Breaking News
recent

ಚಂದನವನದ ಕೋಲ್ಮಿಂಚು 'ರಂಗಿತರಂಗ'ಕ್ಕೆ, ನೂರರ ಸಂಭ್ರಮ

ಸ್ಯಾಂಡಲ್ ವುಡ್ ನಲ್ಲಿ ಹೊಸ ಬೆಳಕು ಮೂಡಿಸಿದ ಹೊಸಬರ 'ರಂಗಿತರಂಗ' ಚಿತ್ರ ಇದೀಗ ಕರ್ನಾಟಕದಾದ್ಯಂತ 100 ದಿನಗಳನ್ನು ಆಚರಿಸಿ ಸಂಭ್ರಮಿಸುತ್ತಿದೆ. ಕಥೆ-ಚಿತ್ರಕಥೆ-ಸಂಭಾಷಣೆ-ಸಂಗೀತ ಹಾಗೂ ನಿರ್ದೇಶನ ಜೊತೆಗೆ ನಟನೆಯಿಂದ ಹಿಡಿದು ಎಲ್ಲವನ್ನೂ ಹೊಸಬರೇ ಸೇರಿಕೊಂಡು ಮಾಡಿದ್ದ ಭಂಡಾರಿ ಸಹೋದರರ ರಂಗ್ ರಂಗೀನ್ 'ರಂಗಿತರಂಗ' ಶತಕ ಸಿಡಿಸಿ ಹಬ್ಬ ಆಚರಿಸುತ್ತಿದೆ.
ಅನುಪ್ ಭಂಡಾರಿ ನಿರ್ದೇಶನದ ಸಸ್ಪೆನ್ಸ್ ಥ್ರಿಲ್ಲರ್ ಕಥೆಯನ್ನಾಧರಿಸಿದ 'ರಂಗಿತರಂಗ' ಯಾವ ಕ್ಷಣದಲ್ಲಿ ಏನಾಗುತ್ತೋ ಅಂತ ಪ್ರೇಕ್ಷಕರು ಉಸಿರು ಬಿಗಿ ಹಿಡಿದು ನೋಡುವಂತೆ ಮಾಡಿತ್ತು.[ಅಂಕಲ್ ಸ್ಯಾಮ್ ಅಂಗಳದಲ್ಲಿ ರಂಗಿತರಂಗ 50 ದಿನದ ಸಂಭ್ರಮ! ]
ಇನ್ನು ಬರೀ ಕರ್ನಾಟಕದಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲೂ ಹೌಸ್ ಫುಲ್ ಪ್ರದರ್ಶನ ಕಾಣುವ ಮೂಲಕ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಒಟ್ನಲ್ಲಿ ಡಿಫರೆಂಟ್ ಆಗಿರೋ ಚಿತ್ರವೊಂದು ಈ ವರ್ಷ ಬಾಕ್ಸಾಫೀಸ್ ನಲ್ಲಿ ಸೂಪರ್ ಡೂಪರ್ ಹಿಟ್ ಕಂಡಿದೆ. ಅಂತೂ ಚಂದನವನದಲ್ಲಿ ಈ ವರ್ಷ ಹೊಸಬರು ಸಖತ್ ಕಮಾಲ್ ಮಾಡಿದ್ದಾರೆ.[ಬಾಹುಬಲಿ ವಿರುದ್ಧ ರಂಗಿತರಂಗ ತಂಡದಿಂದ ದೂರು]
ಕನ್ನಡ ಚಿತ್ರರಂಗದಲ್ಲಿ ಊಹೆಗೂ ನಿಲುಕದಂತೆ ಇತಿಹಾಸ ಸೃಷ್ಟಿಸಿದ ಈ ವರ್ಷದ ಹಿಟ್ ಹಾಗೂ ವಿಶ್ವದ ನಂ 1 ಚಿತ್ರ 'ರಂಗಿತರಂಗ' ವಿದೇಶದಲ್ಲಿ ಬಿಡುಗಡೆಯಾದ ಕೇವಲ ಒಂದೇ ವಾರಕ್ಕೆ ಸುಮಾರು ಒಂದೂವರೆ ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ಇನ್ನೂ ಮುಂಬರುವ ಕನ್ನಡ ಚಿತ್ರಗಳಿಗೆ ಒಂಥರಾ ಪ್ರೋತ್ಸಾಹ ನೀಡುವಂತೆ ಮಾಡಿದೆ.
ವಿಭಿನ್ನ ಕಥೆ ಹಾಗೂ ಸುಂದರವಾದ ಕಲರ್ ಫುಲ್ ಹಾಡುಗಳ ಜೊತೆಗೆ ನೈಜತೆಗೆ ಹತ್ತಿರವಾದ ಕಥೆಯನ್ನು 'ರಂಗಿತರಂಗ'ದ ಮೂಲಕ ನಿರ್ದೇಶಕ ಅನುಪ್ ಭಂಡಾರಿ ಅವರು ಪ್ರೇಕ್ಷಕರಿಗೆ ನೀಡಿದ್ದಾರೆ.[ರಂಗಿತರಂಗ-ಟ್ವಿಟ್ಟರ್ ಲೋಕದಲ್ಲಿ ಮಿಶ್ರ ರಂಗು]
ನಾಯಕ ನಿರುಪ್ ಭಂಡಾರಿ, ರಾಧಿಕಾ ಚೇತನ್ ಹಾಗೂ ಅವಂತಿಕಾ ಶೆಟ್ಟಿ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದ 'ರಂಗಿತರಂಗ' ಒಟ್ನಲ್ಲಿ ಹೊಸಬರಿಗೆ ಸ್ಪೂರ್ತಿ ನೀಡುವಂತಿದೆ ಅಂದ್ರೂ ತಪ್ಪಾಗ್ಲಿಕ್ಕಿಲ್ಲ.
Fresh Kannada

Fresh Kannada

No comments:

Post a Comment

Google+ Followers

Powered by Blogger.