೇ ಈಗಾಗಲೇ 'Mr ಐರಾವತ' ಚಿತ್ರದ ಹಾಡುಗಳು ಮಾರುಕಟ್ಟೆಯಲ್ಲಿ ಬಿಗ್ ಹಿಟ್ ಪಡೆದುಕೊಂಡಿದೆ.
ವಿದೇಶದಲ್ಲೂ 'Mr ಐರಾವತ'ನ ಆರ್ಭಟ 
ಕರ್ನಾಟಕದಾದ್ಯಂತ ಸುಮಾರು ಶೇ 45% ಅಂದರೆ 300ಕ್ಕೂ ಹೆಚ್ಚು ಯುಎಸ್ಎ ನಲ್ಲಿ 45 ಹಾಗೂ ಆಸ್ಟ್ರೇಲಿಯಾ ಮತ್ತು ದುಬೈನ 5 ಚಿತ್ರಮಂದಿರಗಳಲ್ಲಿ ಬಾಕ್ಸಾಫೀಸ್ ಸುಲ್ತಾನ ದರ್ಶನ್ ಅವರ 'Mr ಐರಾವತ'ನ ಆರ್ಭಟ ನಾಳೆ(ಅಕ್ಟೋಬರ್ 1)ಯಿಂದ ಪ್ರಾರಂಭಗೊಳ್ಳಲಿದೆ.

ಬಿಡುಗಡೆಗೂ ಮುನ್ನ ರೆಕಾರ್ಡ್ ಬ್ರೇಕ್ 
ಭಾರತದಾದ್ಯಂತ ಏಕಕಾಲದಲ್ಲಿ ಒಂದೇ ಬಾರಿಗೆ ಚಿತ್ರ ಬಿಡುಗಡೆಯಾಗುತ್ತಿರುವುದು ಕನ್ನಡ ಚಿತ್ರರಂಗದಲ್ಲಿ ಇದೇ ಮೊದಲ ಬಾರಿ. ಲಹರಿ ಸಂಸ್ಥೆ ಕನ್ನಡ ಚಿತ್ರದ ವಿತರಣೆಯನ್ನು ಮೊಟ್ಟ ಮೊದಲ ಬಾರಿಗೆ ಮಾಡುತ್ತಿರುವುದು ವಿಶೇಷ. ಲಹರಿ ಸಂಸ್ಥೆ iDream Media ಸಹಯೋಗದೊಂದಿಗೆ 'Mr.ಐರಾವತ' ಚಿತ್ರವನ್ನ ಉತ್ತರ ಅಮೇರಿಕದಲ್ಲಿ ದಾಖಲೆ ಮಟ್ಟದ 45 ಥಿಯೇಟರ್ ಗಳಿಗೆ ವಿತರಣೆ ಮಾಡಿದೆ
ಅಭಿಮಾನಿಗಳ ಸಂಭ್ರಮಾಚರಣೆ 
ಅಭಿಮಾನಿಗಳು ದರ್ಶನ್ ಅವರ ಬೃಹತ್ ಕಟೌಟ್ ಗಳಿಗೆ ಹಾಲಿನ ಅಭಿಷೇಕ ಮಾಡುವ ಮೂಲಕ ಈಗಿನಿಂದಲೇ ಸಂಭ್ರಮಾಚರಣೆ ಶುರು ಮಾಡಿಕೊಂಡಿದ್ದಾರೆ. ಬೆಂಗಳೂರಿನ ಸಂತೋಷ್ ಥಿಯೇಟರ್ ನ ಮುಂಭಾಗ 72 ಫೀಟ್ ಎತ್ತರದ ದರ್ಶನ್ ಅವರ ಬೃಹತ್ ಕಟೌಟ್ ನಿಲ್ಲಿಸಿ ಚಿತ್ರಮಂದಿರವನ್ನು ಅಲಂಕರಿಸಿ ಶೃಂಗರಿಸುತ್ತಿದ್ದಾರೆ.
ಮಧ್ಯರಾತ್ರಿ ಚಿತ್ರ ಪ್ರದರ್ಶನ ಆರಂಭ 
ಪಿ.ವಿ.ಆರ್ ಸಿನಿಮಾ ಸ್ಕ್ರೀನ್ ಗಳಲ್ಲಿ ಬೆಳಗ್ಗೆ 8 ಗಂಟೆಗೆ ಫಸ್ಟ್ ಡೇ ಫಸ್ಟ್ ಶೋ ಪ್ರಾರಂಭಿಸಲಾಗಿದೆ. ಜೊತೆಗೆ ಕರ್ನಾಟಕದಾದ್ಯಂತ ಕೆಲವೆಡೆ ಕೆಲವು ಥಿಯೇಟರ್ ಗಳು ಮಧ್ಯರಾತ್ರಿ 2 ಗಂಟೆಗೆ ಚಿತ್ರ ಪ್ರದರ್ಶನ ಪ್ರಾರಂಭಿಸುವ ಸಾಧ್ಯತೆಗಳಿವೆ ಎಂದು ಬಲ್ಲ ಮೂಲಗಳಿಂದ ಮಾಹಿತಿ ಲಭಿಸಿದೆ.
Airavatha (2015) Kannada Movie Mp3 Songs Download
http://www.freshkannada.com/2015/08/airavatha-2015-kannada-movie-mp3-songs.html

ಚಾಮುಂಡೇಶ್ವರಿಗೆ ನಮಿಸಿ ಬಿಡುಗಡೆಗೆ ಸಿದ್ಧವಾದ ಮಿ. ಐರಾವತ
http://www.freshkannada.com/2015/09/blog-post_7.html
ಹೊಸ ದಾಖಲೆ ನಿರ್ಮಿಸಿದ ಚಾಲೆಂಜಿಂಗ್ ಸ್ಟಾರ್ 'Mr.ಐರಾವತ'
http://www.freshkannada.com/2015/09/blog-post_90.html
Fresh Kannada

Fresh Kannada

No comments:

Post a Comment

Google+ Followers

Powered by Blogger.