Breaking News
recent

ಮೊದಲ ಮಳೆಯ ನಾಯಕಿ ನೀವೇನಾ ಹರಿಪ್ರಿಯಾ?

ಚಿತ್ರಸಾಹಿತಿ ಹೃದಯಶಿವ ಸದ್ದಿಲ್ಲದಂತೆ ಸಕಲೇಶಪುರದಲ್ಲಿ ಸೆಟ್ಲ್ ಆಗಿದ್ದಾರೆ. ಮುಂಗಾರುಮಳೆ ಮುಗಿದು ಹಿಂಗಾರಿನ ಕಡೆ ಹೊರಳ್ತಿರೋ ಪ್ರಕೃತಿ ಕೂಡ ಅವ್ರಿಗೆ ಸರಿಯಾದ ಸಾಥ್ ಕೊಡ್ತಿದೆ. ಅಂದ ಹಾಗೆ ನಾವ್ ಹೇಳ್ತಿರೋದು ಹೃದಯಶಿವ ಅವ್ರ 'ಮೊದಲ ಮಳೆ' ಚಿತ್ರದ ಬಗ್ಗೆ..
'ಮೊದಲ ಮಳೆ' ಚಿತ್ರ ಶುರುವಾಗುತ್ತೆ ಅನ್ನೋ ಸುದ್ದಿ ಬಂದಿದ್ದಷ್ಟೇ, ಅದು ಸದ್ದಿಲ್ಲದಂತೆ ಶುರುವಾಗಿದೆ. ಮಲೆನಾಡ ತವರು ಸಕಲೇಶಪುರದಲ್ಲಿ ಈ ವರ್ಷ ಮಳೆಯ ಅಬ್ಬರ ಕಡಿಮೆಯಿದ್ದು ಚಿತ್ರದ ಶೂಟಿಂಗ್ ಲಗುಬಗೆಯಿಂದ ನಡೀತಿರೋ ಸುದ್ದಿ ಬಂದಿದೆ.
ಆದ್ರೆ ಹರಿಪ್ರಿಯಾ ಅವ್ರ ಈ ಫೋಟೋ ಅಂತರ್ಜಾಲದಲ್ಲಿ ಓಡಾಡ್ತಿದ್ದು ಮಳೆಯಲ್ಲಿ ಇದು ಹರಿಪ್ರಿಯಾ ಗೆಟಪ್ಪಾ ಅನ್ನೋ ಅನುಮಾನ ಸಿನಿಪ್ರೇಮಿಗಳನ್ನ ಕಾಡ್ತಿದೆ. ಇಷ್ಟಕ್ಕೂ ಹರಿಪ್ರಿಯ ಪೊಲೀಸ್ ಇನ್ಸ್ಪೆಕ್ಟರ್ ಗೆಟಪ್ನಲ್ಲಿ ಇಷ್ಟು ಸ್ಲಿಮ್ ಆಗಿದ್ಯಾವಾಗ ಅಂತ ಗಾಂಧಿನಗರ ತಲೆ ಕೆರೆದುಕೊಳ್ತಿದೆ..
ನಿಂತ ನೀರಾಗಿದ್ದ 'ನೀರ್ ದೋಸೆ'ಗೆ ಹರಿಪ್ರಿಯಾ ಮಸಾಲೆ ಚಿಮುಕಿಸಿರುವುದರಿಂದ ಘಮ್ಮಂತ ವಾಸನೆ ಅಮರಿಕೊಳ್ಳಲು ಶುರುಮಾಡಿದೆ. ರಮ್ಯಾ ಕೈಕೊಟ್ಟ ನಂತರ ನಾಟಿಕೋಳಿ ರಾಗಿಣಿ ದ್ವಿವೇದಿ ಎಂಟ್ರಿ ಕೊಡುತ್ತಾರೆಂಬ ಸುದ್ದಿ ಸುಳ್ಳಾಗಿ ಹರಿಪ್ರಿಯಾ ಹೆಸರು ಕೇಳಿಬಂದಿರುವುದು ಚಿತ್ರಪ್ರೇಮಿಗಳ ಬಾಯಲ್ಲಿ ನೀರೂರುವಂತೆ ಮಾಡಿದೆ. ಅಷ್ಟರಲ್ಲಿ ಮೊದಲ ಮಳೆ ಸುದ್ದಿ ಕೂಡ ಹೊರಬಿದ್ದಿದೆ.
ಒಟ್ಟಿನಲ್ಲಿ 2015 ವರ್ಷ ಹರಿಪ್ರಿಯಾಗೆ ಸೇರಿದ ವರ್ಷವೆಂದರೆ ಅತಿಶಯೋಕ್ತಿಯಲ್ಲ. ರನ್ನ, ಬುಲೆಟ್ ಬಸ್ಯಾ ತೆರೆಯ ಮೇಲೆ ಅಬ್ಬರಿಸಿ ಮರೆಯಾಗಿದ್ದರೆ, ರಣತಂತ್ರ, ಮಂಜಿನ ಹನಿ, ರಿಕ್ಕಿ ಮತ್ತು ನೀರ್ ದೋಸೆಯಲ್ಲಿ ಹರಿಪ್ರಿಯಾ ತೊಡಗಿಕೊಂಡಿದ್ದಾರೆ. ಜೊತೆಗೆ ಮಲಯಾಳಂ ಮತ್ತು ತಮಿಳಿನಲ್ಲಿಯೂ ಹರಿಪ್ರಿಯಾ ಸಖತ್ ಬಿಜಿಯಾಗಿದ್ದಾರೆ.
Fresh Kannada

Fresh Kannada

No comments:

Post a Comment

Google+ Followers

Powered by Blogger.