Breaking News
recent

ನವ ಬಾಳಿಗೆ ಕಾಲಿಟ್ಟ ಪ್ರಜ್ವಲ್ ದೇವರಾಜ್-ರಾಗಿಣಿ

ಸ್ಯಾಂಡಲ್ ವುಡ್ ನ ದಿ ಮೋಸ್ಟ್ ಎಲಿಜೆಬಲ್ ಬ್ಯಾಚುಲರ್ ಆಗಿದ್ದ ಪ್ರಜ್ವಲ್ ದೇವರಾಜ್ ಇಂದು ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದಾರೆ. ತಮ್ಮ ದೀರ್ಘಕಾಲದ ಗೆಳತಿ ರಾಗಿಣಿ ಚಂದ್ರನ್ ಜೊತೆ ಹೊಸ ಬಾಳಿಗೆ ಅಡಿ ಇಟ್ಟಿದ್ದಾರೆ.
ನವ ಬಾಳಿಗೆ ಕಾಲಿಟ್ಟ ಪ್ರಜ್ವಲ್ ದೇವರಾಜ್-ರಾಗಿಣಿ

ಇಂದು ಬೆಳಗ್ಗೆ 10.30 ರಿಂದ 12 ಗಂಟೆ ವರೆಗೆ ಇದ್ದ ಶುಭ ಧನುರ್ ಲಗ್ನದಲ್ಲಿ ಪ್ರಜ್ವಲ್ ದೇವರಾಜ್ ಮತ್ತು ರಾಗಿಣಿ ಚಂದ್ರನ್ ಹಸೆ ಮಣೆ ಏರಿದರು. 11.05 ರ ಸುಮಾರಿಗೆ ರಾಗಿಣಿ ಚಂದ್ರನ್ ರವರ ಕುತ್ತಿಗೆಗೆ ಪ್ರಜ್ವಲ್ ದೇವರಾಜ್ ಮಾಂಗಲ್ಯಧಾರಣೆ ಮಾಡಿದರು. [ಪ್ರಜ್ವಲ್ ದೇವರಾಜ್ ಮನದನ್ನೆ ರಾಗಿಣಿ ಚಂದ್ರನ್ ಕುರಿತು...]

ಇಂದ್ರಲೋಕವೇ ಧರೆಗಿಳಿದಷ್ಟು ಅದ್ದೂರಿಯಾಗಿ, ಅಷ್ಟೇ ಸಾಂಪ್ರದಾಯಿಕವಾಗಿ ಡೈನಾಮಿಕ್ ಸ್ಟಾರ್ ದೇವರಾಜ್ ಪುತ್ರ ಪ್ರಜ್ವಲ್-ರಾಗಿಣಿ ಚಂದ್ರನ್ ಮದುವೆ ನಡೆಯಿತು. ['ರೀಲ್' ಹೀರೋ ಪ್ರಜ್ವಲ್ ದೇವರಾಜ್ 'ರಿಯಲ್' ಪ್ರೇಮ್ ಕಹಾನಿ]

ಅಯ್ಯರ್ ಮತ್ತು ಒಕ್ಕಲಿಗ ಸಂಪ್ರದಾಯದಂತೆ ಮದುವೆ ನೆರವೇರಿತು. ಗಣಪತಿ ಪೂಜೆಯೊಂದಿಗೆ ಇಂದು ಬೆಳಗ್ಗೆ ಶಾಸ್ತ್ರಗಳು ಪ್ರಾರಂಭವಾಗಿ, ಶಾಸ್ತ್ರೋಕ್ತವಾಗಿ ವರಪೂಜೆ, ಕಂಕಣ ಶಾಸ್ತ್ರ ಮತ್ತು ಉಯ್ಯಾಲೆ ಶಾಸ್ತ್ರ ನಡೆಯಿತು.

ಮದುವೆ ಪ್ರಯುಕ್ತ ತಂದೆ ದೇವರಾಜ್ ಉಡುಗೊರೆಯಾಗಿ ನೀಡಿದ್ದ BMW 520D ಸೀರೀಸ್ ಕಾರ್ ನಲ್ಲಿ ಪ್ರಜ್ವಲ್ ದೇವರಾಜ್ ಮದುವೆ ಮಂಟಪಕ್ಕೆ ಆಗಮಿಸಿದರು. [ಚಿತ್ರಗಳು : ಪ್ರಜ್ವಲ್ ದೇವರಾಜ್ ಮದುವೆ ತಯಾರಿ ಸಂಭ್ರಮ]

ಬೆಂಗಳೂರಿನ ಅರಮನೆ ಮೈದಾನದ 'ದಿ ಗ್ರ್ಯಾಂಡ್ ಕೆಸಲ್'ನಲ್ಲಿ ಪ್ರಜ್ವಲ್ ದೇವರಾಜ್-ರಾಗಿಣಿ ಚಂದ್ರನ್ ಮದುವೆ ನಡೆಯುತ್ತಿದೆ. ಸಂಜೆ 7 ಗಂಟೆಗೆ ಆರತಕ್ಷತೆ ಕಾರ್ಯಕ್ರಮ ಪ್ರಾರಂಭವಾಗಲಿದೆ
Fresh Kannada

Fresh Kannada

No comments:

Post a Comment

Google+ Followers

Powered by Blogger.