Breaking News
recent

ಅರ್ಜುನ್ ಸರ್ಜಾ ಅವರ ಹೆಂಡತಿಯಾದ ಲೂಸಿಯಾ ಬೆಡಗಿ

ಲೂಸಿಯಾ ಬೆಡಗಿಗೆ ಇದೀಗ ಅವಕಾಶಗಳ ಸುರಿಮಳೆಯೇ ಸುರೀತಾ ಇದೆ. ನಿನಾಸಂ ಸತೀಶ್ ಅವರೊಂದಿಗೆ ನಟಿಸಿದ ಸ್ಯಾಂಡಲ್ ವುಡ್ ನ ಮೊದಲ ಚಿತ್ರ ಹಿಟ್ ಆಗಿದ್ದೇ ತಡ ಎಲ್ಲ ಚಿತ್ರಗಳಲ್ಲೂ ಶ್ರುತಿಯೇ ಕೈಯಾಡಿಸುತ್ತಿದ್ದಾರೆ.
ಇದೀಗ ಶ್ರುತಿ ಹರಿಹರನ್ ಅವರು ಇದೇ ಮೊದಲ ಬಾರಿಗೆ ದಕ್ಷಿಣ ಭಾರತದ ಖ್ಯಾತ ನಟ ಅರ್ಜುನ್ ಸರ್ಜಾ ಅವರೊಂದಿಗೆ ಸರ್ಜಾ ಅವರ ಪತ್ನಿಯಾಗಿ ಹೊಸ ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರ ಕನ್ನಡ ವರ್ಷನ್ ನಲ್ಲೂ ತೆರೆ ಕಾಣಲಿದೆ.[ಅರ್ಜುನ್ ಸರ್ಜಾ, ಮನಿಷಾ 'ಗೇಮ್' ಟ್ರೈಲರ್ ನೋಡಿದ್ರಾ?]
ಅಂದಹಾಗೆ ಲೂಸಿಯಾ ಬೆಡಗಿಗೆ ತಮಿಳು ಚಿತ್ರರಂಗ ಹೊಸದೇನಲ್ಲಾ, ಈ ಮೊದಲು ಹಲವಾರು ತಮಿಳು ಚಿತ್ರದಲ್ಲಿ ನಟಿಸುವ ಮೂಲಕ ಕಾಲಿವುಡ್ ಕ್ಷೇತ್ರದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ.
ನಿರ್ದೇಶಕ ಅರುಣ್ ವೈದ್ಯನಾಥನ್ ಆಕ್ಷನ್-ಕಟ್ ಹೇಳುತ್ತಿರುವ ಇನ್ನೂ ಹೆಸರಿಡದ ಆಕ್ಷನ್-ಕ್ರೈಮ್ ಥ್ರಿಲ್ಲರ್ ಕಥೆಯಾಧರಿತ ಚಿತ್ರದಲ್ಲಿ ಕೇರಳದ ಬೆಡಗಿ ಶ್ರುತಿ ಹರಿಹರನ್ ಅವರು ಮಾಡರ್ನ್ ತಾಯಿಯಾಗಿ ಸರ್ಜಾ ಅವರ ಹೆಂಡತಿಯಾಗಿ ಕಾಣಿಸಿಕೊಳ್ಳಲಿದ್ದಾರೆ.[ಪ್ರಧಾನಿ ಮೋದಿಗೆ 'ಅಭಿಮನ್ಯು' ವಿಶೇಷ ಪ್ರದರ್ಶನ]
ಇನ್ನು ಈ ಪಾತ್ರದ ಬಗ್ಗೆ ನಟಿ ಶ್ರುತಿ ಹರಿಹರನ್ ಅವರು ಸಖತ್ ಥ್ರಿಲ್ಲಿಂಗ್ ಆಗಿದ್ದಾರೆ. ಜೊತೆಗೆ ಖ್ಯಾತ ನಟನೊಂದಿಗೆ ಇದೇ ಮೊದಲ ಬಾರಿಗೆ ತೆರೆ ಹಂಚಿಕೊಳ್ಳುತ್ತಿರುವುದಕ್ಕೆ ಫುಲ್ ಖುಷ್ ಆಗಿದ್ದಾರೆ.
ಬಹುಮುಖ ಪ್ರತಿಭೆ ಶ್ರುತಿ ಹರಿಹರನ್ ಅವರು ಸದ್ಯಕ್ಕೆ ಕನ್ನಡ ಚಿತ್ರ ಮಾದ ಮಾನಸಿಯಲ್ಲಿ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅವರೊಂದಿಗೆ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ತದನಂತರ ಸದ್ಯದಲ್ಲೇ ಅರ್ಜುನ್ ಸರ್ಜಾ ಅವರೊಂದಿಗೆ ಹೊಸ ಚಿತ್ರದ ಶೂಟಿಂಗ್ ತಂಡವನ್ನು ಸೇರಿಕೊಳ್ಳಲಿದ್ದಾರೆ.
Fresh Kannada

Fresh Kannada

No comments:

Post a Comment

Google+ Followers

Powered by Blogger.