Breaking News
recent

ಹ್ಯಾಪಿ ಮ್ಯಾರೀಡ್ ಲೈಫ್ ಪ್ರಜ್ವಲ್ ದೇವರಾಜ್-ರಾಗಿಣಿ

ಸ್ಯಾಂಡಲ್ ವುಡ್ ನಲ್ಲಿ 'ಸಿಕ್ಸರ್' ಬಾರಿಸಿದ ಪ್ರಜ್ವಲ್ ದೇವರಾಜ್ ಬ್ಯಾಚುಲರ್ ಲೈಫ್ ಗೆ ಬೈ ಬೈ ಹೇಳಿದ್ದಾರೆ. ಡೈನಾಮಿಕ್ ಸ್ಟಾರ್ ದೇವರಾಜ್ ಪುತ್ರ ಪ್ರಜ್ವಲ್ ದೇವರಾಜ್ ಇವತ್ತು ತಮ್ಮ ಮನದನ್ನೆ ರಾಗಿಣಿ ಚಂದ್ರನ್ ರವರೊಂದಿಗೆ ನವ ಜೀವನಕ್ಕೆ ಕಾಲಿಟ್ಟಿದ್ದಾರೆ.
ಹ್ಯಾಪಿ ಮ್ಯಾರೀಡ್ ಲೈಫ್ ಪ್ರಜ್ವಲ್ ದೇವರಾಜ್-ರಾಗಿಣಿ

ಬೆಂಗಳೂರಿನ ಅರಮನೆ ಮೈದಾನದ 'ದಿ ಗ್ರ್ಯಾಂಡ್ ಕೆಸಲ್'ನಲ್ಲಿ ಪ್ರಜ್ವಲ್ ದೇವರಾಜ್-ರಾಗಿಣಿ ಚಂದ್ರನ್ ವಿವಾಹ ಅದ್ದೂರಿಯಾಗಿ ನಡೆಯುತ್ತಿದೆ. ಇಬ್ಬರ ಗಟ್ಟಿಮೇಳಕ್ಕಾಗಿ ಅದ್ದೂರಿ ಮಂಟಪ ಸಿದ್ಧವಾಗಿತ್ತು. [ನವ ಬಾಳಿಗೆ ಕಾಲಿಟ್ಟ ಪ್ರಜ್ವಲ್ ದೇವರಾಜ್-ರಾಗಿಣಿ]

ಇಂದು ಬೆಳಗ್ಗೆ 10.30 ರಿಂದ 12 ಗಂಟೆ ವರೆಗೆ ಇದ್ದ ಶುಭ ಧನುರ್ ಲಗ್ನದಲ್ಲಿ ಪ್ರಜ್ವಲ್ ದೇವರಾಜ್ ಮತ್ತು ರಾಗಿಣಿ ಚಂದ್ರನ್ ಹಸೆ ಮಣೆ ಏರಿದರು. ಆ ಮೂಲಕ ಇಬ್ಬರ ಸುದೀರ್ಘ ಪ್ರೇಮಕ್ಕೆ ಅಧಿಕೃತ ಮುದ್ರೆ ಬಿದ್ದಂತಾಗಿದೆ. ಮುಂದೆ ಓದಿ....
Fresh Kannada

Fresh Kannada

No comments:

Post a Comment

Google+ Followers

Powered by Blogger.