Breaking News
recent

ಮನೋರಂಜನ್ ರವಿಚಂದ್ರನ್ ಚೊಚ್ಚಲ ಚಿತ್ರದ ಚಿತ್ರೀಕರಣ ಫಿಕ್ಸ್.!

ಕ್ರೇಜಿ ಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ರವರ ಚೊಚ್ಚಲ ಚಿತ್ರ 'ರಣಧೀರ...ಪ್ರೇಮಲೋಕದಲ್ಲಿ' ಸದ್ಯಕ್ಕೆ ಸೆಟ್ಟೇರುತ್ತಿಲ್ಲ ಅಂತ ಇಂದು ಬೆಳಗ್ಗೆಯಷ್ಟೇ ನಾವೇ ನಿಮಗೆ ಹೇಳಿದ್ವಿ.

ಮನೋರಂಜನ್ ರವಿಚಂದ್ರನ್ ಚೊಚ್ಚಲ ಚಿತ್ರದ ಚಿತ್ರೀಕರಣ ಫಿಕ್ಸ್.!

ಇದೀಗ ಇದೇ ವಿಚಾರವಾಗಿ ಅಧಿಕೃತ ಮಾಹಿತಿ ಹೊರಬಿದ್ದಿದೆ. ಕನಸುಗಾರ ರವಿಚಂದ್ರನ್ ನಿರ್ಮಿಸಿ, ನಿರ್ದೇಶಿಸಬೇಕಿದ್ದ 'ರಣಧೀರ...ಪ್ರೇಮಲೋಕದಲ್ಲಿ' ಸಿನಿಮಾ ಮುಂದಕ್ಕೆ ಹೋಗಿರುವುದು ಪಕ್ಕಾ. ಇದಕ್ಕೆ ಕಾರಣ ನಿರ್ದೇಶಕ ಭರತ್ ರವರ ಚಿತ್ರಕಥೆ.!
ಹೌದು, ಈ ಹಿಂದೆ ಶ್ರೀಮುರುಳಿಗಾಗಿ 'ಕಂಠಿ' ಚಿತ್ರ ನಿರ್ದೇಶನ ಮಾಡಿದ್ದ ಭರತ್, ಕ್ರೇಜಿ ಸ್ಟಾರ್ ಪುತ್ರನಿಗಾಗಿ ಒಂದೊಳ್ಳೆ ಕಥೆ ರೆಡಿಮಾಡಿದ್ದರು. ಆ ಕಥೆಯನ್ನು ಕೇಳಿ ಇಷ್ಟಪಟ್ಟಿರುವ ರವಿಚಂದ್ರನ್ ಮತ್ತು ಮನೋರಂಜನ್ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಹೀಗಾಗಿ 'ರಣಧೀರ...ಪ್ರೇಮಲೋಕದಲ್ಲಿ' ಮುಂದಕ್ಕೆ ಹೋಗಿದೆ. [ರವಿಚಂದ್ರನ್ ಪುತ್ರ ಮನೋರಂಜನ್ 'ರಣಧೀರ' ಸಿನಿಮಾ ನಿಂತ್ಹೋಯ್ತಾ?]
ಇನ್ನೂ ಹೆಸರಿಡದ ಭರತ್ ನಿರ್ದೇಶಿಸುವ ಮನೋರಂಜನ್ ಚೊಚ್ಚಲ ಚಿತ್ರಕ್ಕೆ ಜಯಣ್ಣ-ಭೋಗೇಂದ್ರ ಬಂಡವಾಳ ಹಾಕಲಿದ್ದಾರೆ. ಸದ್ಯದಲ್ಲೇ ಚಿತ್ರದ ಮುಹೂರ್ತ ನೆರವೇರಲಿದ್ದು, ಡಿಸೆಂಬರ್ ನಲ್ಲಿ ಶೂಟಿಂಗ್ ಗೆ ಚಾಲನೆ ಸಿಗಲಿದೆ.
ಹಾಗ್ನೋಡಿದ್ರೆ, ಇಷ್ಟೊತ್ತಿಗೆ 'ರಣಧೀರ...ಪ್ರೇಮಲೋಕದಲ್ಲಿ' ಚಿತ್ರದ ಮೂಲಕ ಮನೋರಂಜನ್ ಸ್ಯಾಂಡಲ್ ವುಡ್ ಗೆ ಪದಾರ್ಪಣೆ ಮಾಡಬೇಕಿತ್ತು. ಆದ್ರೆ, ರಿಯಾಲಿಟಿ ಶೋ, ನಟನೆ ಮತ್ತು 'ಅಪೂರ್ವ' ಚಿತ್ರದಲ್ಲಿ ರವಿಚಂದ್ರನ್ ಬಿಜಿಯಾಗಿರುವ ಕಾರಣ 'ರಣಧೀರ...ಪ್ರೇಮಲೋಕದಲ್ಲಿ' ನಿಂತಲ್ಲೇ ನಿಂತಿದೆ.

Fresh Kannada

Fresh Kannada

No comments:

Post a Comment

Google+ Followers

Powered by Blogger.