Breaking News
recent

ಅಣ್ಣಮ್ಮ ದೇವಸ್ಥಾನದಲ್ಲಿ ದರ್ಶನ್, ಅಭಿಮಾನಿಗಳ ನೂಕುನುಗ್ಗಲು

ಸ್ಯಾಂಡಲ್ ವುಡ್ ನ ಬಾಕ್ಸಾಫೀಸ್ ಸುಲ್ತಾನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಗಾಂಧಿನಗರದ ಬಳಿ ಇರುವ ಅಣ್ಣಮ್ಮ ದೇವಸ್ಥಾನಕ್ಕೆ ಕುಚಿಕು ಗೆಳೆಯ ಬುಲೆಟ್ ಪ್ರಕಾಶ್ ಅವರೊಂದಿಗೆ ದೇವಿ ದರ್ಶನ ಪಡೆಯಲು ಆಗಮಿಸಿದ್ದರು.
ಅಣ್ಣಮ್ಮ ದೇವಸ್ಥಾನದಲ್ಲಿ ದರ್ಶನ್, ಅಭಿಮಾನಿಗಳ ನೂಕುನುಗ್ಗಲು

ಇಂದು ಬೆಳಿಗ್ಗೆ (ಅಕ್ಟೋಬರ್ 16) ದರ್ಶನ್ ಅವರು ಅಣ್ಣಮ್ಮ ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ತಮ್ಮ ಪ್ರೀತಿಯ ನಟನನ್ನು ನೋಡಲು ಅಭಿಮಾನಿಗಳು ಹರಸಾಹಸ ಪಟ್ಟರು. ಈ ವೇಳೆ ದೇವಸ್ಥಾನದಲ್ಲಿ ಕೊಂಚ ನೂಕು ನುಗ್ಗಲು ಉಂಟಾಗಿತ್ತು.[ಸ್ವಾಮೀ ನಿಮ್ಮ ಪ್ರಶ್ನೆಗಳಿಗೆ ದರ್ಶನ್ ಅಭಿಮಾನಿಯ ಉತ್ತರ]
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'Mr ಐರಾವತ' ಚಿತ್ರ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಹೀಗಾಗಿ ಇಂದು ಬೆಳ್ಳಂ ಬೆಳಿಗ್ಗೆ ದೇವಸ್ಥಾನಕ್ಕೆ ಭೇಟಿ ನೀಡಿದ ನಟ ದರ್ಶನ್ ಅವರು ಅಣ್ಣಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಈ ಸಮಯದಲ್ಲಿ ದರ್ಶನ್ ಆತ್ಮೀಯ ಗೆಳೆಯ ಬುಲೆಟ್ ಪ್ರಕಾಶ್ ಅವರು ಹಾಜರಿದ್ದು, ದೇವರ ದರ್ಶನ ಪಡೆದರು.[ಕುಚಿಕು ಗೆಳೆಯನಿಗೆ ಕಾಲ್ ಶೀಟ್ ಕೊಟ್ಟ ಆ ನಟ ಯಾರು?]
ಈಗಾಗಲೇ ದರ್ಶನ್ ಅವರ 'ವಿರಾಟ್' ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಚಿತ್ರ ಭರ್ಜರಿಯಾಗಿ ತೆರೆ ಕಾಣಲಿದೆ. ಅದರ ಜೊತೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು 'ಜಗ್ಗುದಾದ' ಶೂಟಿಂಗ್ ನಲ್ಲೂ ಬ್ಯುಸಿಯಾಗಿದ್ದಾರೆ.[ಚಾಲೆಂಜಿಂಗ್ ಸ್ಟಾರ್ ವಿರಾಟ್ ಚಿತ್ರ ಕುಂಬಳಕಾಯಿಯತ್ತ...]
ಒಟ್ನಲ್ಲಿ 'Mr ಐರಾವತ' ಚಿತ್ರದ ನಂತರ ದರ್ಶನ್ ಅವರು ಅಭಿಮಾನಿಗಳಿಗೆ ಮತ್ತೊಂದು ಹಿಟ್ ಚಿತ್ರ ಕೊಡಲು ತಯಾರಾಗಿದ್ದು, ಗಾಂಧಿನಗರದಲ್ಲಿ ಮತ್ತೆ ಬಾಕ್ಸಾಫೀಸ್ ಸುಲ್ತಾನ ಸೌಂಡ್ ಮಾಡಲಿದ್ದಾರೆ.
Fresh Kannada

Fresh Kannada

No comments:

Post a Comment

Google+ Followers

Powered by Blogger.