Breaking News
recent

ಯಜಮಾನನ ಜೊತೆ ಹುಚ್ಚ ಮತ್ತೆ ಥಿಯೇಟರಿಗೆ ಬರುತ್ತಿದ್ದಾನೆ!

ಒಂದು ಕಾಲದಲ್ಲಿ ಸಖತ್ ಫೇಮಸ್ ಆಗಿದ್ದ 20 ಕನ್ನಡ ಚಿತ್ರಗಳ ಸರದಾರ ನಿರ್ಮಾಪಕ ರೆಹಮಾನ್ ಅವರ ಸೂಪರ್ ಹಿಟ್ ಚಿತ್ರಗಳಾದ 'ಯಜಮಾನ' ಹಾಗೂ 'ಹುಚ್ಚ' ಚಿತ್ರಗಳು ಮತ್ತೊಮ್ಮೆ ರೀ-ರಿಲೀಸ್ ಆಗುತ್ತಿವೆ.
ಯಜಮಾನನ ಜೊತೆ ಹುಚ್ಚ ಮತ್ತೆ ಥಿಯೇಟರಿಗೆ ಬರುತ್ತಿದ್ದಾನೆ!

ಡಾ.ವಿಷ್ಣುವರ್ಧನ್ ಅವರು ದ್ವಿ ಪಾತ್ರದಲ್ಲಿ ನಟಿಸಿದ್ದ 'ಯಜಮಾನ' ಚಿತ್ರ ಸ್ಯಾಂಡಲ್ ವುಡ್ ನಲ್ಲಿ ಭಾರಿ ರೆಸ್ಪಾನ್ಸ್ ಗಿಟ್ಟಿಸಿಕೊಂಡಿತ್ತು. ಜೊತೆಗೆ ಕಿಚ್ಚ ಸುದೀಪ್ ರೇಖಾ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದ 'ಹುಚ್ಚ' ಚಿತ್ರ ಸುದೀಪ್ ಅವರನ್ನು ಎತ್ತಲೋ ಕೊಂಡೊಯ್ದಿತ್ತು.
ಶಶಿಕುಮಾರ್, ಅಭಿಜಿತ್, ಪ್ರೇಮಾ ಹಾಗೂ ಡಾ.ವಿಷ್ಣುವರ್ಧನ್ ಡಬಲ್ ರೋಲ್ ನಲ್ಲಿ ಮಿಂಚಿದ್ದ 'ಯಜಮಾನ' ಚಿತ್ರ ತಮಿಳಿನ 'ವಾನತ್ತೈ ಪೋಲ' ನ ರಿಮೇಕ್ ಆಗಿತ್ತು. ಇನ್ನು ಈ ಸಿನಿಮಾವನ್ನು 14 ವರ್ಷಗಳ ಹಿಂದೆ ಸುಮಾರು 3 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿದ್ದು, ಸಿನಿಮಾ ಸುಮಾರು 35 ಕೋಟಿ ರೂಪಾಯಿ ಗಳಿಸಿತ್ತು. ಜೊತೆಗೆ ಹುಬ್ಬಳ್ಳಿ ಹಾಗೂ ನಮ್ಮ ಬೆಂಗಳೂರಿನಲ್ಲಿ ಸಿಲ್ವರ್ ಜ್ಯುಬಿಲಿಯನ್ನು ಆಚರಿಸಿಕೊಂಡಿತ್ತು. ನಿರ್ಮಾಪಕ ರೆಹಮಾನ್ ಅವರು ಚಿತ್ರದ ರಿಮೇಕ್ ರೈಟ್ಸ್ ಪಡೆದುಕೊಳ್ಳಲು 12 ಲಕ್ಷ ವೆಚ್ಚವನ್ನು ಭರಿಸಿದ್ದರು.
ನಿರ್ದೇಶಕ ಓಂ ಪ್ರಕಾಶ್ ರಾವ್ ಆಕ್ಷನ್-ಕಟ್ ಹೇಳಿದ್ದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಗು ರೇಖಾ ಅಭಿನಯದ 'ಹುಚ್ಚ' ಚಿತ್ರ ತಮಿಳಿನ 'ಸೇತು'ವಿನ (ವಿಕ್ರಂ ನಟಿಸಿದ್ದರು) ರಿಮೇಕ್ ಆಗಿದ್ದು, ರಿಮೇಕ್ ಹಕ್ಕಿಗಾಗಿ ಹೆಚ್ಚಿನ ಹಣವನ್ನು ನಿರ್ಮಾಪಕರು ಪಾವತಿ ಮಾಡಿದ್ದರು. ತದನಂತರ ಚಿತ್ರ ತೆರೆ ಕಂಡು ಹಿಸ್ಟರಿ ಕ್ರಿಯೇಟ್ ಮಾಡಿರುವುದಲ್ಲದೇ ಸುಮಾರು 20 ಕೋಟಿ ಹಣವನ್ನು ಬಾಚಿಕೊಂಡಿತ್ತು.
Fresh Kannada

Fresh Kannada

No comments:

Post a Comment

Google+ Followers

Powered by Blogger.