Breaking News
recent

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಟಾಲಿವುಡ್ ಗೆ ಜಂಪ್ ಆಗ್ತಾರ?


ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರ ಬಹುನಿರೀಕ್ಷಿತ 'ಕಿಲ್ಲಿಂಗ್ ವೀರಪ್ಪನ್' ಸಿನಿಮಾದಿಂದಾಗಿ ನಮ್ಮ ಸ್ಯಾಂಡಲ್ ವುಡ್ ನ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗೆ ಪರಭಾಷೆಯಿಂದ ಕೂಡ ಸಖತ್ ಆಫರ್ ಗಳ ಸುರಿಮಳೆ ಸುರೀತಾ ಇದೆ.
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಟಾಲಿವುಡ್ ಗೆ ಜಂಪ್ ಆಗ್ತಾರ?

ಸದ್ಯಕ್ಕೆ ಹವಾ ಕ್ರಿಯೇಟ್ ಮಾಡುತ್ತಿರುವ 'ಕಿಲ್ಲಿಂಗ್ ವೀರಪ್ಪನ್' ಚಿತ್ರದ ಟ್ರೈಲರ್ ನೋಡಿದ ತೆಲುಗಿನ ಖ್ಯಾತ ನಿರ್ದೇಶಕರೊಬ್ಬರು ಶಿವಣ್ಣ ಅವರಿಗೆ ತಮ್ಮ ಮುಂದಿನ ಚಿತ್ರದಲ್ಲಿ ನಟಿಸಲು ಆಫರ್ ನೀಡಿದ್ದಾರೆ.

ಟಾಲಿವುಡ್ ನ ಫೇಮಸ್ ನಿರ್ದೇಶಕ ಚಂದ್ರಶೇಖರ ಎಲ್ಟಿ ಅವರ ನಿರ್ದೇಶನದಲ್ಲಿ ಹೊಸ ಚಿತ್ರವೊಂದು ಹೊರಬರುತ್ತಿದ್ದು, ತೆಲುಗು, ತಮಿಳು, ಮಲಯಾಳಂ ಹಾಗೂ ಕನ್ನಡ ಭಾಷೆಯಲ್ಲಿ ಮೂಡಿಬರುತ್ತಿದೆ. ಇದೀಗ ಕನ್ನಡ ವರ್ಷನ್ ಗೆ ನಾಯಕ ನಟನಾಗಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರನ್ನು ನಟಿಸಲು ನಿರ್ದೇಶಕರು ಕೇಳಿಕೊಂಡಿದ್ದು, ಸದ್ಯಕ್ಕೆ ಶಿವಣ್ಣ ಏನು ಹೇಳಿಲ್ಲ.[ವಿಡಿಯೋ: 'ರಂಗಿತರಂಗ' ಅಂದ್ರೆ 'ರಣರಂಗ', ಎಂದ ಶಿವಣ್ಣ]

ಮಲಯಾಳಂನ ಸೂಪರ್ ಸ್ಟಾರ್ ಮೋಹನ್ ಲಾಲ್ ಹಾಗೂ ನಟಿ ಗೌತಮಿ ಅವರು ಉಳಿದ ಮೂರು ಭಾಷೆಗಳಲ್ಲಿ ಕಾಣಿಸಿಕೊಳ್ಳುವುದು ಪಕ್ಕಾ ಆಗಿದ್ದು, ಕನ್ನಡ ವರ್ಷನ್ ಗೆ ಬಣ್ಣ ಹಚ್ಚಲು ನಟ ಶಿವರಾಜ್ ಕುಮಾರ್ ಅವರಿಗೆ ಕರೆ ಹೋಗಿದೆ.

ತೆಲುಗಿನ 'ಅಂದಾಲ ರಾಕ್ಷಸಿ', 'ಲೆಜೆಂಡ್', ಸಿನಿಮಾಗಳಿಗೆ ಬಂಡವಾಳ ಹಾಕಿದ್ದ ನಿರ್ಮಾಪಕ ಸಾಯಿ ಕೊರಪಾಟಿ ಅವರು ಈ ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರೆ.

ತೆಲುಗಿನ 'ಐತೆ', 'ಅನುಕೋಕುಂಡ ಒಕ ರೋಜು', 'ಸಾಹಸಂ', ನಂತಹ ಹಿಟ್ ಚಿತ್ರಗಳನ್ನು ನೀಡಿದ ನಿರ್ದೇಶಕ ಚಂದ್ರಶೇಖರ ಎಲ್ಟಿ ಅವರು ಈಗಾಗಲೇ ಶಿವಣ್ಣ ಅವರ ಜೊತೆ ಒಂದು ಸುತ್ತಿನ ಮಾತುಕತೆ ಪೂರೈಸಿದ್ದು, ಶಿವಣ್ಣ ಅವರ ಗ್ರೀನ್ ಸಿಗ್ನಲ್ ಗಾಗಿ ಕಾಯುತ್ತಿದ್ದಾರೆ.

ಎಲ್ಲವೂ ಅಂದುಕೊಂಡಂತೆ ಸುಗಮವಾಗಿ ನಡೆದರೆ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಓಕೆ ಅಂದರೆ ತೆಲುಗಿನ ನಿರ್ದೇಶಕರ ಜೊತೆ ಮತ್ತೊಮ್ಮೆ ನಮ್ಮ ಕನ್ನಡದ ಸ್ಟಾರ್ ಕೆಲಸ ಮಾಡಲಿದ್ದಾರೆ.
Fresh Kannada

Fresh Kannada

No comments:

Post a Comment

Google+ Followers

Powered by Blogger.