Breaking News
recent

ದರ್ಶನ್ ಕೈಗೆ ಪೆಟ್ಟು; 'ಜಗ್ಗು ದಾದಾ' ಶೂಟಿಂಗ್ ಮುಂದಕ್ಕೆ.!

ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಕೈಗೆ ಪೆಟ್ಟು ಮಾಡಿಕೊಂಡಿದ್ದಾರೆ. ಮನೆಯಲ್ಲಿ ವರ್ಕೌಟ್ ಮಾಡುವ ಸಂದರ್ಭದಲ್ಲಿ ದರ್ಶನ್ ಕೈಗೆ ಏಟಾಗಿದೆ. ಆದ ಪರಿಣಾಮ ಅವರ 'ಜಗ್ಗು ದಾದಾ' ಸಿನಿಮಾ ಚಿತ್ರೀಕರಣ ಮುಂದಕ್ಕೆ ಹೋಗಿದೆ.
ದರ್ಶನ್ ಕೈಗೆ ಪೆಟ್ಟು; 'ಜಗ್ಗು ದಾದಾ' ಶೂಟಿಂಗ್ ಮುಂದಕ್ಕೆ.!

ಇಂದು ಬೆಳಗ್ಗೆ ಎಂದಿನಂತೆ ತಮ್ಮ ಮನೆಯಲ್ಲೇ ದರ್ಶನ್ ವರ್ಕೌಟ್ ಮಾಡುತ್ತಿದ್ದರು. ಆಗ ಅಚಾನಕ್ಕಾಗಿ ಅವರ ಎಡಕೈಗೆ ಪೆಟ್ಟಾಗಿದೆ. ತಕ್ಷಣ ಅವರನ್ನ ಬಿ.ಜಿ.ಎಸ್ ಆಸ್ಪತ್ರೆಗೆ ದಾಖಲಿಸಿ, ಸೂಕ್ತ ಚಿಕಿತ್ಸೆ ನೀಡಲಾಗಿದೆ. ಮಧ್ಯಾಹ್ನದ ಹೊತ್ತಿಗೆ ಆಸ್ಪತ್ರೆಯಿಂದ ದರ್ಶನ್ ಡಿಸ್ಚಾರ್ಜ್ ಆಗಿದ್ದಾರೆ.

20 ದಿನ ರೆಸ್ಟ್ ತೆಗೆದುಕೊಳ್ಳುವಂತೆ ಬೆಂಗಳೂರಿನ ಬಿ.ಜಿ.ಎಸ್ ಆಸ್ಪತ್ರೆ ವೈದ್ಯರು ಸಲಹೆ ನೀಡಿದ್ದಾರೆ. ಹೀಗಾಗಿ, 'ಜಗ್ಗು ದಾದಾ' ಶೂಟಿಂಗ್ 20 ದಿನಗಳ ಕಾಲ ಪೋಸ್ಟ್ ಪೋನ್ ಆಗಿದೆ. [ಚಿತ್ರಗಳು : 'ಜಗ್ಗು ದಾದಾ' ಅಡ್ಡದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್]

'ಜಗ್ಗು ದಾದಾ' ಚಿತ್ರದಲ್ಲಿ ದರ್ಶನ್ ಜೊತೆ ದೀಕ್ಷಾ ಸೇಠ್ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ದರ್ಶನ್ ರವರೊಟ್ಟಿಗೆ ಸೃಜನ್ ಲೋಕೇಶ್ ಕೂಡ ಮುಖ್ಯ ಭೂಮಿಕೆಯಲ್ಲಿದ್ದಾರೆ. ಆದಷ್ಟು ಬೇಗ ದರ್ಶನ್ ಗುಣಮುಖರಾಗಿ, ಶೂಟಿಂಗ್ ಗೆ ಹಾಜರಾಗಲಿ ಅಂತ ಹಾರೈಸೋಣ.
Fresh Kannada

Fresh Kannada

No comments:

Post a Comment

Google+ Followers

Powered by Blogger.