Breaking News
recent

ಆಟೋ ಡ್ರೈವರ್ ಆಗಿ ಮಿಂಚಲಿರುವ ಲೇಡಿ ಟೈಗರ್

ಒಂದು ಕಾಲದಲ್ಲಿ ಚಂದನವನದ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದ 'ಕನಸಿನ ರಾಣಿ' ಮಾಲಾಶ್ರೀ ಅವರ ಹೊಸ ಚಿತ್ರ 'ಗಂಗಾ' ತೆರೆ ಮೇಲೆ ಬರಲು ತಯಾರಾಗಿದ್ದು, ಇದೇ ವಾರ (ಅಕ್ಟೋಬರ್ 22) ರಂದು ತೆರೆ ಕಾಣಲಿದೆ.
ಆಟೋ ಡ್ರೈವರ್ ಆಗಿ ಮಿಂಚಲಿರುವ ಲೇಡಿ ಟೈಗರ್

ಇದೀಗ ಮಾಲಾಶ್ರೀ ಅವರು 'ಗಂಗಾ' ಚಿತ್ರದಲ್ಲಿ ಹೊಸ ಅವತಾರದಲ್ಲಿ ಮಿಂಚಿದ್ದಾರೆ. ಯಾವಾಗಲೂ ಪ್ಯಾಂಟ್ ಶರ್ಟ್ ಹಾಕಿಕೊಂಡು ರೌಡಿಗಳ ಕೊರಳಪಟ್ಟಿ ಹಿಡಿದು ಸರಿಯಾಗಿ ಚಚ್ಚುತ್ತಿದ್ದ ಮಾಲಾಶ್ರೀ ಅವರು ಈ ಬಾರಿ ಸೀರೆಯುಟ್ಟು ಕಂಗೊಳಿಸಲಿದ್ದಾರೆ.[ದಸರಾ ಹಬ್ಬಕ್ಕೆ ಮಾಲಾಶ್ರೀ 'ಗಂಗಾ' ರಿಲೀಸ್]
ಲೇಡಿ ಟೈಗರ್ ಮಾಲಾಶ್ರೀ ಪತಿ ರಾಮು ನಿರ್ಮಾಣ ಮಾಡಿರುವ 39ನೇ ಸಿನಿಮಾ 'ಗಂಗಾ' ಚಿತ್ರದಲ್ಲಿ ನಟಿ ಮಾಲಾಶ್ರೀ ಅವರು ಆಟೋ ಚಾಲಕಿಯಾಗಿ ಜೊತೆಗೆ ಅಪ್ಪಟ ಗೃಹಿಣಿಯ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ವಿಶೇಷ.
"ಈ ಬಾರಿ 'ಗಂಗಾ' ಚಿತ್ರದ ಮೂಲಕ ನಾನು ಆಟೋ ಚಾಲಕಿಯಾಗಿ ಕಾಣಿಸಿಕೊಳ್ಳುತ್ತಿದ್ದೇನೆ, ಈ ಪಾತ್ರದಿಂದ ನಾನು ಎಲ್ಲ ಮಹಿಳೆಯರಿಗೆ ಸಂದೇಶ ನೀಡುವುದೇನೆಂದರೆ , ಜೀವನದಲ್ಲಿ ಯಾರ ಬೆಂಬಲವೂ ಇಲ್ಲದೆ ಸಂತೋಷದಿಂದ ಬಾಳಬಹುದು. ವಿಶೇಷವಾಗಿ 'ಗಂಗಾ' ಸಿನಿಮಾ ಮಹಿಳೆಯರಿಗೆ ತಮ್ಮ ಸ್ವಂತ ಕಾಲ ಮೇಲೆ ನಿಂತು ಬದುಕಲು ಸ್ಪೂರ್ತಿ ನೀಡುತ್ತದೆ' ಎನ್ನುತ್ತಾರೆ.['ಬೆಣ್ಣೆ ದೋಸೆ' ಹೋಟೆಲ್ ನಲ್ಲಿ ಮಾಲಾಶ್ರೀ ಆಟೋ ಸವಾರಿ]
ನಟಿ ಮಾಲಾಶ್ರೀ ಅವರು ಹೇಳುವ ಪ್ರಕಾರ ಸುಮಾರು ಏಳು ವರ್ಷಗಳ ಹಿಂದೆ ಅವರ ಪತಿ ನಿರ್ಮಾಪಕ ರಾಮು ಅವರು 'ಗಂಗಾ' ಚಿತ್ರದ ಕಥೆಯನ್ನು ಹೇಳಿದ್ದರಂತೆ. ಇನ್ನು ರಾಮು ಅವರು ಒಂದು ವಿಷಯವನ್ನು ತೆಗೆದುಕೊಂಡು ನಂತರ ಅದಕ್ಕೆ ಒಂದು ರೂಪ ಸಿಗೋವರೆಗೂ ಇಬ್ಬರು ಸೇರಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತಾರಂತೆ. ಪ್ರೇಕ್ಷಕರು ಮನೋರಂಜನೆಗಾಗಿ ಹಣ ನೀಡುತ್ತಾರೆ. ಆದ್ದರಿಂದ ನಾವಿಬ್ಬರೂ ಸೇರಿ ಎಚ್ಚರಿಕೆಯಿಂದ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳುತ್ತೇವೆ' ಎನ್ನುತ್ತಾರೆ ನಟಿ ಮಾಲಾಶ್ರೀ.[ಮಾಲಾಶ್ರೀ ಹಳೆ ಹೊಸ ಇಮೇಜ್ ನ ಸಂಗಮ 'ಗಂಗಾ']
ಚಿತ್ರದಲ್ಲಿ ಶ್ರೀನಿವಾಸ್ ಮೂರ್ತಿ, ಸತ್ಯ ಪ್ರಕಾಶ್, ಕೋಟೆ ಪ್ರಭಾಕರ್, ರವಿ ಚೇತನ್, ಪವಿತ್ರ ಲೋಕೇಶ್, ಹೇಮಾ ಚೌಧರಿ ಮುಂತಾದವರ ತಾರಾಗಣವಿದೆ. ಇದೇ ವಾರ ಅಕ್ಟೋಬರ್ 22 ರಂದು ದಸರಾ ಹಬ್ಬದ ಪ್ರಯುಕ್ತ ನಮ್ಮ ನಿಮ್ಮೆಲ್ಲರ 'ಗಂಗಾ' ಭರ್ಜರಿಯಾಗಿ ತೆರೆ ಮೇಲೆ ರಾರಾಜಿಸಲಿದ್ದಾಳೆ.
Fresh Kannada

Fresh Kannada

No comments:

Post a Comment

Google+ Followers

Powered by Blogger.