Breaking News
recent

ಗೆದ್ದ ಸಿನಿಮಾಗಳ ಲಿಸ್ಟು ಈ ವರ್ಷ ದೊಡ್ಡದಿರಲಿದೆ...

ಕನ್ನಡ ಸಿನಿಮಾಗಳು ಸೋಲೋದೇ ಹೆಚ್ಚು. ವರ್ಷಕ್ಕೆ 100ರಿಂದ 120 ಸಿನಿಮಾಗಳು ರಿಲೀಸಾದ್ರೆ ಅದ್ರಲ್ಲಿ ಹಾಕಿದ ಹಣವನ್ನ ವಾಪಸು ತಂದುಕೊಡೋದು ಹೆಚ್ಚು ಅಂದ್ರೆ ಐದಾರು ಸಿನಿಮಾಗಳು ಮಾತ್ರ.
ಗೆದ್ದ ಸಿನಿಮಾಗಳ ಲಿಸ್ಟು ಈ ವರ್ಷ ದೊಡ್ಡದಿರಲಿದೆ...

ಇದು ದಶಮಾನಗಳಿಂದ ನಡೆದುಕೊಂಡು ಬಂದಿರುವ ಸಂಗತಿ, ಇದು ಈವತ್ತಿನವರೆಗೂ ಬದಲಾಗಿಲ್ಲ.
ಆದ್ರೆ ಈ ವರ್ಷ ಖಂಡಿತ ಈ ಲೆಕ್ಕಾಚಾರ ಬದಲಾಗಲಿದೆ. ಸ್ಯಾಂಡಲ್ವುಡ್ನಲ್ಲಿ ಹಿಟ್ ಸಿನಿಮಾಗಳ ಹಿಂಡೇ ಇರಲಿದೆ. ಹಾಗಂತ 100 ದಿನ ಪೂರೈಸಿದ ಸಿನಿಮಾಗಳು ಅಂತಲ್ಲ 50 ದಿನಗಳನ್ನ ಪೂರೈಸಿದ ಚಿತ್ರಗಳು, ಕಮರ್ಷಿಯಲಿ ಗೆದ್ದ ಸಿನಿಮಾಗಳ ಸಂಖ್ಯೆ ದೊಡ್ಡದಿದೆ.
ಅಂದಹಾಗೆ ಈ ವರ್ಷ ಸಿನಿಮಾಗಳು ಗೆಲ್ಲೋಕೆ ಕಾರಣ ಮತ್ತೊಮ್ಮೆ ಹೊಸ ನಿರ್ದೇಶಕರು ಭರವಸೆಯ ಸಿನಿಮಾಗಳನ್ನ ತೆರೆ ಮೇಲೆ ತಂದಿರೋದು. ಈ ವರ್ಷ ಸ್ಟಾರ್ ಸಿನಿಮಾಗಳಿಗಿಂತ ಹೊಸಬರ ಸಿನಿಮಾಗಳೇ ಅಬ್ಬರಿಸಿವೆ. ಗೆಲುವಿನ ನಗೆ ಬಿರಿವೆ. ಆ ಸಿನಿಮಾಗಳ್ಯಾವುವು?
ಸದಾ ಕನ್ನಡ ಚಿತ್ರರಂಗ ವೇಸ್ಟ್, ಒಳ್ಳೆ ಸಿನಿಮಾ ಮಾಡಲ್ಲ, ಮಾಧ್ಯಮಗಳು ಪ್ರಚಾರ ಕೊಡಲ್ಲ ಅಂತ ಬೈದುಕೊಳ್ಳೋ ಸಿನಿಪ್ರೇಮಿಗಳಿಗೆ ಇಲ್ಲಿದೆ ನೋಡಿ ಮುಕ್ಕಾಲು ವರ್ಷ ಮುಗಿದಾಗ ಸಿಕ್ಕ ಗೆಲುವಿನ ನಗೆ ಬೀರಿದ ಸಿನಿಮಾಗಳ ಲಿಸ್ಟ್.

1. ಬಾಕ್ಸ್ ಆಫೀಸಲ್ಲಿ ಮಿ. ಐರಾವತ ಮದಗಜ 
ಸ್ವತಃ ದರ್ಶನ್ ಅವ್ರೇ ಹೇಳಿದ್ರು ಸಿನಿಮಾದ ಸಕ್ಸಸ್ನ ಅಳೆಯೋ ಮಾನದಂಡ ಬದಲಾಗಿದೆ ಅನ್ನೋ ಅರ್ಥದಲ್ಲಿ. ಅದರಂತೆಯೇ ಎಪಿ ಅರ್ಜುನ್ ನಿರ್ದೇಶನದ ಐರಾವತ ಕಮ್ರಷಿಯಲಿ ಸೋಲನ್ನು ಕಂಡಿಲ್ಲ. ರಾಜ್ಯಾದ್ಯಂತ ಇನ್ನೂ ಕಲೆಕ್ಷನ್ನಲ್ಲಿ ಮುಂದಿರೋ ಐರಾವತ ನಿರ್ಮಾಪಕರಿಗೆ ಮೋಸ ಮಾಡಿಲ್ಲ. ಸೋ ಆನೆ ಇದ್ದರೂ ಸಾವಿರ ಸತ್ತರೂ ಸಾವಿರ.[ಚಿತ್ರ ವಿಮರ್ಶೆ : 'ಸುಂಟರಗಾಳಿ' ಬೀಸಿದ ದರ್ಶನ್ 'Mr.ಐರಾವತ']

2. ನಿರ್ಮಾಪಕರಿಗೆ ಮೋಸ ಮಾಡದ ರನ್ನ 
ಕಿಚ್ಚನ ರನ್ನ ಚಿತ್ರ ಈ ವರ್ಷದಲ್ಲಿ ಭರ್ಜರಿ ಗೆಲುವು ಪಡೆದುಕೊಳ್ಳದಿದ್ರೂ ನಿರ್ಮಾಪಕರಿಗೆ ಮೋಸ ಮಾಡದ ಚಿತ್ರ. ಮಾಲ್ಗಳೂ ಸೇರಿದಂತೆ ಮೂವತ್ತಕ್ಕೂ ಹೆಚ್ಚು ಸ್ಕ್ರೀನ್ಗಳಲ್ಲಿ 50 ದಿನಗಳ ಪ್ರದರ್ಶನ ಕಂಡ ರನ್ನ ಸೋಲಿಲ್ಲದ ಸಮಾಧಾನಕರ ಗೆಲುವು.[ಚಿತ್ರ ವಿಮರ್ಶೆ; ಕಳೆಗುಂದಿಲ್ಲ ಸುದೀಪ್ 'ರನ್ನ'ನ ರಂಗು]

3. ರಂಗು ಚೆಲ್ಲಿದ ಚಿತ್ರ ರಂಗಿತರಂಗ 
ಈ ವರ್ಷ ಸಿನಿಪ್ರೇಮಿಗಳ ಮನಸ್ಸಿಗೆ ರಂಗು ಚೆಲ್ಲಿದ ಚಿತ್ರ ರಂಗಿತರಂಗ. ಸುಲಭವಾಗಿ ಭಾರತ ಮತ್ತು ವಿದೇಶದಲ್ಲೂ ಶತದಿನೋತ್ಸವ ಆಚರಿಸ್ತಿದೆ. ಚಿತ್ರದ ಪ್ರಚಾರಕ್ಕಾಗಿ ನಿರ್ದೇಶಕ ಅನೂಪ್ ಭಂಡಾರಿ 50ಕ್ಕೂ ಹೆಚ್ಚು ದಿನ ವಿದೇಶದಲ್ಲೇ ಕಳೆದಿದ್ದಾರೆ. ಈ ವರ್ಷ ಕನ್ನಡ ಚಿತ್ರರಂಗ ನೆನಪಲ್ಲುಳಿಯುವ ಚಿತ್ರವಾಗಿ ಮೋಡಿ ಮಾಡಿದೆ ರಂಗಿತರಂಗ. ಬಾಹುಬಲಿಯ ಅಬ್ಭರದಲ್ಲೂ ಗಟ್ಟಿಯಾಗಿ ದಿಟ್ಟವಾಗಿ ನಿಂತಿದ್ದು ಕನ್ನಡ ಚಿತ್ರರಂಗದ ಸಾಮರ್ಥ್ಯ ಸಾಬೀತುಪಡಿಸಿದೆ.[ಚಿತ್ರ ವಿಮರ್ಶೆ : 'ರಂಗಿತರಂಗ' ಬಲು ರೋಚಕ]

4. ಸಸ್ಪೆನ್ಸ್ ಥ್ರಿಲ್ಲರ್ ಆಟಗಾರ 
ಕೆಎಂ ಚೈತನ್ಯ ನಿರ್ದೇಶನದ ಆಟಗಾರ ಚಿತ್ರ ದೇಶ ವಿದೇಶದಲ್ಲೂ ಯಶಸ್ಸು ಗಳಿಸಿದೆ. ಮಲ್ಟಿಸ್ಟಾರರ್ ಚಿತ್ರವಾಗಿದ್ದ ಆಟಗಾರ ಸಸ್ಪೆನ್ಸ್ ಥ್ರಿಲ್ಲರ್ ಆಗಿರೋದ್ರಿಂದ ಚಿತ್ರಪ್ರೇಮಿಗಳನ್ನ ಚಿತ್ರಮಂದಿರದಲ್ಲಿರುವಷ್ಟೂ ಹೊತ್ತು ಹಿಡಿದಿಡೋದ್ರಲ್ಲಿ ಯಶಸ್ವಿಯಾಗಿತ್ತು. ಚಿತ್ರ ಗಳಿಕೆಯಲ್ಲೂ ಮೋಸ ಮಾಡಲಿಲ್ಲ.[ಚಿತ್ರ ವಿಮರ್ಶೆ: 'ಆಟಗಾರ'ನ ಆಟ, ಓಟ ಜೋರಾಗಿದೆ ಗುರು]

5. ಮತ್ತೊಂದು ದುನಿಯಾ ಆಗತ್ತಾ ಕೆಂಡಸಂಪಿಗೆ? 
ದುನಿಯಾ ಸೂರಿ ನಿರ್ದೇಶನದ ಕೆಂಡಸಂಪಿಗೆ ಚಿತ್ರ ಮತ್ತೊಂದು ದುನಿಯಾದಂತಹ ಚಿತ್ರ ಅನ್ನೋ ಹಣೆಪಟ್ಟಿ ಗಿಟ್ಟಿಸಿಕೊಂಡಿದೆ. ಹೊಸಬರೇ ನಟಿಸಿದ್ದ ಚಿತ್ರವಾದ್ರೂ ಎಲ್ಲ ಕಡೆಗಳಲ್ಲೂ ಚಿತ್ರ ಯಶಸ್ವೀ ಪ್ರದರ್ಶನ ಕಾಣ್ತಿದೆ. ಚಿತ್ರದ ಕಲೆಕ್ಷನ್ನಿಂದ ನಿರ್ಮಾಪಕರೂ ಖುಷಿಯಾಗಿದ್ದಾರೆ.['ಕೆಂಡಸಂಪಿಗೆ' ವಿಮರ್ಶೆ - ಸೂರಿಯ ಹೊಸ 'ದುನಿಯಾ']

6. ಕಾಲೇಜ್ ಹೈಕ್ಳಿಗೆ ಇಷ್ಟವಾದ ಸಿದ್ಧಾರ್ಥ 
ಈ ವರ್ಷ ಅಣ್ಣಾವ್ರ ಮೊಮ್ಮಗನ ಎಂಟ್ರಿಯ ಚಿತ್ರ ಸಿದ್ಧಾರ್ಥ ಕೂಡ ತೆರೆಗೆ ಬಂದು ಐವತ್ತು ದಿನ ಪೂರೈಸ್ತು. ಚಿತ್ರ ಕಾಲೇಜ್ ಹೈಕ್ಳಿಗೆ ಇಷ್ಟವಾಯ್ತು. ಮಿಲನ ಪ್ರಕಾಶ್ ನಿರ್ದೇಶನದ ಚಿತ್ರ ಅದ್ಧೂರಿ ಗೆಲುವು ಅಲ್ಲದಿದ್ರೂ ಸೋತಿಲ್ಲ ಅನ್ನೋದು ಸಮಾಧಾನಕರ ವಿಚಾರ.['ಸಿದ್ದಾರ್ಥ' ವಿಮರ್ಶೆ: ಅಣ್ಣಾವ್ರ ಹೆಸರುಳಿಸಿದ ಮೊಮ್ಮಗ]

7. ಅಂಥಾ ಲಾಭವಿಲ್ಲ, ಲಾಸೂ ಇಲ್ಲದ ಮೈತ್ರಿ 
ಪವರ್ಸ್ಟಾರ್ ಅಭಿನಯದ ಮೈತ್ರಿ ಸಿನಿಮಾ ಈ ವರ್ಷ ಗೆದ್ದ ಸಿನಿಮಾಗಳ ಲಿಸ್ಟ್ ಸೇರೋ ಮತ್ತೊಂದು ಚಿತ್ರ. ಚಿತ್ರ ಕಮರ್ಷಿಯಲ್ ಅಲ್ಲದಿದ್ರೂ ಪುನೀತ್ ಅಭಿಮಾನಿಗಳಿಗೆ ಇಷ್ಟವಾದ ಮಕ್ಕಳ ಚಿತ್ರ. ಚಿತ್ರ ಲಾಭವನ್ನ ದೊಡ್ಡಮಟ್ಟದಲ್ಲಿ ಗಳಿಸದಿದ್ರೂ ಲಾಸ್ ಆಗಲಿಲ್ಲ ಅನ್ನೋದು ಸತ್ಯ.[ಚಿತ್ರ ವಿಮರ್ಶೆ: ಬಿಂದಾಸ್ ಐತ್ರಿ ಪುನೀತ್ 'ಮೈತ್ರಿ']

8. ಶಶಾಂಕ್ ನಿರ್ದೇಶನದ ಕೃಷ್ಣಲೀಲಾ 
ಈ ವರ್ಷ ಮತ್ತೆ ಕೃಷ್ಣನ ಮೊರೆಹೋದ ನಿರ್ದೇಶಕ ಶಶಾಂಕ್ ಮತ್ತು ಸ್ಯಾಂಡಲ್ವುಡ್ ಕೃಷ್ಣ ಅಜೆಯ್ ರಾವ್ ಕೃಷ್ಣಲೀಲಾ ಸಿನಿಮಾದಿಂದ ಗೆಲುವನ್ನೇ ಪಡೆದ್ರು. ಚಿತ್ರ ಸುಲಭವಾಗಿ ರಾಜ್ಯಾದ್ಯಂತ ಶತದಿನೋತ್ಸವದ ಸಂಭ್ರಮ ಆಚರಿಸ್ತು.[ಕೃಷ್ಣಲೀಲಾ' ವಿಮರ್ಶೆ: ಗಿಮಿಕ್ ಇಲ್ಲ...ಎಲ್ಲೂ ಕೆಮ್ಮಂಗಿಲ್ಲ!]

9. ದೇಶವಿದೇಶದಲ್ಲೂ ಉಪ್ಪಿ-2 ಯಶಸ್ಸು 
ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದ ಉಪ್ಪಿ-2 ಚಿತ್ರ ಕೂಡ ಈ ವರ್ಷದ ಹಿಟ್ ಲಿಸ್ಟ್ ಸೇರಿದ ಚಿತ್ರಗಳಲ್ಲೊಂದು. ಉಪ್ಪಿ-2 ಚಿತ್ರ 2010ರ ಸೂಪರ್ ನಂತ್ರ ಬಂದ್ರ ಉಪ್ಪಿ ನಿರ್ದೇಶನದ ಚಿತ್ರವಾದ್ದರಿಂದ ಸಾಕಷ್ಟು ನಿರೀಕ್ಷೆಯಿತ್ತು. ಮತ್ತೊಮ್ಮೆ ಉಪ್ಪಿ ಜಯಭೇರಿ ಬಾರಿಸಿ ಸಂಭ್ರಮಿಸಿದ್ದಾರೆ. ವಿದೇಶದಲ್ಲಿ ಕೂಡ ಉಪ್ಪಿ-2 ಯಶಸ್ವಿ ಪ್ರದರ್ಶನ ಕಾಣ್ತಿದೆ.[ವಿಮರ್ಶೆ: "ನಾನು" "ನೀನು" ಆಗೋ ಜರ್ನಿನೇ uppi2]

10. ಅವರೇಜ್ ಸಕ್ಸಸ್ ಸಿನಿಮಾ ವಾಸ್ತುಪ್ರಕಾರ 
ಭಟ್ಟರ ಪ್ರಕಾರ ಬಂದಿದ್ದ ಚಿತ್ರ ವಾಸ್ತುಪ್ರಕಾರ ಗೆಲುವು ಸೋಲಿನ ಲೆಕ್ಕಾಚಾರದಲ್ಲಿ ಗೆಲುವು ಅಂತಾನೇ ಕರೆಸಿಕೊಳ್ತು. ಸಿನಿಮಾ ಭರ್ಜರಿ ಸಕ್ಸಸ್ ಅಥವಾ ಕೋಟಿ ಕೋಟಿ ಹಣ ಕೊಳ್ಳೆ ಹೊಡೀದಿದ್ರೂ ಅವರೇಜ್ ಸಕ್ಸಸ್ ಸಿನಿಮಾ ಅನ್ನೋ ಹಣೆಪಟ್ಟಿ ಪಡ್ಕೊಳ್ತು.[ಚಿತ್ರ ವಿಮರ್ಶೆ: ಯೋಗರಾಜ್ ಭಟ್ ರ 'ಸರಳ' ವಾಸ್ತು]

11. ಹೊಸಬರ ಬಾಂಬೆ ಮಿಠಾಯಿ 
ಹೊಸಬರ ಚಿತ್ರವಾಗಿ ಗೆಲುವಿನ ಸಂಭ್ರಮ ಕಂಡ ಚಿತ್ರಗಳಲ್ಲಿ ಈ ವರ್ಷ ಬಾಂಬೆ ಮಿಠಾಯಿ ಕೂಡ ಒಂದು. ಚಿಕ್ಕಣ್ಣ, ನಿರಂಜನ್ ಅಭಿನಯದ ಚಿತ್ರ ಸದ್ದೇ ಇಲ್ಲದ ಗೆಲುವಿನ ಸವಿ ಸವೀತು. ಚಿತ್ರ 1 ಕೋಟಿ 30 ಲಕ್ಷದಷ್ಟು ದೊಡ್ಡ ಮೊತ್ತಕ್ಕೆ ಸ್ಯಾಟಲೈಟ್ಸ್ ರೈಟ್ಸ್ ಪಡೆದುಕೊಂಡಿದ್ದು ಸಣ್ಣ ವಿಷಯವಲ್ಲ.

12. ವಜ್ರಕಾಯ ಗೆಲ್ಲಿಸಿದ ಶಿವಣ್ಣ ಅಭಿಮಾನಿಗಳು 
ಶಿವಣ್ಣ-ಹರ್ಷ ಕಾಂಬಿನೇಷನ್ನ ಗೆಲುವಿನ ಯಾತ್ರೆ ಭಜರಂಗಿ ನಂತ್ರ ವಜ್ರಕಾಯದಲ್ಲೂ ಮುಂದುವರೀತು. ಚಿತ್ರ ಭರ್ಜರಿ ಗೆಲುವನ್ನ ಪಡ್ಕೊಳ್ಳದಿದ್ರೂ ಶಿವಣ್ಣ ಅಭಿಮಾನಿಗಳಿಗೆ ಇಷ್ಟವಾಯ್ತು. ಚಿತ್ರ ಕಮರ್ಷಿಯಲಿ ಸಕ್ಸಸ್ ಪಡ್ಕೊಳ್ತು.[ಚಿತ್ರವಿಮರ್ಶೆ ; ಶಿವ ಭಕ್ತರಿಗೆ 'ವಜ್ರಕಾಯ' ನೋ ಪ್ರಾಬ್ಲಂ.!]

13. ನಿರೀಕ್ಷೆ ಮೂಡಿಸಿರೋ ಚಿತ್ರಗಳು 
ಇನ್ನು ನವೆಂಬರ್ ಮತ್ತು ಡಿಸೆಂಬರ್ನಲ್ಲಿ ರಿಲೀಸಾಗಲಿರೋ ಚಿತ್ರಗಳು ಭರ್ಜರಿ ನಿರೀಕ್ಷೆ ಮೂಡಿಸಿವೆ. ಈ ಚಿತ್ರಗಳಲ್ಲಿ ಹಲವು ಈ ವರ್ಷದ ಹಿಟ್ಲಿಸ್ಟ್ ಸೇರೋದ್ರಲ್ಲಿ ಅನುಮಾನವಿಲ್ಲ. ಅಂತಹಾ ಚಿತ್ರಗಳಲ್ಲಿ ಶಿವಣ್ಣನ ಕಿಲ್ಲಿಂಗ್, ಪವರ್ಸ್ಟಾರ್ ಅಭಿನಯದ ದೊಡ್ಮನೆ ಹುಡುಗ, ಗೋಲ್ಡನ್ಸ್ಟಾರ್ ಅಭಿನಯದ ಸ್ಟೈಲ್ಕಿಂಗ್, ರಾಕಿಂಗ್ ರಾಮಾಚಾರಿಯ ಮಾಸ್ಟರ್ ಪೀಸ್ ಮುಖ್ಯವಾದವು.
Fresh Kannada

Fresh Kannada

No comments:

Post a Comment

Google+ Followers

Powered by Blogger.