Breaking News
recent

ಹದಿನೆಂಟು ಬಾರಿ ಸ್ಕ್ರಿಪ್ಟ್ ಬದಲಾಯಿಸಿದ ಧ್ರುವ 'ಭರ್ಜರಿ'

ಸರ್ಜಾ ವಂಶದ ಕುಡಿ ಧ್ರುವ ಸರ್ಜಾ ಅವರ ಮೂರನೇ ಚಿತ್ರ 'ಭರ್ಜರಿ'ಯ ಶೂಟಿಂಗ್ ನಿಗದಿ ಪಡಿಸಿದಂತೆ ಇನ್ನೇನು ಸದ್ಯದಲ್ಲೇ ಆರಂಭವಾಗಲಿದೆ ಎಂದು ನಿರ್ದೇಶಕ ಚೇತನ್ ಕುಮಾರ್ ಹೇಳಿದ್ದಾರೆ.
ಆರ್ ಎಸ್ ಪ್ರೊಡಕ್ಷನ್ಸ್ ಬ್ಯಾನರ್ ನ ಅಡಿಯಲ್ಲಿ ಮೂಡಿ ಬರುತ್ತಿರುವ ಚಿತ್ರಕ್ಕೆ ಬುಲ್ ಟೆಂಪಲ್ ರಸ್ತೆಯಲ್ಲಿರುವ ದೊಡ್ಡ ಗಣೇಶ ದೇವಸ್ಥಾನದಲ್ಲಿ ಏಪ್ರಿಲ್ ತಿಂಗಳಿನಲ್ಲಿ ಮುಹೂರ್ತ ನೆರವೇರಿತ್ತು.[ಯಾರ ಪೊಗರಿನಿಂದ ಧ್ರುವ ಭರ್ಜರಿಗೆ ಕತ್ತರಿ ಬಿತ್ತುರಿ?]
ಆ ಬಳಿಕ ಅದೇಕೋ ಸುದ್ದಿ ಮಾಡದ ಚಿತ್ರತಂಡ ಮಾಧ್ಯಮಗಳಿಂದಲೂ ದೂರ ಉಳಿದಿತ್ತು. ಇನ್ನು ನಮಗೆ ಬಂದ ಸುದ್ದಿಯ ಪ್ರಕಾರ ಚಿತ್ರದ ನಿರ್ದೇಶಕ ಚೇತನ್ ಕುಮಾರ್ ಹಾಗೂ ಸರ್ಜಾ ಕುಡಿ ಧ್ರುವ ಅವರ ನಡುವಿನ ಕೆಲವು ಬಿಕ್ಕಟ್ಟಿನಿಂದ ಚಿತ್ರದ ಚಿತ್ರೀಕರಣ ನಿಧಾನಕ್ಕೆ ಸಾಗುತ್ತಿತ್ತು.
ಆದರೆ ಇದೀಗ 'ಬಹದ್ದೂರ್' ನಿರ್ದೇಶಕ ಚೇತನ್ ಕುಮಾರ್ ಅವರು ಎಲ್ಲಾ ರೂಮರ್ಸ್ ಗಳಿಗೆ ಬ್ರೇಕ್ ಹಾಕಿ ಸ್ಪಷ್ಟನೆ ನೀಡಿದ್ದಾರೆ.['ಬಹದ್ದೂರ್' ಗಂಡು ಧ್ರುವ 'ಭರ್ಜರಿ' ಸೌಂಡು]
ಅದೇನಪ್ಪಾ ಅಂದ್ರೆ, "ನಾನು ಮತ್ತು ನಟ ಧ್ರುವ ಸರ್ಜಾ ಒಳ್ಳೆಯ ಸ್ನೇಹಿತರಾಗಿದ್ದು, 'ಭರ್ಜರಿ' ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಹೊಂದಿದ್ದೇವೆ. ಧ್ರುವ ಸರ್ಜಾಗೆ ಇದು ಮೂರನೇ ಚಿತ್ರವಾದುದರಿಂದ ಸತತ 2 ಚಿತ್ರಗಳ ಮೂಲಕ ಯಶಸ್ಸು ಕಂಡಿರುವ ಧ್ರುವ ಪಾಲಿಗೆ ಈ ಚಿತ್ರ ಹ್ಯಾಟ್ರಿಕ್ ಯಶಸ್ಸು ತಂದುಕೊಡಲಿದೆ .
ಇದಕ್ಕಾಗಿ ನಾನು ಮತ್ತು ಧ್ರುವ ಇಬ್ಬರು ಸಾಕಷ್ಟು ಶ್ರಮಿಸುತ್ತಿದ್ದೇವೆ. ನಿಜ ಹೇಳಬೇಕು ಅಂದರೆ ನನ್ನ ಮತ್ತು ಧ್ರುವ ಸರ್ಜಾ ನಡುವೆ ಭಿನ್ನಾಭಿಪ್ರಾಯಗಳಿರುವುದು ಸತ್ಯ. ಆದರೆ ಅದು ವೈಯಕ್ತಿಕವಲ್ಲ, ಬದಲಾಗಿ 'ಭರ್ಜರಿ' ಚಿತ್ರದ ಬಗ್ಗೆ ಇರುವ ಭಿನ್ನಾಭಿಪ್ರಾಯ ಅಷ್ಟೆ.['ಭರ್ಜರಿ'ಯಾಗಿ ಬರುತ್ತಿದ್ದಾರೆ 'ಬಹದ್ದೂರ್' ಧ್ರುವ ಸರ್ಜಾ]
ಚಿತ್ರದ ಹೊರತಾಗಿ ನಾವಿಬ್ಬರೂ ತುಂಬಾ ಒಳ್ಳೆಯ ಗೆಳೆಯರು, ವೃತ್ತಿಪರ ವಿಚಾರ ಬಂದಾಗ ಮಾತ್ರ ನಾವು ನಿ‍ಷ್ಠೂರರು. ಚಿತ್ರವನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ಈಗಾಗಲೇ ಸುಮಾರು 18 ಬಾರಿ ಸ್ಕ್ರಿಪ್ಟ್ ನಲ್ಲಿ ಬದಲಾವಣೆ ಮಾಡಲಾಗಿದೆ.
ನಟ ಅರ್ಜುನ್ ಸರ್ಜಾ ಅವರ ಬಳಿ ಹೋಗಿ ಅವರ ಸಲಹೆ ಕೂಡ ಪಡೆಯಲಾಗಿದೆ. ಇದೀಗ ಚಿತ್ರದ ಅಂತಿಮ ಸ್ಕ್ರಿಪ್ಟ್ ಅರ್ಜುನ್ ಸರ್ಜಾ ಅವರು ಒಪ್ಪಿಕೊಂಡಿದ್ದು, ಸಿನಿಮಾದ ಶೂಟಿಂಗ್ ಗೆ ನಾವೆಲ್ಲರೂ ಸಿದ್ಧರಾಗಿದ್ದೇವೆ, ಇದೇ ವಿಜಯದಶಮಿ ಹಬ್ಬದ ದಿನದಂದು ಚಿತ್ರದ ಚಿತ್ರೀಕರಣ ಶುರುವಾಗಲಿದೆ" ಎಂದು ಚೇತನ್ ಹೇಳಿದ್ದಾರೆ.
ಖ್ಯಾತ ನಟ ಅರ್ಜುನ್ ಸರ್ಜಾ ಕುಟುಂಬದ ಕುಡಿಯಾಗಿರುವ ಧ್ರುವ ಸರ್ಜಾ ಎ.ಪಿ ಅರ್ಜುನ್ ಅವರ 'ಅದ್ದೂರಿ' ಮೂಲಕ ಸ್ಯಾಂಡಲ್ ವುಡ್ ಗೆ ಕಾಲಿಟ್ಟವರು. ನಟಿಸಿದ ಎರಡು ಚಿತ್ರಗಳು ಬಾಕ್ಸಾಫೀಸ್ ನಲ್ಲಿ ಹಿಟ್ ಆಗಿವೆ. ಇದೀಗ ಮೂರನೇ ಚಿತ್ರ 'ಭರ್ಜರಿ'ಗೆ 'ಬಹದ್ದೂರ್' ನಿರ್ದೇಶಕ ಚೇತನ್ ಕುಮಾರ್ ಆಕ್ಷನ್-ಕಟ್ ಹೇಳಲಿದ್ದು, ರಚಿತಾ ರಾಮ್ ನಾಯಕಿಯಾಗಿ ಮಿಂಚಲಿದ್ದಾರೆ.
Fresh Kannada

Fresh Kannada

No comments:

Post a Comment

Google+ Followers

Powered by Blogger.