Breaking News
recent

ಯಾರ್ರೀ ಹೇಳಿದ್ದು ನನ್ನ ಮದುವೆ ಡೇಟ್ ಫಿಕ್ಸ್ ಆಯ್ತು ಅಂತ?

ಚಂದನವನದ ರಾಕಿಂಗ್ ಸ್ಟಾರ್ ಅವರ ಮದುವೆ ಡೇಟ್ ಫಿಕ್ಸ್ ಆಯ್ತಾ?. ರಾಕಿಂಗ್ ಸ್ಟಾರ್ ಯಶ್ ಅವರು ಮದುವೆ ಆಗ್ತಾ ಇದ್ದಾರಂತೆ, ಅಂತ ಹೀಗೊಂದು ಗಾಳಿ ಸುದ್ದಿ ಇಡೀ ಗಾಂಧಿನಗರದಲ್ಲಿ ಹಬ್ಬಿತ್ತು.
ಯಾರ್ರೀ ಹೇಳಿದ್ದು ನನ್ನ ಮದುವೆ ಡೇಟ್ ಫಿಕ್ಸ್ ಆಯ್ತು ಅಂತ?

ಆದರೆ ಸದ್ಯಕ್ಕೆ ಈ ರೂಮರ್ಸ್ ಸುಳ್ಳು ಆಗಿರುವುದರಿಂದ, ಈ ಸುದ್ದಿ ತಿಳಿಯುತ್ತಿದ್ದಂತೆ ರಾಕಿಂಗ್ ಸ್ಟಾರ್ ಯಶ್ ಅವರು ತಮ್ಮ ಫೇಸ್ ಬುಕ್ಕ್ ನಲ್ಲಿ ಸಖತ್ ಗರಮ್ ಆಗಿದ್ದು, ಎಲ್ಲಾ ರೂಮರ್ಸ್ ಗಳಿಗೆ ಫುಲ್ ಸ್ಟಾಪ್ ಇಟ್ಟಿದ್ದಾರೆ.
"ನನ್ನ ತಲೆಯಲ್ಲಿ ಮದುವೆ ಯೋಚನೆ ಬಂದಾಗ...ನಾನೇ ಮದುವೆ ಡೇಟ್ ಫಿಕ್ಸ್ ಮಾಡಿ ಎಲ್ಲರಿಗೂ ಹೇಳ್ತೀನಿ...ದಯವಿಟ್ಟು ಯಾರು ಡೇಟ್ ಫಿಕ್ಸ್ ಮಾಡೋ ತೊಂದರೆ ತಗೋ ಬೇಡಿ. ಇನ್ನು ಒಂದು ವರ್ಷ ನನಗೆ ಮದುವೆ ಆಗೋ ಯೋಚನೆ ಇಲ್ಲ!!!." ಎಂದು ಯಶ್ ಅವರು ತಮ್ಮ ಮದುವೆ ಬಗ್ಗೆ ಗಾಳಿ ಸುದ್ದಿ ಹಬ್ಬಿಸಿದವರಿಗೆ ಟಾಂಗ್ ನೀಡಿದ್ದಾರೆ.[ಮತ್ತೆ ಮೋಡಿ ಮಾಡಲಿರುವ 'ಮಿ.ಅಂಡ್ ಮಿಸಸ್' ರಾಮಾಚಾರಿ ಜೋಡಿ]
ಯಶ್ ಹಾಗೂ ರಾಧಿಕಾ ಪಂಡಿತ್‌ ಅವರ ಮದುವೆ ಫೆಬ್ರವರಿ 14 ರಂದು ನಡೆಯಲಿದೆ, ಅವರಿಬ್ಬರು, ಸಿನಿಮಾದಲ್ಲಿ ಮಾತ್ರ 'ಮಿ.ಅಂಡ್ ಮಿಸಸ್ ರಾಮಾಚಾರಿ' ಅಲ್ಲ, ನಿಜ ಜೀವನದಲ್ಲೂ 'ಮಿ.ಅಂಡ್ ಮಿಸಸ್' ಅನ್ನೋ ಬರಹವೊಂದು ಫೇಸ್ ಬುಕ್ಕಿನಲ್ಲಿ ಹರಿದಾಡುತ್ತಿದ್ದನ್ನು ಕಂಡ ಯಶ್ ಅವರು ಗರಮ್ ಆಗಿದ್ದಾರೆ.[ಕ್ರಿಸ್ಮಸ್ ಹಬ್ಬಕ್ಕೆ ಯಶ್ 'ಮಾಸ್ಟರ್ ಪೀಸ್' ಗಿಫ್ಟ್]
ಇದೀಗ ಎಲ್ಲಾ ಗಾಸಿಪ್ ಗಳಿಗೆ ಫುಲ್ ಸ್ಟಾಪ್ ಇಟ್ಟಿರುವ ನಟ ರಾಕಿಂಗ್ ಸ್ಟಾರ್ ಯಶ್ ಅವರು ಅಂತಹ ಯಾವುದೇ ಆಲೋಚನೆ ನನಗೆ ಸದ್ಯಕ್ಕೆ ಇಲ್ಲ. ಇದ್ದಾಗ ಎಲ್ಲರಿಗೂ ತಿಳಿಸುತ್ತೇನೆ ಎಂದು ಈ ಸುದ್ದಿಯಿಂದ ಬೇಸರಗೊಂಡಿರುವ ಯಶ್ ಎಲ್ಲರಿಗೂ ತಮ್ಮ ಫೇಸ್ ಬುಕ್ಕಿನಲ್ಲಿ ಸ್ಪಷ್ಟನೆ ನೀಡಿದ್ದಾರೆ.
Fresh Kannada

Fresh Kannada

No comments:

Post a Comment

Google+ Followers

Powered by Blogger.