Breaking News
recent

ಟ್ರೈಲರ್: ದೊಡ್ಡ ಯುದ್ಧ ಗೆಲ್ಲ ಬೇಕು ಅಂದ್ರೆ, ಸಣ್ಣ ಸಣ್ಣ ಯುದ್ದ ಸೋಲಬೇಕು

ಸ್ಯಾಂಡಲ್ ವುಡ್ ಕ್ಷೇತ್ರದಲ್ಲಿ ಭಾರಿ ನಿರೀಕ್ಷೆ ಹುಟ್ಟಿಸಿರುವ ಕಾಡುಗಳ್ಳ ವೀರಪ್ಪನ್ ಕಥೆಯಾಧರಿತ 'ಕಿಲ್ಲಿಂಗ್ ವೀರಪ್ಪನ್', ಚಿತ್ರದ ಸೆಕೆಂಡ್ ಟ್ರೈಲರ್ ಬಿಡುಗಡೆಯಾಗಿದ್ದು, ಸಖತ್ ರೆಸ್ಪಾನ್ಸ್ ಗಿಟ್ಟಿಸಿಕೊಳ್ಳುತ್ತಿದೆ.
ಟ್ರೈಲರ್: ದೊಡ್ಡ ಯುದ್ಧ ಗೆಲ್ಲ ಬೇಕು ಅಂದ್ರೆ, ಸಣ್ಣ ಸಣ್ಣ ಯುದ್ದ ಸೋಲಬೇಕು

ಅಕ್ಟೋಬರ್ 18 ರಂದು ಕಾಡುಗಳ್ಳ ವೀರಪ್ಪನ್ ಮರಣ ಹೊಂದಿದ್ದು, ತಮಿಳು ಪೊಲೀಸ್ ಒಬ್ಬರ ಗುಂಡೇಟಿಗೆ ವೀರಪ್ಪನ್ ಬಲಿಯಾಗಿದ್ದರು. ಇದೀಗ ಅದೇ ದಿನದಂದು ರಾಮ್ ಗೋಪಾಲ್ ವರ್ಮಾ ನಿರ್ದೇಶನದ 'ಕಿಲ್ಲಿಂಗ್ ವೀರಪ್ಪನ್' ಚಿತ್ರದ ಸೆಕೆಂಡ್ ಟ್ರೈಲರ್ ಬಿಡುಗಡೆಯಾಗಿದೆ.
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಪಾರುಲ್ ಯಾದವ್, ಸಂದೀಪ್ ಭಾರದ್ವಾಜ್, ಯಜ್ಞಾ ಶೆಟ್ಟಿ, ಸಂಚಾರಿ ವಿಜಯ್, ನಿರ್ದೇಶಕ ಗಡ್ಡಾ ವಿಜಿ ಮುಂತಾದವರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ 'ಕಿಲ್ಲಿಂಗ್ ವೀರಪ್ಪನ್' ಚಿತ್ರದ ಸೆಕೆಂಡ್ ಟ್ರೈಲರ್ ಇಲ್ಲಿದೆ ನೋಡಿ..[ಶಿವಣ್ಣ 'ಕಿಲ್ಲಿಂಗ್ ವೀರಪ್ಪನ್', ಚಿತ್ರದಿಂದ ಒಂದು ಗುಡ್ ನ್ಯೂಸ್!]
ಜಿ.ಆರ್ ಪಿಕ್ಚರ್ಸ್ ಅರ್ಪಿಸುವ 'ಕಿಲ್ಲಿಂಗ್ ವೀರಪ್ಪನ್' ಚಿತ್ರದ ಟ್ರೈಲರ್ ನೋಡುತ್ತಿದ್ದರೆ, ಕಾಡಿನ ಸುಂದರ ರಮಣೀಯ ದೃಶ್ಯಗಳು ನಿಮಗೆ ಕಾಣಸಿಗುತ್ತವೆ. ಜೊತೆಗೆ 184 ಅಮಾಯಕ ಜನರನ್ನು ಹಾಗೂ 97 ಜನ ಪೊಲೀಸರನ್ನು ಕೊಂದಿರುವ, ಅಪಾಯಕಾರಿ ಮನುಷ್ಯ ದಂತಚೋರ ವೀರಪ್ಪನ್ ಬಗ್ಗೆ ನಿರ್ದೇಶಕರು ಇಡೀ ಚಿತ್ರದಲ್ಲಿ ಚೆಂದವಾಗಿ ಕಟ್ಟಿಕೊಟ್ಟಿದ್ದಾರೆ ಅಂತ ಟ್ರೈಲರ್ ನೋಡುತ್ತಿದ್ದಂತೆ ತಿಳಿಯುತ್ತದೆ.
ಖಿಲಾಡಿ ದಂತಚೋರನನ್ನು ಕೊಲ್ಲಲು ಸುಮಾರು 734 ಕೋಟಿ ರೂಪಾಯಿ ಖರ್ಚು ಮಾಡಿರುವ ಸರ್ಕಾರ ಕೊನೆಗೂ ವೀರಪ್ಪನನ್ನು ಶೂಟ್ ಮಾಡುವಲ್ಲಿ ಯಶಸ್ವಿಯಾಗಿತ್ತು.
ಇನ್ನು ನೈಜ ಕಥೆಯನ್ನು ಬಹಳ ನ್ಯಾಚುರಲ್ ಆಗಿ 'ಕಿಲ್ಲಿಂಗ್ ವೀರಪ್ಪನ್' ಚಿತ್ರದ ಮೂಲಕ ಕಟ್ಟಿಕೊಡುವಲ್ಲಿ ವಿವಾದಾತ್ಮಕ ನಿರ್ದೇಶಕ ಆರ್.ಜಿ.ವಿ ಯಶಸ್ವಿಯಾಗಿದ್ದಾರೆ.[ಫ್ಲ್ಯಾಶ್ ನ್ಯೂಸ್: 3000 ಥಿಯೇಟರ್ ಗಳಲ್ಲಿ ಶಿವಣ್ಣ, ಕಿಲ್ಲಿಂಗ್ ವೀರಪ್ಪನ್]
ಸ್ಪೆಷಲ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ 'ಸಾಯೋಕ್ಕು ಮುಂಚೆ ಏನಾದ್ರು ಮಾಡ್ಬೇಕು ಅನ್ನೋದಿದ್ದರೆ ಆ ವೀರಪ್ಪನ್ ಕೊಂದೇ ಸಾಯೋದು' ಅನ್ನೋ ಡೈಲಾಗ್ ಗಳು ಸಖತ್ ಖಡಕ್ ಆಗಿ ಮೂಡಿಬಂದಿದೆ. ಜೊತೆಗೆ ನಟಿ ಪಾರುಲ್ ಅವರು ಇದೇ ಮೊದಲ ಬಾರಿಗೆ ಸೂಪರ್ ಕಾಪ್ ಪಾತ್ರದಲ್ಲಿ ಗ್ಲಾಮರ್ ಲೆಸ್ ಗೆಟಪ್ ನಲ್ಲಿ ಮಿಂಚಿದ್ದಾರೆ. ಮುತ್ತುಲಕ್ಷ್ಮಿಯಾಗಿ ನಟಿ ಯಜ್ಞಾ ಶೆಟ್ಟಿ ಕಾಣಿಸಿಕೊಂಡಿದ್ದಾರೆ.
ಒಟ್ನಲ್ಲಿ ಸಿನಿಪ್ರೀಯರಲ್ಲಿ ಭಾರಿ ಕುತೂಹಲ ಕೆರಳಿಸಿರುವ 'ಕಿಲ್ಲಿಂಗ್ ವೀರಪ್ಪನ್', ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲಿ ನವೆಂಬರ್ 6 ರಂದು ಸುಮಾರು 3000 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದ್ದು, ಶಿವಣ್ಣ ಅಬಿಮಾನಿಗಳನ್ನು ಕಾತರದಿಂದ ಕಾಯುವಂತೆ ಮಾಡಿದೆ
Fresh Kannada

Fresh Kannada

No comments:

Post a Comment

Google+ Followers

Powered by Blogger.