Breaking News
recent

ಶುಕ್ರವಾರ ಹಾರಾಡಲಿರುವ ಸಾಲಿಗ್ರಾಮ ಹುಡುಗನ ಡವ್

ಚಲನಚಿತ್ರರಂಗಕ್ಕೂ, ಸಾಲಿಗ್ರಾಮಕ್ಕೂ ಬಹುದಿನಗಳಿಂದಲೂ ನಂಟಿದೆ. ಕನ್ನಡ ಸಿನಿಮಾ ರಂಗದಲ್ಲಿ ಅಣ್ಣಾವ್ರು ಎಂದೇ ಖ್ಯಾತಿ ಗಳಿಸಿರುವ ಡಾ.ರಾಜ್ ಕುಮಾರ್ ಅವರ ಧರ್ಮಪತ್ನಿ ಪಾರ್ವತಮ್ಮ ರಾಜ್ ಕುಮಾರ್ ಅವರು ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಸಾಲಿಗ್ರಾಮದವರು.
ಚಿತ್ರ ನಿರ್ಮಾಪಕರಾದ ಎಸ್.ಎ. ಚಿನ್ನೇಗೌಡ, ಎಸ್.ಎ ಗೋವಿಂದರಾಜು ಹಾಗೂ ಸಾರಾ ಗೋವಿಂದು ಅವರು ಕೂಡ ಸಾಲಿಗ್ರಾಮದವರು. ಇದೀಗ ಇವರೆಲ್ಲರೂ ತಮ್ಮದೇ ಆದ ಸಂಸ್ಥೆಗಳನ್ನು ಕಟ್ಟಿಕೊಂಡು ಈಗಾಗಲೇ ಹಲವಾರು ಸಿನಿಮಾಗಳನ್ನು ನಿರ್ಮಿಸಿ ಯಶಸ್ವಿಯಾಗಿ ಚಿತ್ರರಂಗ ಕ್ಷೇತ್ರದಲ್ಲಿ ಗಟ್ಟಿಯಾಗಿ ನೆಲೆ ನಿಂತಿದ್ದಾರೆ.
ಇದೀಗ ಅಖಿಲ ಕರ್ನಾಟಕ ಡಾ. ರಾಜ್ ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷರು ಹಾಗೂ ಚಿತ್ರ ನಿರ್ಮಾಪಕ ಸಾರಾ ಗೋವಿಂದು ಅವರ ಪುತ್ರ ಅನೂಪ್ ಅವರು 'ಡವ್' ಚಿತ್ರದ ಮೂಲಕ ಬೆಳ್ಳಿತೆರೆಯ ಮೇಲೆ ಇದೇ ಮೊದಲ ಬಾರಿಗೆ ನಾಯಕ ನಟರಾಗಿ ಅಭಿನಯಿಸುತ್ತಿದ್ದು, ಚಿತ್ರ ನಾಳೆ (ಅಕ್ಟೋಬರ್ 9) ರಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಇದು ಸಾಲಿಗ್ರಾಮ ಜನರಲ್ಲಿ ಸಂತಸ ತಂದಿದೆ, ಜೊತೆಗೆ ಸಾಲಿಗ್ರಾಮ ಪಟ್ಟಣದ ಪದ್ಮಾಂಬ ಚಿತ್ರಮಂದಿರದಲ್ಲೂ ಡವ್ ತೆರೆ ಕಾಣುತ್ತಿದೆ.['ಮಾಸ್ ಹೀರೋ' ಅಂತ ಅಂಬರೀಶ್ ಕರೆದದ್ದು ಯಾರಿಗೆ?]
ನಿರ್ದೇಶಕ ಅಲೆಮಾರಿ ಸಂತು ಆಕ್ಷನ್-ಕಟ್ ಹೇಳಿರುವ ಡವ್ ಚಿತ್ರದ ಮೂಹೂರ್ತ ಕಾರ್ಯಕ್ರಮ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ನಡೆದಿತ್ತು. ಸ್ಯಾಂಡಲ್ ವುಡ್ ನ ಸ್ಟಾರ್ ರವಿಚಂದ್ರನ್, ಶಿವರಾಜ್ ಕುಮಾರ್, ಹಿರಿಯ ನಟಿಯರಾದ ಜಯಂತಿ, ಜಯಮಾಲಾ, ನಟ-ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ನಟ-ನಿರ್ದೇಶಕ ಎಸ್.ನಾರಾಯಣ್, ಸಾಧುಕೋಕಿಲ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.[ಪಿಯು ಸ್ಟೂಡೆಂಟ್ ಸಾರಾ ಗೋವಿಂದು ಮಗನ ಡವ್ ಕಹಾನಿ]
ನಾಯಕ ನಟ ಅನೂಪ್ ಅವರೊಂದಿಗೆ ನಾಯಕಿಯಾಗಿ ಅದಿತಿ ಮಿಂಚಿದ್ದಾರೆ. ಬಿ.ಕೆ ಶ್ರೀನಿವಾಸ್ ಬಂಡವಾಳ ಹೂಡಿದ್ದು, ನಿರ್ದೇಶಕ ಅಲೆಮಾರಿ ಸಂತು ಆಕ್ಷನ್-ಕಟ್ ಹೇಳಿದ್ದಾರೆ.[ಎಲ್ಲೋ ನನ್ 'ಡವ್' ಟೀಸರ್ ಔಟ್ ಕಣ್ಲಾ]
ಈ ಚಿತ್ರದ ಹಾಡೊಂದಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಧ್ವನಿಯಾಗುವ ಮೂಲಕ ನಟ ಅನೂಪ್ ಅವರಿಗೆ ಒಂದೊಳ್ಳೆ ಓಪನ್ನಿಂಗ್ ಕೊಟ್ಟಿದ್ದಾರೆ. ಚಿತ್ರಕ್ಕೆ ಸಂಗೀತ ಮಾಂತ್ರಿಕ ಅರ್ಜುನ್ ಜನ್ಯ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.
Fresh Kannada

Fresh Kannada

No comments:

Post a Comment

Google+ Followers

Powered by Blogger.