Breaking News
recent

ದೇಸಾಯಿ ಅವರ 'ತಂದಾನ ತಂದನಾನ' ಈಗ 'ಯಕ್ಷಪ್ರಶ್ನೆ'!

ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ಹಾಗೂ ನಟ-ನಿರ್ದೇಶಕ ರಮೇಶ್ ಅರವಿಂದ್ ಅವರ ಜೋಡಿ ಸುಮಾರು ವರ್ಷಗಳ ನಂತರ ಮತ್ತೆ ಒಂದಾಗಿದ್ದು, ಅವರಿಬ್ಬರ ಜುಗಲ್ ಬಂದಿಯಲ್ಲಿ 'ತಂದಾನ ತಂದನಾನ' ಎಂಬ ಚಿತ್ರ ರೆಡಿಯಾಗುತ್ತಿರುವ ವಿಷಯ ನಿಮಗೆ ಗೊತ್ತೇ ಇದೆ ಅಲ್ವಾ?.
ದೇಸಾಯಿ ಅವರ 'ತಂದಾನ ತಂದನಾನ' ಈಗ 'ಯಕ್ಷಪ್ರಶ್ನೆ'!

ಇದೀಗ ಚಿತ್ರದ ಟೈಟಲ್ ಬದಲಾಯಿಸಿರುವ ನಿರ್ದೇಶಕ ಸುನೀಲ್ ದೇಸಾಯಿ ಅವರು 'ತಂದಾನ ತಂದನಾನ' ಎಂಬ ಟೈಟಲ್ ಬದಲಾಗಿ ಚಿತ್ರಕ್ಕೆ 'ಯಕ್ಷಪ್ರಶ್ನೆ' ಎಂದು ಹೊಸ ಟೈಟಲ್ ಕೊಟ್ಟಿದ್ದಾರೆ.

ಈ ಮೊದಲು ನಿರ್ದೇಶಕ ಸುನೀಲ್ ದೇಸಾಯಿ ಅವರು "ಈ ಬಾರಿ ಸಿನಿಮಾವನ್ನು ಅನಾವಶ್ಯಕವಾಗಿ ನಿಧಾನ ಮಾಡದೇ ಆದಷ್ಟು ಬೇಗ ಮುಗಿಸಿ ಕೊಡುವುದಾಗಿ" ಬಹಿರಂಗವಾಗಿ ಪತ್ರಿಕಾಗೋಷ್ಠಿಯೊಂದರಲ್ಲಿ ಹೇಳಿಕೊಂಡಿದ್ದರು. ಆದ್ರೆ ಅವರು ಹಾಗೆ ಹೇಳಿದ ಮೂರ್ನಾಲ್ಕು ದಿನಗಳೊಳಗೆ 'ತಂದಾನ ತಂದನಾನ' ಚಿತ್ರ ನಿಂತು ಹೋಗಿದೆ ಎಂದು ಸುದ್ದಿಯಾಗಿತ್ತು.

ಹಣಕಾಸಿನ ತೊಂದರೆಯಿಂದ ನಿಂತು ಹೋಗಿದ್ದ ದೇಸಾಯಿ ಅವರ ಸಿನಿಮಾವನ್ನು ಮುಂದುವರಿಸಲು, ಬೇರೊಬ್ಬರು ಹೊಸ ನಿರ್ಮಾಪಕರು ಸಿಕ್ಕಿದ ಮೇಲೆ 'ತಂದಾನ ತಂದನಾನ' ಚಿತ್ರಕ್ಕೆ ಮರು ಚಾಲನೆ ಸಿಕ್ಕಿದ್ದು, ಎಲ್ಲಾ ಹಳೇ ವಿಷ್ಯಾ.[ಎರಡು ದಶಕಗಳ ನಂತ್ರ ಒಂದಾದ 'ನಮ್ಮೂರ ಮಂದಾರ..' ಜೋಡಿ]

ಈಗ ಸುನೀಲ್ ದೇಸಾಯಿ ಹಾಗೂ ರಮೇಶ್ ಅವರ ಕಡೆಯಿಂದ ಇರುವ ಲೇಟೆಸ್ಟ್ ಮಾಹಿತಿ ಏನಪ್ಪಾ ಅಂದ್ರೆ, ಈ ಮೊದಲು ಚಿತ್ರದ ಹೆಸರು 'ತಂದಾನ ತಂದನಾನ' ಎಂದಿದ್ದದ್ದನ್ನು, ಇದೀಗ 'ಯಕ್ಷಪ್ರಶ್ನೆ' ಎಂದು ಬದಲಾಯಿಸಿದ್ದಾರೆ. ಈಗಾಗಲೇ ರಾಕ್ ಲೈನ್ ಸ್ಟುಡಿಯೋದಲ್ಲಿ ಚಿತ್ರದ ಕೊನೆಯ ಹಂತದ ಶೂಟಿಂಗ್ ಭರ್ಜರಿಯಾಗಿ ನಡೆಯುತ್ತಿದೆ.

ಈಗಾಗಲೇ ಹಾಸ್ಯಮಯ ಕಥೆಯನ್ನಾಧರಿಸಿದ ಚಿತ್ರದ ಶೂಟಿಂಗ್ ಬಹುತೇಕ ಕೊನೆಯ ಹಂತದಲ್ಲಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಚಿತ್ರ ತೆರೆ ಕಾಣಲಿದೆ. ಲಾಂಗ್ ಗ್ಯಾಪ್ ಪಡೆದುಕೊಂಡು ಕಮ್ ಬ್ಯಾಕ್ ಆಗಿರುವ ನಟ ರಮೇಶ್ ಅರವಿಂದ್ ಅವರು ಮತ್ತೆ ತಮ್ಮ ಹಾಸ್ಯದ ಮೂಲಕ ಅಭಿಮಾನಿಗಳನ್ನು ಮೋಡಿ ಮಾಡಲಿದ್ದಾರೆ.

ಚಿತ್ರದಲ್ಲಿ ಮೈತ್ರಿಯಾ ಗೌಡ ಹಾಗೂ ಕವಿತಾ ಎಂಬ ಇಬ್ಬರು ಚೆಲುವೆಯರು ರಮೇಶ್ ಅವರೊಂದಿಗೆ ಡ್ಯುಯೆಟ್ ಹಾಡಿದ್ದಾರೆ. ಜೊತೆಗೆ ನಟ ಅನಂತ್ ನಾಗ್, ಶಿವರಾಮಣ್ಣ, ರಂಗಾಯಣ ರಘು ಸೇರಿದಂತೆ ಮೂವತ್ತಕ್ಕೂ ಹೆಚ್ಚು ಪ್ರತಿಭಾವಂತ ಕಲಾವಿದರು ಈ ಚಿತ್ರದಲ್ಲಿ ಕಾಣಿಸಿಕೊಂಡಿರುವುದು ವಿಶೇಷ.

ಈ ಚಿತ್ರದಲ್ಲಿ ಬರೀ ಹಾಸ್ಯವಷ್ಟೇ ಅಲ್ಲದೇ, ಮನುಷ್ಯನ ನವಿರಾದ ಭಾವನೆಗಳಿವೆ, ಬದುಕಿನ ನಾನಾ ಮಗ್ಗಲುಗಳ ಪರಿಚಯವಿದೆ. ಆದ್ದರಿಂದ ಹೆಚ್ಚಿನ ಹಾಡುಗಳ ಅನಿವಾರ್ಯತೆ ಇಲ್ಲ ಅಂತ ಚಿತ್ರತಂಡಕ್ಕೆ ಅನಿಸಿರುವುದರಿಂದ, ಚಿತ್ರದಲ್ಲಿ ಕೇವಲ ಎರಡು ಹಾಡುಗಳನ್ನು ಮಾತ್ರ ಬಳಸಿಕೊಂಡಿದ್ದಾರೆ.

ಇನ್ನು ಚಿತ್ರದ ಹೊಸ ಟೈಟಲ್ ಅನ್ನು ನಟ ಕಿಚ್ಚ ಸುದೀಪ್ ಹಾಗೂ ನಟಿ ರಾಧಿಕಾ ಪಂಡಿತ್ ಅವರು ಸದ್ಯದಲ್ಲೇ ಬಿಡುಗಡೆ ಮಾಡಲಿದ್ದಾರೆ. ಒಟ್ನಲ್ಲಿ 'ರಾಮ ಶಾಮ ಭಾಮ' ಚಿತ್ರದ ನಂತರ ಸ್ಯಾಂಡಲ್ ವುಡ್ ಪ್ರೇಕ್ಷಕರಿಗೆ ಮತ್ತೊಂದು ಕಾಮಿಡಿ ಚಿತ್ರವನ್ನು ದೇಸಾಯಿ ಅವರು ಗಿಫ್ಟ್ ಆಗಿ ನೀಡುತ್ತಿದ್ದಾರೆ.
Fresh Kannada

Fresh Kannada

No comments:

Post a Comment

Google+ Followers

Powered by Blogger.