Breaking News
recent

ರಜನಿಕಾಂತ್ ಗೆ 'ವಾಸ್ಕೋಡಿಗಾಮ' ನೋಡುವ ಬಯಕೆ.!

ಸೂಪರ್ ಸ್ಟಾರ್ ರಜನಿಕಾಂತ್ ಗೆ ಒಂದು ಬಯಕೆ ಆಗಿದೆ. ಕಳೆದ ವಾರವಷ್ಟೇ ರಿಲೀಸ್ ಆಗಿದ್ದ ಕಿಶೋರ್ ನಟನೆಯ 'ವಾಸ್ಕೋಡಿಗಾಮ' ಚಿತ್ರ ನೋಡುವ ಇಂಗಿತ ವ್ಯಕ್ತಪಡಿಸಿದ್ದಾರೆ ತಲೈವಾ ರಜನಿಕಾಂತ್.!
 ರಜನಿಕಾಂತ್ ಗೆ 'ವಾಸ್ಕೋಡಿಗಾಮ' ನೋಡುವ ಬಯಕೆ.!

ನಂಬಿದ್ರೆ ನಂಬಿ, ಇದು ಗಾಸಿಪ್ ಅಲ್ಲ. 100% ಸತ್ಯ. ರಜನಿಕಾಂತ್ ಅಭಿನಯಿಸುತ್ತಿರುವ 'ಕಬಾಲಿ' ಚಿತ್ರದಲ್ಲಿ ಕಿಶೋರ್ ವಿಲನ್ ಆಗಿ ನಟಿಸುತ್ತಿದ್ದಾರೆ. 'ಕಬಾಲಿ' ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ತಮ್ಮ 'ವಾಸ್ಕೋಡಿಗಾಮ' ಚಿತ್ರದ ಟ್ರೈಲರ್ ನ ರಜನಿಕಾಂತ್ ಗೆ ಕಿಶೋರ್ ತೋರಿಸಿದ್ದಾರೆ.

ಟ್ರೈಲರ್ ಮತ್ತು ಸಾಂಗ್ಸ್ ನೋಡಿದ ರಜನಿಕಾಂತ್, ''ಈ ಸಿನಿಮಾನ ನಾನು ನೋಡಲೇಬೇಕು. ಆದಷ್ಟು ಬೇಗ ಸ್ಕ್ರೀನಿಂಗ್ ಅರೇಂಜ್ ಮಾಡಿ'' ಅಂತ ಹೇಳಿದ್ದಾರಂತೆ. [ವಿಮರ್ಶೆ : ವಿದ್ಯಾರ್ಥಿಗಳಿಗಾಗಿ ಹೇಳಿ ಮಾಡಿಸಿರುವ 'ವಾಸ್ಕೋಡಿಗಾಮ']

ರಜನಿಕಾಂತ್ ಕಾಲ್ ಶೀಟ್ ನೋಡಿಕೊಂಡು 'ವಾಸ್ಕೋಡಿಗಾಮ' ಚಿತ್ರತಂಡ ಸ್ಪೆಷಲ್ ಸ್ಕ್ರೀನಿಂಗ್ ಆಯೋಜಿಸುತ್ತಿದೆ. 'ವಾಸ್ಕೋಡಿಗಾಮ'ನ ಹೊಸ ರೂಟು, ರಜನಿ ಸಾರ್ ಗೆ ಇಷ್ಟವಾಗುತ್ತಾ, ನೋಡೋಣ
Fresh Kannada

Fresh Kannada

No comments:

Post a Comment

Google+ Followers

Powered by Blogger.